ಚಿತ್ರದುರ್ಗ ಆ. 25
ಜನನ ಹಾಗೂ ಸಾವು ನಮ್ಮ ಕೈಯಲ್ಲಿ ಇಲ್ಲ ಅದು ಭಗವಂತನ ಕೈಯಲ್ಲಿ ಇದೆ. ಆದರೆ ಇದರ ಮಧ್ಯದಲ್ಲಿನ ಬದುಕು ನಮ್ಮ ಕೈಯಲ್ಲಿದೆ. ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಿದೆ, ನಮ್ಮ ಬದುಕು ಬೇರೆಯವರಿಗೆ ಮಾದರಿ, ಮಾರ್ಗದರ್ಶನವಾಗಬೇಕಿದೆ ಎಂದು ಜಗಲೂರಿನ ಕಣ್ವಕಪ್ಪೆ ಗವಿಮಠದ ತಪೋಕ್ಷೇತ್ರದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರದ ಗ್ರಾಮದಲ್ಲಿ ಸೋಮವಾರ ನಡೆದ ದಿ.ಅಭೀಷೇಕ ಎಸ್.ಪಟೇಲ್‍ರವರ ಪುಣ್ಯಸ್ಮರಣೆಯ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವುಗಳ ಮಧ್ಯದಲ್ಲಿ ಉತ್ತಮವಾದ ಜೀವನವನ್ನು ನಡೆಸಬೇಕಿದೆ. ಜನನವನ್ನು ನಾವು ಇಲ್ಲಿಯೇ ಆಗಬೇಕೆಂದು ಬಯಸುವುದಿಲ್ಲ ಇಲ್ಲಿ ಜಾತಿ, ಮತ, ಶ್ರೀಮಂತ, ಬಡವ, ನೋಡದೇ ಜನನವಾಗುತ್ತದೆ. ಇದೇ ರೀತಿ ಮರಣವೂ ಸಹಾ ಎಲ್ಲಿ ಬೇಕಾದರೂ ಅಲ್ಲಿ ನಡೆಯುತ್ತದೆ. ಇದಕ್ಕೆ ಸಮಯ ಸಂದರ್ಭ ಇಲ್ಲದೆ ನಡೆಯುತ್ತದೆ. ಮೃತ್ಯು ಯಾವಾಗ ಸಮಯದಲ್ಲಿಯಾದರೂ ಸಹಾ ಹೇಗೇ ಬೇಕಾದರೂ ಸಹಾ ಸಂಭವಿಸಬಹುದಾಗಿದೆ. ಜನನ-ಮರಣ ನಮ್ಮ ಕೈಯಲ್ಲಿ ಇಲ್ಲ ಆದರೆ ಬದುಕು ಮಾತ್ರ ನಮ್ಮ ಕೈಯಲ್ಲಿ ಇದೆ ಇದನ್ನು ಸುಂದರವಾಗಿ ರೂಪಿಸಿಕೊಳ್ಳಬೇಕಿದೆ ಎಂದರು.

ನಮ್ಮಲ್ಲಿ ಸಂಪತ್ ಅಧಿಕಾರ ಬಂದಾಗ ಅದನ್ನು ಸರಿಯಾದ ರೀತಿಯಲ್ಲಿ ಸದುಯೋಗವನ್ನು ಮಾಡಿ ಕೊಳ್ಳಬೇಕಿದೆ ಈ ಸಮಯದಲ್ಲಿ ಬಡವರಿಗೆ ದಾನವನ್ನು ಮಾಡುವುದರ ಮೂಲಕ ಬೇರೆಯವರಿಗೆ ದಾರಿ ದೀಪವಾಗಬೇಕಿದೆ. ಇದರ ಮೂಲಕ ಸಮಾಜ ಸೇವೆಯನ್ನು ಮಾಡಬೇಕಿದೆ. ತಂದೆ-ತಾಯಿ, ಗುರುಗಳಿಗೆ ಗೌರವವನ್ನು ನೀಡಬೇಕಿದೆ. ನಮ್ಮಲ್ಲಿ ಸತ್ತವರಲ್ಲಿ ವಿವಿಧ ರೀತಿಯಲ್ಲಿ ಇದ್ದಾರೆ, ಸತ್ತವರು ಇವರ ನೆನಪಿ ಅವರ ಬಂಧುಗಳಿಗೆ ಮಾತ್ರ, ಸತ್ತು ಬದುಕಿದವರು ಇವರಲ್ಲಿ ಆಗಲಿದಾಗ ಮಾತ್ರ ಅವರ ನೆನಪು ಇರುತ್ತದೆ, ಬದುಕಿ ಸತ್ತವರು ಇವರು ಸಮಾಜಕ್ಕೆ ದೇಶಕ್ಕೆ ಬೇಕಾದವರು ಇವರು ಸತ್ತ ಮೇಲೂ ಸಹಾ ಜನತೆ ನೆನೆಯುತ್ತಾರೆ, ಇಂತಹರು ದೇಶದಲ್ಲಿ ಹೆಚ್ಚಾಗಬೇಕಿದೆ ಎಂದು ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಪುತ್ರ ಶೋಕ ನಿರಂತರ ಇದು ನಮ್ಮ ಜೀವ ಇರುವವರೆಗೂ ಕಾಡುತ್ತದೆ. ಶಿವಪ್ಪರವರು ತಮ್ಮ ಮಗನ ಸಾವನ್ನು ಪಡೆಯುವ ಸಲುವಾಗಿ ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪನೆ ಮಾಡುವುದರ ಮೂಲಕ ಜನತೆಗೆ ಸಹಾಯವನ್ನು ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ತಮ್ಮ ಸಾವಿನಲ್ಲಿ ಸಹಾ ಅಭೀಷೇಕ ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಅಭೀಷೇಕ ರವರು ನಿದನರಾಗಿ ಇಂದಿಗೆ ಒಂದು ವರ್ಷವಾಗಿದೆ, ಇವರ ಜನನದ ನಂತರ ಶಿವಪ್ಪರವರಿಗೆ ಬದುಕಿನಲ್ಲಿ ಉತ್ತಮವಾಗಿದೆ, ಅವರ ನೆನಪಿನಲ್ಲಿ ವರ್ಷಚಾರಣೆಯನ್ನು ಮಾಡುವುದರ ಮೂಲಕ ಬೇರೆಯವರಿಗೆ ಸಹಾಯವನ್ನು ಮಾಡುವುದರ ಮೂಲಕ ಮಗನ ಸಾವನ್ನು ಮರೆಯುತ್ತಿದ್ದಾರೆ. ತಮ್ಮಲ್ಲಿ ಕೆಲಸ ಮಾಡುವವರಿಗೆ ಸಹಾಯವನ್ನು ಮಾಡುವುದ್ದಲ್ಲದೆ ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಸರ್ಕಾರದ ಕೆಲಸವನ್ನು ಇವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಮಾತನಾಡಿ, ಶಿವಪ್ಪರವರು ತಮ್ಮ ಮಗನ ಸಾವನ್ನು ಮರೆಯು ವುದಕ್ಕಾಗಿ ಪ್ರತಿಷ್ಠಾನವನ್ನು ಸ್ಥಾಪನೆ ಮಾಡುವುದರ ಮೂಲಕ ಬಡವರಿಗೆ ಸಹಾಯವನ್ನು ಮಾಡುತ್ತಿದ್ದಾರೆ ಇದು ಉತ್ತಮವಾದ ಕಾರ್ಯವಾಗಿದೆ. ಇವರ ಕಾರ್ಯ ಬೇರೆಯವರಿಗೆ ಅದರ್ಶವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಪಟೇಲ್ ರುದ್ರಪ್ಪ ಬಿಜೆಪಿ ಮುಖಂಡರಾದ ಡಾ.ಸಿದ್ದಾರ್ಥ ಗುಡಾರ್ಪಿ, ಲಿಂಗಮೂರ್ತಿ, ಅನಿತ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೇತ್ರದಾನದ ಬಗ್ಗೆ ಶ್ರೀಮತಿ ಗಾಯತ್ರಿ ಶಿವರಾಂ, ರಕ್ತದಾನದ ಬಗ್ಗೆ ಡಾ.ಯಾನ್ಸಿ, ಹಾಗೂ ರೋಟರಿ ಸೇವಾ ಭವನದ ಬಗ್ಗೆ ಮಧುಪ್ರಸಾದ್ ಮಾಹಿತಿ ನೀಡಿದರು. ವಿಜಯವಾಣಿವತಿಯಿಂದ ಇತ್ತೀಚೆಗೆ ನಡೆದ ವಿಜಯರತ್ನ ಕಾರ್ಯಕ್ರಮದ ಮಾಹಿತಿಯನ್ನು ಬಿಡುಗಡೆ ಮಾಡಲಾಯಿತು.
ಕಣ್ವಕಪ್ಪೆ ಗವಿಮಠದ ತಪೋಕ್ಷೇತ್ರದ ಪಂಡಿತರಿಂದ ವೇಧಘೋಷ, ತೋಟಪ್ಪ ಉತ್ತಂಗಿಯವರಿಂದ ಪ್ರಾರ್ಥನೆ, ಶಿವಕುಮಾರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರೆ, ಮಂಜುನಾಥ್ ವಂದಿಸಿದರು, ಹುರಳಿ ಬಸವರಾಜು ಕಾರ್ಯಕ್ರಮ ನಿರೂಪಿಸಿದರು. ಇದೇ ಸಮಯದಲ್ಲಿ ದಿ.ಅಭೀಷೇಕ ಎಸ್.ಪಟೇಲ್‍ರವರ ಪುಣ್ಯಸ್ಮರಣೆಯ ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ನೂರಾರು ಜನ ತಮ್ಮ ಆರೋಗ್ಯದ ಬಗ್ಗೆ ತಪಾಸಣೆಯನ್ನು ಮಾಡಿಸಿಕೊಂಡರು ಅಗತ್ಯ ಇರುವವರೆಗೆ ಔಷಧಿಗಳನ್ನು ಸಹಾ ವಿತರಣೆ ಮಾಡಲಾಯಿತು.
Views: 8