ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಬುಧ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ – 06 – 20 am, ಸೂರ್ಯಾಸ್ತ – 06 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:36 – 14:10, ಗುಳಿಕ ಕಾಲ 11:02 – 12:36 ಯಮಗಂಡ ಕಾಲ 07:54 – 09:28
ಮೇಷ ರಾಶಿ :
ಇಂದು ಯಾರಾದರೂ ನಿಮ್ಮ ದೌರ್ಬಲ್ಯವನ್ನು ಅರಿತು ನಿಮ್ಮನ್ನು ಪೀಡಿಸಬಹುದು. ವ್ಯಾಪಾರವು ಇಂದು ಅಲ್ಪಪ್ರಮಾಣದ ಲಾಭವನ್ನು ಕೊಡಬಹುದು. ಅಶಿಸ್ತಿನಿಂದ ನೀವು ಇರಲಿದ್ದೀರಿ. ಯೋಜನೆಯನ್ನು ಸಿದ್ಧಪಡಿಸಲು ನೀವು ಅಧಿಕ ಶ್ರಮವನ್ನು ವಹಿಸಬೇಕಾದೀತು. ಹೇಳಾಬಾರದೆಂದು ಮುಚ್ಚಿಟ್ಟಿದ್ದನ್ನು ಸಂಗಾತಿಗೆ ತಿಳಿಸುವಿರಿ. ಉದ್ಯೋಗ ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಸಾಮಾನ್ಯ ವಿಚಾರವನ್ನು ದೊಡ್ಡದಾಗಿ ಬಿಂಬಿಸುವ ಅವಶ್ಯಕತೆ ಇಲ್ಲ. ಸರಿಯಾದುದನ್ನು ನೀವು ಆಯ್ಕೆ ಮಾಡಿಕೊಳ್ಳಲು ಕಷ್ಟವಾದೀತು. ಹಗುರವಾದಷ್ಟು ಬೆಲೆ ಹೆಚ್ಚು ಎಂದು ಮನವರಿಕೆಯಾಗಬಹುದು. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಿ. ದೊಡ್ಡದಾಗಿ ಏನನ್ನೋ ಯೋಚಿಸುವ ಬದಲು, ಚಿಕ್ಕದಾದರೂ ಚಿಕ್ಕವಾಗಿರಲಿ.
ವೃಷಭ ರಾಶಿ :
ನಿಮ್ಮ ಕೈಮೀರಿದ ಸಂಗತಿಗಳಿಗೆ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಿಲ್ಲ. ನಿಮ್ಮ ವಸ್ತುಗಳು ಕಾಣಿಸದೇ ಹೋದೀತು. ನೋವು ಇಂದು ಇದ್ದುದರಲ್ಲಿ ತೃಪ್ತಿಪಡಬೇಕಾದೀತು. ಎದುರು ಮಾತನಾಡುವುದು ನಿಮಗೆ ಇಂದು ಸರಿಕಾಣದು. ವ್ಯರ್ಥವಾದ ಕಾಲಹರಣದ ಬದಲು ಏನಾದರೂ ಯೋಗ್ಯವಾದುದನ್ನು ಮಾಡಬಹುದು. ಸೋಮಾರಿತನ ಅಧಿಕವಾಗಿ ಇರಬಹುದು. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ಬೇಕಾಗುವುದು. ಸಮಯದ ವ್ಯತ್ಯಾಸದಿಂದ ಇಂದಿನ ಜೀವನ ಅಸ್ತವ್ಯಸ್ತವಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲೂ ಬದಲಾವಣೆಯಾಗಬಹುದು. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮೆದುರೇ ನಿಮ್ಮವರನ್ನು ಅಲ್ಲಗಳೆಯಬಹುದು. ನಿಮ್ಮ ವರ್ತನೆಗಳು ಸ್ವಲ್ಪ ಮಾರ್ಗವನ್ನು ಬಿಡಬಹುದು. ಅತಿಥಿಗಳಿಂದ ನಿಮಗೆ ಪ್ರಶಂಸೆ ಸಿಗುವುದು. ಕೆಲವು ವಿಚಾರವನ್ನು ನಿಮ್ಮ ತಲೆಯಿಂದ ತೆಗೆದುಹಾಕಿ. ನಿಭಾಯಿಸುವ ದಾರ್ಢ್ಯವನ್ನು ಬೆಳೆಸಿಕೊಳ್ಳಿ. ವೃತ್ತಿಜೀವನದಲ್ಲಿ ಆದ ಅಚಾತುರ್ಯದಿಂದ ಭಯವಾಗುವುದು. ನಿಮ್ಮ ನಂಬಿಕೆಯನ್ನು ಯಾರಾದರೂ ಬದಲುಮಾಡಬಹುದು.
