ಡಿಕೆ ಶಿವಕುಮಾರ್ ಹೇಳಿಕೆಗೆ ಆಪ್‌ ನಾಯಕ ಬಿಇ ಜಗದೀಶ್ ತೀವ್ರ ಆಕ್ರೋಶ: ಚಾಮುಂಡಿ ಬೆಟ್ಟ ಹಿಂದುಗಳ ಧಾರ್ಮಿಕ ಕೇಂದ್ರ.

ಪೋಟೋ ಮತ್ತು ವರದಿ ವೇದಮೂರ್ತಿ ಭೀಮ ಸಮುದ್ರ

ಬಿಇ ಜಗದೀಶ್ ಚಿತ್ರದುರ್ಗ ಜಿಲ್ಲಾ A.A.P ಅಧ್ಯಕ್ಷರು ಮಾತನಾಡಿ ನಾನು ನನ್ನ ಹಿಂದೂ ಧರ್ಮವನ್ನ ಪೂಜಿಸುತ್ತೇನೆ ಬೇರೆ ಧರ್ಮವನ್ನು ಗೌರವಿಸುತ್ತೇನೆ ಆದರೆ ಇತ್ತೀಚಿಗೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟವನ್ನು ಹಿಂದುಗಳು ಅಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ ದೇಶಕ್ಕೆ ಸ್ವತಂತ್ರ ಬಂದಮೇಲೆ ಭಾರತ ಹಾಗೂ ಪಾಕಿಸ್ತಾನವನ್ನು ಬೇರೆ ಮಾಡಲಾಗಿದೆ ರಾಷ್ಟ್ರಮಟ್ಟದಲ್ಲಿ ಭಾರತ ದೇಶವನ್ನು ಹಿಂದುಗಳ ರಾಷ್ಟ್ರ ಎಂದು ಕರೆಯುತ್ತಾರೆ ಆದರೆ ಇವರು ನೀಡಿರುವ ಹೇಳಿಕೆ ಸಮಂಜಸವಲ್ಲ
ನಮ್ಮ ರಾಜ್ಯದ ಮೈಸೂರು ಅಲ್ಲಿರುವ ಚಾಮುಂಡಿಬೆಟ್ಟವು ಇವರಿಗೆ ಇಟಲಿಗೆ ಸೇರಿದ್ದು ಎಂದುಕೊಂಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ನಮ್ಮ ಪುರಾತನ ಕಾಲದಿಂದಲೂ ರಾಜ ಮನೆತನಗಳು ಹಾಗೂ ಚಾಮುಂಡಿ ಬೆಟ್ಟ ನಮಗೆ ಹಿಂದುಗಳಿಗೆ ಧಾರ್ಮಿಕ ಕೇಂದ್ರವಾಗಿದೆ ಚಾಮುಂಡಿ ತಾಯಿಯನ್ನು ಹಾಗೂ ದಸರವನ್ನು ನೋಡಲು ಹೊರರಾಜ್ಯ ವಿದೇಶಗಳಿಂದ ಲಕ್ಷಗಟ್ಟಲೆ ಜನ ಬರುತ್ತಾರೆ ಆದರೆ ಇವರ ಆಡಿರುವ ಮಾತು ಹಿಂದುಗಳಿಗೆ ಹಾಗೂ ಕರ್ನಾಟಕ ರಾಜ್ಯ ಜನತೆಗೆ ಹಿಂದುಗಳಿಗೆ ಮನಸ್ಸಿಗೆ ನೋವಾಗಿದೆ

ಒಬ್ಬ ರಾಜ್ಯದ ಉಪ ಮುಖ್ಯಮಂತ್ರಿ ಆಗಿ ಇತರ ಹೇಳಿಕೆ ನೀಡುವುದು ವಿಷಾದಕರ ಸಂಗತಿ ರಾಜಕೀಯದ ಏನು ಬೇಕಾದರೂ ಮಾತನಾಡುವ ಬಾಯಿ ಚಪಲ ವಾಗಿದೆ ದೇಶದ ಬಗ್ಗೆ ಭಕ್ತಿರುವ ಜಮೀರ್ ಅಹ್ಮದ್ ರವರು ಮೋದಿ ಅವರು ಒಪ್ಪಿದರೆ ನಾನು ಯುದ್ಧಕ್ಕೆ ಹೋಗುತ್ತೇನೆಂದು ಹೇಳಿದರು ಜಮೀರ್ ಅಹ್ಮದ್ ಗಿರುವ ದೇಶಭಕ್ತಿಯು ಕೂಡ ಇವರಿಲ್ಲ

