ಚಿತ್ರದುರ್ಗ ಸೆ. 10
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನಗರದಲ್ಲಿ ಬುಧವಾರ ಸೀಡ್ಸ್ ಕೆಮಿಕಲ್ಸ್ ಫರ್ಟಿಲೈಜರ್ಸ್ ಮತ್ತು ಪೆಸ್ಟಿಸೈಡ್ಸ್ ಮಾರಾಟಗಾರರ ಸಂಘವನ್ನು ಉದ್ಘಾಟನೆಯನ್ನು ಮಾಡಲಾಯಿತು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ್ ಟಿ ಸಂಘವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಡ್ಸ್ ಕೆಮಿಕಲ್ಸ್ ಫರ್ಟಿಲೈಜರ್ಸ್ ಮತ್ತು ಪೆಸ್ಟಿಸೈಡ್ಸ್ ಮಾರಾಟಗಾರರ ಸಂಘದ ಅಧ್ಯಕ್ಷರು, ಎ.ಎನ್. ಮಹೇಶ್ವರಪ್ಪ ಅಂಡ್ ಕೋ.ದ ಮಾಲಿಕರಾದ ಎ.ಎಂ.ಚಂದ್ರಶೇಖರಪ್ಪ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೆಶಕರಾದ ಶರಣ ಬಸಪ್ಪ ಬೋಗಿ, ಕೃಷಿ ಇಲಾ ಖೆಯ ಉಪ ಕೃಷಿ ನಿರ್ದೆಶಕರಾದ ಡಾ.ಕೆ.ಎಸ್.ಶಿವಕುಮಾರ್, ಸಹಾಯಕ ನಿರ್ದೇಶಕರಾದ ಸಂತಾಳ ಮಲ್ಲನ ಗೌಡ, ಉಲ್ಲತ್ ಜೈಬಾ, ಹೆಚ್.ಜೆ,.ರಾಮಕೃಷ್ಣ ತಾಂತ್ರಿಕ ಅಧಿಕಾರಿಗಳಾದ ಪ್ರವೀಣ್ ವೈ.ವಿ. ಸೀಡ್ಸ್ ಕೆಮಿಕಲ್ಸ್ ಫರ್ಟಿಲೈಜರ್ಸ್ ಮತ್ತು ಪೆಸ್ಟಿಸೈಡ್ಸ್ ಮಾರಾಟಗಾರರ ಸಂಘದ ಉಪಾಧ್ಯಕ್ಷರಾದ ಕೆ.ಆರ್.ಸುದರ್ಶನ ರೆಡ್ಡಿ, ಗೌರವಾಧ್ಯಕ್ಷರಾದ ಶ್ರೀನಿವಾಸಮೂರ್ತಿ ಎಸ್. ಕಾರ್ಯದರ್ಶಿ ಸೈಯದ್ ಟಿಪುರುಲ್ಲಾ ಪಿ, ಖಂಜಾಚಿ ರವಿಕುಮಾರ್ ಜಿ.ಎಸ್. ರಘು ಸೇರಿದಂತೆ ಮಾರಾಟಗಾರರು ಭಾಗವಹಿಸಿದ್ದರು.

Views: 277