ಮಿಥುನ ರಾಶಿ :
ನಿಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ಕೋಪವು ಒಂದು ಮಿತಿಯಲ್ಲಿ ಇದ್ದರೆ ಚೆಂದ. ಕಾಲವು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬಹುದು. ಹೊಸ ಸುದ್ದಿಯು ನಿರೀಕ್ಷೆಯಲ್ಲಿ ನೀವು ಇರುವುದು ಬೇಡ. ಎಲ್ಲರ ನಡುವೆ ಇದ್ದರೂ ಒಂಟಿತನವು ನಿಮ್ಮನ್ನು ಕಾಡಬಹುದು. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ಭೌತಿಕ ಸುಖಗಳು ಹೆಚ್ಚಾಗುತ್ತವೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಅಲಭ್ಯ ವಸ್ತುವಿಗೆ ದುಃಖಿಸುವ ಅವಶ್ಯಕತೆ ಇಲ್ಲ. ಸಮಾಜದ ಕಾರ್ಯಗಳಲ್ಲಿ ನೀವು ತೊಡಗಿಕೊಳ್ಳುವವರಿದ್ದೀರಿ. ಅಧಿಕಾರವು ಕಾರ್ಯವನ್ನು ಮಾಡಲಿಕ್ಕಾಗಿ ಮಾತ್ರ ಎನ್ನುವುದು ಗೊತ್ತಿರಲಿ. ದೈವಾನುಗ್ರಹದ ಅವಶ್ಯಕತೆ ಬಹಳ ಇದೆ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ತಪ್ಪನ್ನು ಒಪ್ಪಿಕೊಂಡರೆ ಸಣ್ಣವರೇನು ಆಗುವುದಿಲ್ಲ. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.
ಕರ್ಕಾಟಕ ರಾಶಿ :
ಇಂದು ನೀವು ಅತಿಯಾದ ಆತುರದಲ್ಲಿ ಇರುವಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳನ್ನು ಯಾರಾದರೂ ಆಡುವು ಕೇಳಿಬರಬಹುದು. ಅನಾಮಧೇಯ ಕರೆಗಳು ನಿಮ್ಮನ್ನು ಹೂಡಿಕೆಗೆ ಪ್ರೇರಿಸಬಹುದು. ನಿಮ್ಮ ಪರಿಶ್ರಮದ್ದು ಮಾತ್ರ ನಿಮಗೆ ಸಿಗುವುದು. ಸಮಾಧಾನದ ಕ್ಷಣಗಳು ಎರಡೂ ಇರುತ್ತವೆ. ಇಂದು ನಿಮ್ಮ ನಿರ್ಧಾರಗಳಿಗೆ ತಂದೆಯ ಸಹಕಾರ ಸಿಗಲಿದೆ. ಬರವಣಿಗೆ ಮತ್ತು ಬೌದ್ಧಿಕ ಕೆಲಸಗಳಲ್ಲಿ ನಿರತತೆ ಹೆಚ್ಚಾಗಬಹುದು. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಸೌಂದರ್ಯವು ಇಂದು ಆಕರ್ಷಕವಾಗಿರುವುದು. ಎಂದಿನಂತೆ ನಿಮ್ಮ ಮಾನಸಿಕ ಸ್ಥಿತಿಯು ಇರದು. ವಿದ್ಯಾರ್ಥಿಗಳು ತಕ್ಕಮಟ್ಟಿನ ಪ್ರದರ್ಶನವನ್ನು ತೋರುವರು. ಸರ್ಕಾರಿ ಉದ್ಯೋಗಿಗಳು ಒತ್ತಡದಲ್ಲಿ ಇರುವರು. ನಿಮ್ಮ ಆಡಳಿತವು ಬೇಸರ ತರಿಸೀತು. ನಿಮ್ಮ ಮಾತುಗಳು ಇತರರಿಗೆ ಸುಳ್ಳೆನಿಸುವುದು. ಕೆಲವು ವಿಚಾರಗಳು ಬಹಳ ವಿಳಂಬವಾಗಿ ನಿಮ್ಮ ಗಮನಕ್ಕೆ ಬರಬಹುದು. ಯಾರನ್ನೂ ನಿಮ್ಮವರನ್ನಾಗಿ ಮನಸ್ಸಿನಿಂದ ಭಾವಿಸಲಾರಿರಿ. ಇದು ಬೇಸರವನ್ನು ಉಂಟುಮಾಡೀತು.
