ಚಿತ್ರದುರ್ಗದಲ್ಲಿ 40ನೇ ರಾಷ್ಟ್ರೀಯ ನೇತ್ರದಾನ ಪಕ್ಷಿಕ – ಕಣ್ಣಿನ ದಾನದ ಮಹತ್ವ ಸಾರಿದ ವೈದ್ಯರು.

ಚಿತ್ರದುರ್ಗ ಸೆ. 3

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕಣ್ಣುಗಳನ್ನು ದಾನ ಮಾಡಿದರೆ ಅದರಿಂದ ಮತ್ತೊಬ್ಬ ವ್ಯಕ್ತಿಗೆ ದೃಷ್ಟಿ ಸಿಗುತ್ತದೆ ಕಣ್ಣುಗಳು ಅತ್ಯಮೂಲ್ಯ ಅವುಗಳನ್ನು ಕಾಪಾಡಿಕೊಳ್ಳಿ ಎಂದು ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾಕ್ಟರ್ ಅಶ್ವಿನಿ ತಿಳಿಸಿದರು 40ನೇ ರಾಷ್ಟ್ರೀಯ ನೇತ್ರದಾನ ಪಕ್ಷಿಕ 2025 ಸಪ್ತಾಹದ ಅಂಗವಾಗಿ ಎಸ್‍ಜೆಎಂ ಕಾನೂನು ಮಹಾ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು ಪ್ರತಿ ವರ್ಷ ಲಕ್ಷಗಟ್ಟಲೆ ಜನ ಮರಣ ಹೊಂದು ತ್ತಾರೆ ಆದರೆ ಅವರ ಕಣ್ಣುಗಳು ಅತಿ ಮುಖ್ಯವಾಗಿರುತ್ತವೆ ಅವುಗಳನ್ನು ಅಂತ್ಯಸಂಸ್ಕಾರ ಮಾಡುವ ಸಂದರ್ಭ ದಲ್ಲಿ ಬೇರೆಯವರಿಗೆ ದಾನ ಮಾಡಿದರೆ ಅದರಿಂದ ಉಪಯೋಗವಾಗುತ್ತದೆ ಇದರ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವುದು ಅತೀ ಅಗತ್ಯ ಈ ರೀತಿ ಕಣ್ಣನ್ನು ವ್ಯಕ್ತಿಗಳು ತಾನು ಜೀವಂತ ಇದ್ದಾಗಲೇ ದಾನವನ್ನು ಮಾಡುವ ವಾಗ್ದಾನ ಮಾಡಬಹುದಾಗಿದೆ ಇದಾದ ನಂತರ ಮರಣ ಹೊಂದಿದ ಆರು ಗಂಟೆಯ ಒಳಗೆ ಮೃತರ ಸಂಬಂಧಿಕರು ದಾನ ಮಾಡಲು ಇಚ್ಛಿಸಿದಲ್ಲಿ ಅದನ್ನು ವ್ಯವಸ್ಥಿತವಾಗಿ ಪಡೆದುಕೊಂಡು ದೃಷ್ಟಿ ಹೀನರಿಗೆ ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಲಾಗುತ್ತದೆ ಇದರಿಂದ ಒಬ್ಬ ವ್ಯಕ್ತಿಯ ಬಾಳಿಗೆ ಬೆಳಕಾಗುತ್ತದೆ ಎಂದು ತಿಳಿಸಿದರು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್‍ನ ಅಧ್ಯಕ್ಷರಾದ ಎಸ್ ವೀರೇಶ್ ಮಾತನಾಡಿ ಕಣ್ಣು ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಮುಂದಿನ ದಿನದಲ್ಲಿ ಲಭ್ಯವಿದೆ ಅದನ್ನು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದರು. ರೋಟರಿಯನ್ ಕನಕರಾಜ್ ಮಾತನಾಡಿ ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಎಸ್.ಆರ್.ಬಿ.ಎಂ.ಎಸ್ ವತಯಿಂದ ಸೇವಾ ಕೇಂದ್ರವಾದ ಡಯಾಲಿಸಿಸ್ ಸೇವೆಯನ್ನು ಆರಂಭಿಸಲಾಗಿದೆ. ಇಲ್ಲಿ ಕಡಿಮೆ ದರದಲ್ಲಿ ಹಾಗೂ ಬಡವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಇದರ ಉಪಯೋಗವನ್ನು ಪಡೆಯಿರಿ ಎಂದು ತಿಳಿಸಿದರು ರೋಟರಿಕ್ಲಬ್‍ನ ಸದಸ್ಯರಾದ ಎಸ್.