ವಿಧಾನಸೌಧದಲ್ಲಿ ರಾಜ್ಯಸಭೆ ಹಾಗೂ ವಿಧಾನಸಭೆ ಎಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರುಗಳು ಹಿಂದುಗಳಿಗೆ ನೋವಾಗುವ ರೀತಿ ನಡೆದುಕೊಳ್ಳುತ್ತಿದ್ದಾರೆ ರಾಜ್ಯದ ಜನತೆಗೆ ಎಲೆಕ್ಷನ್ ಬಂದಾಗ ಒಂದಿಷ್ಟು ಹಣವನ್ನು ನೀಡಿದರೆ ಮತ ನೀಡುತ್ತಾರೆ ಎಂಬ ದುರಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಧರ್ಮ ಹಾಗೂ ಸಮಾಜದ ಮಧ್ಯ ಮೋಸದ ಬಲೆಯನ್ನು ಹಾಕುತ್ತಿದ್ದಾರೆ ಈ ಮೋಸದ ಬೆಲೆಯಿಂದ ಸಾರ್ವಜನಿಕರು ತಪ್ಪಿಸಿಕೊಳ್ಳಲಾಗುತ್ತಿಲ್ಲ

ರಾಜ್ಯದಲ್ಲಿರುವ ಜನತೆಯ ಬಗ್ಗೆ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಾರೂ ಕೂಡ ತಲೆ ಆರ್ಥಿಕವಾಗಿ ಹಿಂದುಳಿದವರ ಅವರ ವಿದ್ಯಾಭ್ಯಾಸಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ ಇವರ ನೀಡಿರುವ ಗ್ಯಾರಂಟಿ ಬೇಕು ಬೇಡ ಎನ್ನುವ ಮಟ್ಟಿಗೆ ಇದೆ ಆದರೆ ಈ ರಾಜ್ಯದಲ್ಲಿ ಹಳ್ಳಿಜನರು ಎಲ್ಲರೂ ಒಂದೇ ಎಂಬ ಭಾವನೆಗಳಿಂದದ್ದಾರೆ ಜೀವನ ಸಾಗಿಸುತ್ತಿದ್ದಾರೆಆದರೆ ರಾಜ್ಯದ ಜನತೆ ಇಂಥ ರಾಜ್ಯ ರಾಜಕೀಯ ಪಕ್ಷಗಳನ್ನು ದೂರ ಇಟ್ಟು ಮತದಾನ ಮಾಡಬೇಕು ಇಂಥವರಿಂದ ನಮ್ಮ ದೇಶಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ತೊಂದರೆ ತಪ್ಪಿದ್ದಲ್ಲ ದಯಮಾಡಿ ಮುಂದಿನ ದಿನಗಳಲ್ಲಿ ಇಂತಹ ಮಾತುಗಳನ್ನು ಯಾರೂ ಕೂಡ ಆಡಬಾರದು ಉಪಮುಖ್ಯಮಂತ್ರಿಗಳು ಹಾಡಿರುವ ಮಾತು ರಾಜ್ಯದ ಜನತೆ ಹಾಗೂ ನಮ್ಮ ದೇಶದ ಹಿಂದುಗಳಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ನಮ್ಮ ಪಕ್ಷದ ವತಿಯಿಂದ ನಾವು ರಾಜ್ಯದ್ಯಂತ ಧರಣಿ ನಡೆಸಲು ಮುಂದಾಗುತ್ತೇವೆ ಎಂದು ತಿಳಿಸಿದರು

Views: 39

Leave a Reply

Your email address will not be published. Required fields are marked *