ಚಿತ್ರದುರ್ಗ ಆ. 31
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಇಂದಿನ ದಿನದಲ್ಲಿ ಕ್ರೀಡೆಯ ಗುಣಮಟ್ಟ ಕುಸಿಯುತ್ತಿದೆ, ಇದರ ಬಗ್ಗೆ ಸರ್ಕಾರಗಳು ಗಮನ ನೀಡಬೇಕಿದೆ, ಕ್ರೀಡಾಪಟುಗಳಿಗೆ
ಉತ್ತಮವಾದ ಪ್ರೋತ್ಸಾಹ ನೀಡುವುದರ ಮೂಲಕ ಕ್ರೀಡೆಯನ್ನು ಉನ್ನತೀಕರಿಸಬೇಕಿದೆ ಎಂದು ಅಂತರಾಷ್ಟ್ರೀಯ ಪದಕ ವಿಜೇತ
ಕ್ರೀಡಾಪಟು, ಚಿತ್ರದುರ್ಗ ಪುಟ್‍ಬಾಲ್ ಕ್ಲಬ್‍ನ ಉಪಾಧ್ಯಕ್ಷರಾದ ಎನ.ಡಿ.ಕುಮಾರ್ ತಿಳಿಸಿದರು.

ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನ್ಯಾಷನಲ್ ಪುಟ್ ಬಾಲ್ ಫೆಡರೇಷನ್,
ಸಿ.ಎಫ್.ಸಿವತಿಯಿಂದ ನಡೆದ 1 ರಿಂದ 10ನೇ ತರಗತಿಯೊಳಗಿನ ಮಕ್ಕಳ ಪುಟ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ
ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಪೋಷಕರಾದವರು ಮಕ್ಕಳಿಗೆ ಬರೀ
ಅಂಕಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ ಕ್ರೀಡೆಗೆ ಹೆಚ್ಚಿನ ಒಲವನ್ನು ತೋರಿಸುತ್ತಿಲ್ಲ, ತಮ್ಮ ಮಗು ಬರೀ ಮಾನಸಿಕವಾಗಿ
ಸದೃಢರಾಗಿದ್ದರೆ ಸಾಲದು ದೈಹಿಕವಾಗಿಯೂ ಸಹಾ ಸಬಲರಾಗಿ ಇರಬೇಕಿದೆ ಇದಕ್ಕೆ ಕ್ರೀಡೆ ಸಹಕಾರಿಯಾಗುತ್ತದೆ, ಇದರಿಂದ ತಮ್ಮ
ಮಕ್ಕಳನ್ನು ಪ್ರತಿ ದಿನ ಕ್ರೀಡಾಂಗಣಕ್ಕೆ ಕಳುಹಿಸಿ ಎಂದು ತಿಳಿಸಿದರು.

ನಮ್ಮನ್ನಾಳುವ ಸರ್ಕಾರಗಳು ಸಹಾ ಕ್ರೀಡೆಗೆ ಹೆಚ್ಚಿನ ಉತ್ತೇಜನವನ್ನು ನೀಡಬೇಕಿದೆ. ಸರ್ಕಾರಗಳು ಬರೀ ಒಂದೇ ಕ್ರೀಡೆಗೆ ಹೆಚ್ಚಿನ
ಒತ್ತನ್ನು ನೀಡುವುದಕ್ಕಿಂತ ಎಲ್ಲಾ ಕ್ರೀಡೆಗೂ ಸಹಾ ಪ್ರಾತಿನಿಧ್ಯವನ್ನು ನೀಡಬೇಕಿದೆ ಆಗ ಮಾತ್ರ ಎಲ್ಲಾ ಕ್ರೀಡೆಗಳು ಬೆಳೆಯಲು
ಸಾಧ್ಯವಿದೆ. ಇದರೊಂದಿಗೆ ಕ್ರೀಡಾಪಟುಗಳಿಗೂ ಸಹಾ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ ಎಂದ ಅವರು, ಎಲ್ಲಾ ಆಟಗಳಿಗೂ
ಪುಟ್‍ಬಾಲ್ ಆಟ ತಾಯಿ ಇದ್ದಂತೆ, ಕ್ರೀಡೆಯಲ್ಲಿ ಜಾತಿ, ಧರ್ಮ, ಜನಾಂಗ ಸಮುದಾಯ ಎಂಬ ಬೇಧ ಬರುವುದಿಲ್ಲ, ಇಲ್ಲಿ ಆಟವನ್ನು
ಆಡುವುದು ಮಾತ್ರವೇ ಸಾಧ್ಯವಾಗುತ್ತದೆ ತಮ್ಮ ತಂಡವನ್ನು ಗೆಲ್ಲಿಸುವುದು ಮಾತ್ರವೇ ಮುಖ್ಯವಾಗುತ್ತದೆ. ತರಬೇತಿಯನ್ನು
ಪಡೆದವರು ಮುಂದೆ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯವಿದೆ ಎಂದ ಅವರು, ಸರ್ಕಾರ ಹಣವನ್ನು ಕೂಟ್ಟು ಆಟವನ್ನು ಆಡುವಂತೆ
ಹೇಳುತ್ತಿದೆ ಆದರೆ ಆಟವನ್ನು ಆಡುವವರಿಗೆ ಹಣವನ್ನು ನೀಡುವಂತೆ ಎನ್.ಡಿ.ಕುಮಾರ್ ಮನವಿ ಮಾಡಿದರು.

