ಚಿತ್ರದುರ್ಗ ಸೆ. 06
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ಗೌರಸಂದ್ರ ಮಾರಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಸೆ 05-ರಿಂದ ಪ್ರಾರಂಭವಾಗಿದ್ದು ಸೆ 11 ರವರೆಗೆ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಗೌರಸಂದ್ರ ಮಾರಮ್ಮ ದೇವಸ್ಥಾನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಈ.ಚಂದ್ರಶೇಖರ್ ಕಾರ್ಯದರ್ಶಿ ಓ.ಬಿ.ಬಸವರಾಜಪ್ಪ, ಅರ್ಚಕರಾದ ಟಿ.ಚಂದ್ರಪ್ಪ ಹಾಗೂ ಕಾರ್ಯಕಾರಿ ಸದಸ್ಯರು ತಿಳಿಸಿದ್ದಾರೆ.
ಸೆ.05ನೇ ಶುಕ್ರವಾರ ರಾತ್ರಿ ಅಮ್ಮನವರಿಗೆ “ಮಂದಲಿಂಗಿತ್ತಿ” ಹಾಗೂ ಭಕ್ತಾಧಿಕಾರಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಸೆ.08 ನೇ ಸೋಮವಾರ ರಾತ್ರಿ 11.00 ಗಂಟೆಗೆ “ಹೊಳೆಪೂಜೆ” ಸೆ.09ನೇ ಮಂಗಳವಾರ ಬೆಳಗ್ಗೆ 6.00 ರಿಂದ ರಾತ್ರಿ 9.00 ರವರೆಗೆ ” ಹಿಟ್ಟಿನ ಆರತಿ ಮತ್ತು ಬೇವಿನ ಸೀರೆ” ಸೆ.10ನೇ ಬುಧವಾರ ರಾತ್ರಿ 8.00 ಗಂಟೆಗೆ “ಅಗ್ನಿಕುಂಡ” ಸೆ.11ನೇ ಗುರುವಾರ ಬೆಳಗ್ಗೆ 10.00 ಗಂಟೆಗೆ “ಓಕಳಿ ಮತ್ತು ಮುರುಘರಾಜೇಂದ್ರ ಮಠಕ್ಕೆ ಮತ್ತು ಭಕ್ತಾಧಿಗಳ ಮನೆಗಳಲ್ಲಿ ಪೂಜೆ ಸಲ್ಲಿಸಲಾಗುವುದು.
ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ,ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗೌರಸಂದ್ರ ಮಾರಮ್ಮ ದೇವಸ್ಥಾನ ಕಾರ್ಯಕಾರಿ ಸಮಿತಿಯ ಕಾರ್ಯಕಾರಿ ಸದಸ್ಯರು ಕೋರಿದ್ದಾರೆ.
SEO tags in English with commas please
Views: 7