ಸಿಂಹ ರಾಶಿ :
ಇಂದು ಅತಿಯಾದ ಉದ್ವೇಗದಿಂದ ನಿಮ್ಮ ಮೇಲೆ ನಿಮಗೆ ನಿಯಂತ್ರಣ ಸಿಗದಾಗದು. ಇಂದಿನ ಕೆಲವು ಸಂದರ್ಭಗಳು ನಿಮಗೆ ಪಾಠವಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿವೆ. ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು. ನಿಮ್ಮ ಅಹಂಕಾರವು ನಿಮಗೆ ಸೋಲನ್ನು ತಂದುಕೊಡುವುದು. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಹೊರೆ ಹೆಚ್ಚಾಗಲಿದೆ. ನೀವು ಬೌದ್ಧಿಕ ಕೆಲಸದಿಂದ ಹಣವನ್ನು ಪಡೆಯುತ್ತೀರಿ. ಬಟ್ಟೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಖರ್ಚಿನ ಅಂದಾಜಿನ ಮೇಲೆ ಇಂದಿನ ವ್ಯವಹಾರವಿರಲಿ. ಹಿತಶತ್ರುಗಳ ಸಂಚು ಇಂದು ತಿಳಿಯಬಹುದು. ಉನ್ನತ ವ್ಯಾಸಂಗವು ನಿಮ್ಮ ಸ್ಥಾನವನ್ನು ಹೆಚ್ಚಿಸೀತು. ಆರ್ಥಿಕ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ವ್ಯಾವಹಾರಿಕವಸದ ಅಪವಾದಗಳು ಬರಬಹುದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ.
ಕನ್ಯಾ ರಾಶಿ :
ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ನಿಮ್ಮ ನಿರೀಕ್ಷೆಯು ಇಂದು ಸಫಲವಾದೀತು. ಕಛೇರಿಯ ಉಸ್ತುವಾರಿಗಳಾಗಿ ಎಲ್ಲವನ್ನೂ ಗಮನಿಸಿ ವರದಿ ನೀಡಲು ಹೇಳಬಹುದು. ನಿಮ್ಮ ಕಷ್ಟಗಳನ್ನು ನೀವು ಗಟ್ಟಿ ಮನಸ್ಸಿನಿಂದ ಎದುರಿಸುವಿರಿ. ವಾಹನ ಸವಾರಿ ಮಾಡುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಉದ್ಯೋಗ ಸಂದರ್ಶನ ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ವಿವಾಹ ಕಾರ್ಯವು ಬಹಳ ವಿಜೃಂಭಣೆಯಿಂದ ಮುಕ್ತಾಯಗೊಳ್ಳುವುದು. ಕೆಲವನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಬಹುದು. ಒಳ್ಳೆಯ ಭೋಜನವನ್ನು ಇಂದು ಮಾಡುವಿರಿ. ನಿಮ್ಮ ಊಹೆ ಪೂರ್ಣ ಸತ್ಯವಾಗದು. ಸಂಬಂಧಗಳನ್ನು ನೀವು ಬಿಟ್ಟುಕೊಡಬೇಕಾದೀತು. ಶ್ರಮವಹಿಸಿದ ಕಾರ್ಯಕ್ಕೆ ಫಲವು ಸಿಗಬಹುದಿ. ನಿಮ್ಮ ಒಳ ಮನಸ್ಸು ಹೇಳಿದಂತೆ ಕೇಳಿ. ನೆಮ್ಮದಿಗೆ ಅದೇ ದಾರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ.