ವಿ ಗುರುಮೂರ್ತಿ ಮಾತನಾಡಿ ರೋಟರಿ ಕ್ಲಬ್ ಅನೇಕ ಉಪಯುಕ್ತ ಕೆಲಸವನ್ನು ಮಾಡುತ್ತಿದೆ ಅದರ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು ಎಸ್‍ಜೆಎಂ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ. ಡಾ ದಿನೇಶ್‍ಎಸ್ ಮಾತನಾಡಿ ಕಣ್ಣು ಅತ್ಯಂತ ಅಮೂಲ್ಯ ಕಣ್ಣಿನ ತೊಂದರೆಗಳನ್ನ ಪ್ರಾರಂಭದಲ್ಲೇ ಕಂಡು ಹಿಡಿದುಕೊಂಡರೆ ಅದನ್ನು ರಕ್ಷಿಸಲು ಅನುಕೂಲವಾಗುತ್ತದೆ ಗ್ಲುಕೋಮ ದಂತಹ ಕಾಯಿಲೆಯ ಮಾಹಿತಿಯನ್ನು ನಮಗೆ ನಾವೇ ತಿಳಿದುಕೊಳ್ಳಬಹುದು ರಾತ್ರಿಯ ವೇಳೆ ಸಂಚರಿಸುವಾಗ ಲೈಟ್ ಬೆಳಕಿನಲ್ಲಿ ಕಾಮನಬಿಲ್ಲಿನ ಆಕೃತಿ ಗೋಚರಿಸಿದರೆ ಅದು ಗ್ಲುಕೋಮಕ್ಕೆ ಒಳಗಾಗಬಹುದಾದ ಸಂದರ್ಭ ಎಂದು ತಿಳಿಸಿ ನಾನು ಸಹಾ ರೋಟರಿ ಸಂಸ್ಥೆಯ ಪ್ರಾರಂಭದಲ್ಲಿ ಅದರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಈ ಸಂಸ್ಥೆಯು ಅತ್ಯುತ್ತಮವಾದಂತಹ ಕಾರ್ಯಗಳನ್ನು ಮಾಡುತ್ತಿದೆ ಅದರ ಉಪಯೋಗವನ್ನು ಎಲ್ಲರು ಪಡೆದುಕೊಳ್ಳ ಬೇಕೆಂದು ತಿಳಿಸಿದರು ಬಸವೇಶ್ವರ ಬ್ಯಾಂಕಿನ ಸದಸ್ಯರು ಹಾಗೂ ರೋಟರಿ ಕ್ಲಬ್‍ನ ಟಿ ವೀರಭದ್ರಸ್ವಾಮಿ ಮಾತನಾಡಿ ನಮ್ಮ ರೋಟರಿ ಕ್ಲಬ್ ನೇತ್ರದಾನ ಪಾಕ್ಷಿಕ ಕಾರ್ಯಕ್ರವನ್ನು 40 ವರ್ಷಗಳಿಂದ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ತಿಳಿಸುವ ಉದ್ದೇಶವನ್ನು ಗಾಯತ್ರಿ ಶಿವರಾಂ ಅವರು ಮಾಡಿದ್ದಾರೆ ಎಂದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಶ್ರೀಮತಿ ಸುಮನಾ ಎಸ್ ಅಂಗಡಿ ಮತ್ತು ಡಾ ಮಧುಸೂದನರೆಡ್ಡಿ ಅವರು ವೇದಿಕೆಯಲ್ಲಿದ್ದರು ಹಾಗೂ ರೋಟರಿ ಕ್ಲಬ್‍ನ ಅನೇಕ.ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪರಿಣಾಮಕಾರಿಯಾಗಿ ಉತ್ತರಗಳನ್ನು ನೀಡಿದರು ಉಮಾದೇವಿ ಪ್ರಾರ್ಥಿಸಿದರು ಹರೀಶ್ ಸ್ವಾಗತಿಸಿದರೆ, ರೋಟರಿ ಕ್ಲಬ್‍ನ ರೋ ದಿಲ್‍ಶಾದ್ ಉನ್ನಿಸ ವಂದಿಸಿದರು ಮಾಳಗಿ ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕ್ಕೆ ತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Views: 15

Leave a Reply

Your email address will not be published. Required fields are marked *