ಹಿರಿಯ ಕ್ರೀಡಾಪಟು ನಿವೃತ್ತ ಮುಖ್ಯೋಪಾಧ್ಯಯರಾದ ಮಂಜುನಾಥ್ ಮಾತನಾಡಿ, ಕ್ರೀಡೆಯನ್ನು ಬರೀ ಪಂದ್ಯಾವಳಿ ಬಂದಾಗ
ಮಾತ್ರವೇ ಅಭ್ಯಾಸವನ್ನು ಮಾಡದೇ ನಿರಂತರವಾಗಿ ಅಭ್ಯಾಸವನ್ನು ಮಾಡುವುದರ ಮೂಲಕ ಉತ್ತಮವಾದ ಕ್ರೀಡಾಪಟುವಾಗಲು
ಸಾಧ್ಯವಿದೆ. ಕ್ರೀಡೆಯಲ್ಲಿ ಒಂದು ತಂಡವನ್ನು ಗೆಲಿಸುವ ಜವಾಬ್ದಾರಿ ತಂಡದಲ್ಲಿನ ಎಲ್ಲರ ಮೇಲಿದೆ. ಮಕ್ಕಳನ್ನು ಬರೀ ಅಂಕಗಳಿಸುವ
ಯಂತ್ರದ ರೀತಿಯಲ್ಲಿ ಮಾಡದೇ ಕ್ರೀಡೆಯಲ್ಲಿಯೂ ಸಹಾ ಭಾಗವಹಿಸುವಂತೆ ಪೋಷಕರು ಮಾಡಬೇಕಿದೆ. ನಾನು ಸಹಾ ನನ್ನ
ವೃತ್ತಿಯಲ್ಲಿ ಹಲವಾರು ಕ್ರೀಡಾಪಟುಗಳನ್ನು ತಯಾರು ಮಾಡಿದ್ದೇನೆ, ಹಲವಾರು ಕ್ರೀಡಾಪಟುಗಳಿಗೆ ಪ್ರೋತ್ಸಾಹವನ್ನು ನೀಡಿದೇನೆ,
ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಸರ್ಕಾರ ಉತ್ತೇಜನವನ್ನು ನೀಡಬೇಕಿದೆ. ಇದರಿಂದ ಮತ್ತಷ್ಟು ಜನ ಕ್ರೀಡೆಯತ್ತ ಬರಲು ಸಾಧ್ಯವಿದೆ
ಎಂದರು.
ಈ ಪಂದ್ಯಾವಳಿಯಲ್ಲಿ 1 ರಿಂದ 4ನೇ ತರಗತಿಯಲ್ಲಿ ಪ್ರಥಮ ಸ್ಥಾನ ಇಂಡಿಯನ್ ಇಂಟರ್ ನ್ಯಾಷನಲ್ ದ್ವಿತೀಯ ಸ್ಥಾನವನ್ನು ಡಾನ್
ಬಾಸ್ಕೋ ಸ್ಟೇಟ್ ಪಡೆದುಕೊಂಡರೆ, 5 ರಿಂದ 7ನೇ ತರಗತಿಯಲ್ಲಿ ಪ್ರಥಮ ಸ್ಥಾನ ಡಾನ್ ಬಾಸ್ಕೋ ಕನ್ನಡ ಶಾಲೆ, ದ್ವಿತೀಯ
ಸ್ಥಾನವನ್ನು ಡಾನ್ ಬ್ಯಾಸ್ಕೋ ಸ್ಟೇಟ್ ಪಡೆದರೆ 8 ರಿಂದ 10ನೇ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಇಂಡಿಯನ್ ಇಂಟರ್
ನ್ಯಾಷನಲ್ ಶಾಲೆ ಪಡೆದರೆ ದ್ವೀತಿಯ ಸ್ಥಾನವನ್ನು ಡಾನ್ ಬಾಸ್ಕೋ ಶಾಲೆ ಪಡೆದು ಕೊಂಡಿದೆ.
ಕಾರ್ಯಕ್ರಮದಲ್ಲಿ ಮಹಿಬುಲ್ಲಾ, ಸಾಧಿಕ್, ನವಾಜ್, ಅಕ್ರಂ, ನಾರಾಯಣ, ಕಾರ್ಯಪ್ಪ ಸೇರಿದಂತೆ ರಾಮಪ್ಪ, ವಿನ್ಸಟ್ ಸೇರಿದಂತೆ
ಇತರರು ಭಾಗವಹಿಸಿದ್ದರು.
Views: 16