ತುಲಾ ರಾಶಿ :
ಬಂಧುಗಳಿಂದ ಕೇಳಿಬರುವ ಚುಚ್ಚು ಮಾತು ನಿಮಗೆ ಹಿಡಿಸದು. ಒಬ್ಬರೇ ಆಲೋಚನೆಯಲ್ಲಿ ಮಗ್ನರಾಗಿ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿ ಓದಿದ್ದನ್ನು ಮರೆತುಕೊಳ್ಳವ ಸಾಧ್ಯತೆ ಇದೆ. ನೀವು ನಿಮ್ಮ ತಂದೆಯಿಂದ ಹಣವನ್ನು ಪಡೆಯಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಪೂರ್ಣ ವಿಶ್ವಾಸ ಇರುತ್ತದೆ. ಮನಸ್ಸು ವಿಚಲಿತವಾಗಬಹುದು. ಇಚ್ಛೆಗೆ ವಿರುದ್ಧವಾಗಿ ನೀವು ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ನಿಮಗೆ ಆಗಬೇಕಾದ ಕಾರ್ಯವನ್ನು ಯಾರಿಂದಲಾದರೂ ಮಾಡಿಸಿಕೊಳ್ಳುವಿರಿ. ನಿಮಗೆ ಮನೆಯಲ್ಲಿ ಯಾರ ಸಹಕಾರವೂ ಇಲ್ಲವೆಂದು ಮನಸ್ಸು ಸ್ವಲ್ಪ ಹಗುರಾಗಲಿದೆ. ಪೋಷಕರಿಗೆ ನೀವು ಸಹಾಯವನ್ನು ಮಾಡಲು ಬಯಸುವಿರಿ. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ಮನೋರಂಜನೆಗೆ ನಿಮಗೆ ಅವಕಾಶಗಳು ದೊರೆಯುವುದು.
ವೃಶ್ಚಿಕ ರಾಶಿ :
ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಅಧಿಕವಾಗುವುದು. ಇದ್ದಕ್ಕಿದ್ದಂತೆ ನೀವು ಪ್ರಚಾರವನ್ನು ಪಡೆದುಕೊಳ್ಳುವಿರಿ. ನಿಮ್ಮ ಯೋಚನೆಗಳು ನಿಮಗೆ ಪ್ರಸಿದ್ಧಿಯನ್ನು ತಂದುಕೊಟ್ಟಾವು. ಸ್ವತಂತ್ರದ ಕಾರ್ಯದಿಂದ ನಿಮಗೆ ಶ್ರೇಯಸ್ಸು ಸಿಗುವುದು. ಕುಟುಂಬದಲ್ಲಿ ಪರಸ್ಪರ ವಿವಾದಗಳ ಸಂದರ್ಭಗಳು ಉಂಟಾಗಬಹುದು. ಉದ್ಯೋಗದಲ್ಲಿ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಸಮಸ್ಯೆಗಳು ಮುಂದುವರಿಯುತ್ತವೆ. ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗುವುದು. ಹಣಕಾಸಿನ ವ್ಯವಹಾರಕ್ಕೆ ತಿಳಿದವರ ಸಹಾಯವನ್ನು ಪಡೆಯುವಿರಿ. ತಾಯಿಯ ಕಡೆಯಿಂದ ನಿಮಗೆ ಉಚಿತ ಸಲಹೆಗಳು ಬರಬಹುದು. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ತಮ್ಮ ಕಾರ್ಯಕ್ಕೆ ಸೇರಿಸಿಕೊಳ್ಳಬಹುದು. ನ್ಯಾಯದ ವಿಚಾರದಲ್ಲಿ ನೀವು ಸ್ವಲ್ಪ ಹಿನ್ನಡೆ ಪಡೆಯಬಹುದು. ದೇವತಾ ಕಾರ್ಯಕ್ಕೆ ಬೇಕಾದ ತಯಾರಿಯಲ್ಲಿ ಇರುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು.
ಧನು ರಾಶಿ :
ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡಿಕೊಳ್ಳುವರು. ಉನ್ನತ ಶಿಕ್ಷಣದಲ್ಲಿ ಕೆಲವು ಕಟ್ಟುಪಾಡುಗಳಿಗೆ ತಯಾರಿರಬೇಕಾದೀತು. ನಿಮ್ಮ ಉದ್ಯಮಕ್ಷೇತ್ರವನ್ನು ವಿಸ್ತರಿಸಲು ಇಷ್ಟಪಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ತಂದುಕೊಡುವಿರಿ. ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಆಸ್ತಿ ಆದಾಯದ ಮೂಲವಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಬರವಣಿಗೆಯಂತಹ ಬೌದ್ಧಿಕ ಕೆಲಸಗಳಿಗೆ ಉತ್ತಮ ವೇದಿಕೆ ಸಿಗಲಿದೆ. ಇನ್ನೊಬ್ಬರ ಮಾತಿನಿಂದ ನಿಮಗೆ ತೊಂದರೆಗಳು ಸೃಷ್ಟಿಯಾಗಬಹುದು. ಉದ್ಯೋಗಕ್ಕೆ ನೀವು ಕೊಟ್ಟ ಸಮಯವು ಸಫಲವಾಗಲಿದೆ. ನಿಮ್ಮ ಉತ್ಸಾಹವು ಇನ್ನೊಬ್ಬರ ಹೊಗಳಿಕೆಯಿಂದ ಬರಲಿದೆ. ದೇವಾಲಯದಲ್ಲಿ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ. ಸರ್ಜನಶೀಲ ವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ. ಒಳ್ಳೆಯದನ್ನು ಬೆಂಬಲಿಸಿ. ಸುಮ್ಮನೇ ಸುತ್ತಾಟ ಇಂದು ಬೇಡ. ನಕಾರಾತ್ಮಕ ಯೋಚನೆಯಿಂದ ನಿಮಗೆ ಕಷ್ಟವಾದೀತು.
ಮಕರ ರಾಶಿ :
ಸೌಂದರ್ಯಕ್ಕೆ ಪ್ರಾಧಾನ್ಯ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ಮಕ್ಕಳಿಂದ ನಿಮಗೆ ಅಪಮಾನದಂತೆ ಆಗಬಹುದು. ನಿಮಗೆ ಸಿಗುವುದಿಲ್ಲ ಎಂದುಕೊಂಡ ಸ್ಥಾನವು ನಿಮಗೆ ಸಿಗಬಹುದು. ಅದೃಷ್ಟ ನಿಮ್ಮ ಕಡೆಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಿ. ವಿದೇಶಕ್ಕೆ ಹೋಗುವ ಸಂಭವವಿದೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಅನಗತ್ಯ ಚರ್ಚೆಗಳನ್ನು ತಪ್ಪಿಸಲು ಪ್ರಯತ್ನಿಸಿ. ನಿಮ್ಮ ಬಗ್ಗೆ ಸುಳ್ಳು ಪ್ರಚಾರವನ್ನೂ ಮಾಡಬಹುದು. ಸರಿಯಾದ ಉತ್ತರವನ್ನು ನೀವು ಕೊಡಬೇಕಾದೀತು. ಸ್ಪರ್ಧಾತ್ಮಕ ಓದು ಶಿಸ್ತಿನಿಂದ ಸಾಗುವುದು. ನಿಮ್ಮ ಸೌಂದರ್ಯದ ಬಗ್ಗೆ ನಿಮಗೇ ಅಸೂಯೆ ಬರಬಹುದು. ಮೆಲ್ಲಗೆ ಮಾತನಾಡಿ. ಆಲಸ್ಯದ ಮನೋಭಾವವನ್ನು ನೀವು ಬಿಡಬೇಕಾದೀತು. ಕೋಪದಿಂದ ಕೆಲವನ್ನು ಕಳೆದುಕೊಳ್ಳಬೇಕಾಗಬಹುದು. ಉದ್ವೇಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳುವಿರಿ.
ಕುಂಭ ರಾಶಿ :
ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ನೀವೇ ಹೇಳಿದ ಸುಳ್ಳನ್ನು ಸತ್ತಮಾಡಬೇಕಾಗಬಹುದು. ಅನೇಕ ದಿನಗಳಿಂದ ಮಾಡುತ್ತಿದ್ದ ಕೆಲಸವನ್ನು ಇಂದು ಬಹಳ ವೇಗವಾಗಿ ಮುಗಿಸಿ ನಿರಾಳವಾಗುವಿರಿ. ಕೋಪದ ಕ್ಷಣಗಳು ಮತ್ತು ಸಮಾಧಾನದ ಕ್ಷಣಗಳು ಎರಡು ಇರುತ್ತವೆ. ವಾಹನ ಆನಂದದ ಲಾಭವನ್ನು ಪಡೆಯುತ್ತೀರಿ. ಸ್ನೇಹಿತರ ಬೆಂಬಲ ಇರುತ್ತದೆ. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಯಾವುದೂ ಸುಮ್ಮನೇ ನಿಮಗೆ ಸಿಗದು. ನಿಮ್ಮ ಬಗ್ಗೆ ಭಯವೂ ಹುಟ್ಟಬಹುದು. ನಿರ್ಭಾವುಕರಾಗಿ ವರ್ತಿಸುವುದು ನಿಮ್ಮವರಿಗೆ ಇಷ್ಟವಾಗದೇ ಹೋಗಬಹುದು. ನೀವು ಕೆಲಸವನ್ನು ಒಲ್ಲದ ಮನಸ್ಸಿನಿಂದ ಮಾಡುವಿರಿ. ಅಹಂಕಾರದ ಕಾರಣ ನೀವು ಕೆಲವರಿಂದ ದೂರಾಗಬೇಕಾಗುವುದು. ನಿರ್ಮೋಹವೇ ನಿಮಗೆ ಸಂಪತ್ತನ್ನು ದೊರಕಿಸಿಕೊಡಬಲ್ಲದು. ಮಿಶ್ರಫಲವನ್ನು ಪಡೆಯುವಿರಿ. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು.
ಮೀನ ರಾಶಿ :
ಈ ದಿನ ಯಾವುದೇ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡಕೂಡದು. ವೃತ್ತಿಗಾಗಿ ನೀವು ಹೆಚ್ಚು ಹುಡುಕಾಟ ಮಾಡಬೇಕಾಗುವುದು. ನಿಮ್ಮವರನ್ನು ನೀವು ಬಿಟ್ಟಕೊಡುವಿರಿ. ಅವರು ಸ್ವತಂತ್ರವಾದಷ್ಟೂ ನೀವು ನೆಮ್ಮದಿಯ ಪಡೆಯುವಿರಿ. ವ್ಯಾಪರವು ಸ್ವಲ್ಪಮಟ್ಟಿಗೆ ಸುಧಾರಿಸುವುದು. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಸಿದ್ಧಾಂತದಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಇಂದು ನಿಮ್ಮ ವಸ್ತುವು ಬದಲಾವಣೆಯಾಗುವ ಸಾಧ್ಯತೆ ಇದೆ. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಅನಂತರ ಇನ್ನೊಬ್ಬರ ಕೆಲಸದತ್ತ ಗಮನಕೊಡಿ. ಮಾಧ್ಯಮ ಕ್ಷೇತ್ರವು ನಿನಗೆ ಸದ್ಯ ಲಾಭದಾಯಕ ಆಗಲಿದೆ. ಯಶಸ್ಸನ್ನೂ ಅದು ತಂದುಕೊಡಬಹುದು. ಆತ್ಮವಿಶ್ವಾಸವನ್ನು ನೀವೇ ಕೊಲ್ಲುವಿರಿ. ವನ್ನು ದಾಂಪತ್ಯವನ್ನು ಸುಖವಾಗಿಡಲು ಉಡುಗೊರೆಯನ್ನು ಕೊಡಬೇಕಾಗಬಹದು. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು.
ಕೃಪೆ: TV9 Kannada
Views: 46