ಹೈದರಾಬಾದ್: ʼಹನುಮಾನ್ʼ ಸ್ಟಾರ್ ತೇಜ ಸಜ್ಜ (Teja Sajja) ಮತ್ತೊಂದು ಫ್ಯಾಂಟಸಿ ಡ್ರಾಮಾದೊಂದಿಗೆ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ʼಮಿರೈʼ (Mirai Movie) ರಿಲೀಸ್ ಆದ ಎರಡನೇ ದಿನದಲ್ಲಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಆ ಮೂಲಕ ಸಿನಿಮಾ ಬ್ಲಾಕ್‌ಬಸ್ಟರ್‌ನತ್ತ ದಾಪುಗಾಲು ಇಡುತ್ತಿದೆ.
ʼಹನುಮಾನ್ʼ ಮೂಲಕ ತೇಜ ಸಜ್ಜ ಪ್ಯಾನ್ ಇಂಡಿಯಾದಲ್ಲಿ ಮಿಂಚಿದ್ದರು. ಇದೀಗ ʼಮಿರೈʼ ಮೂಲಕ ಮತ್ತೊಮ್ಮೆ ಫ್ಯಾಂಟಸಿ ಲೋಕದಲ್ಲಿ ಶೈನ್ ಆಗಿದ್ದಾರೆ. ʼಮಿರೈʼಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಾರ್ತಿಕ್ ಗಟ್ಟಮ್ನೇನಿ ನಿರ್ದೇಶನದ ʼಮಿರೈʼ ಇಂಡಿಯನ್ ಬಾಕ್ಸಾಫೀಸ್‌ನಲ್ಲಿ ಮೊದಲ ದಿನ 13 ಕೋಟಿ ರೂ. ಗಳಿಸಿದೆ. ಎರಡನೇ ದಿನ 11.54 ಕೋಟಿ ರೂ. ಗಳಿಸಿದೆ ಎಂದು ಸಾಕ್ನಿಲ್ಕ್ ವರದಿ ತಿಳಿಸಿದೆ.
ಎರಡು ದಿನಗಳಲ್ಲಿ ಚಿತ್ರ ಒಟ್ಟು 27.5 ಕೋಟಿ ರೂ.ಗಳಿಸಿದೆ. ವೀಕೆಂಡ್‌ನಲ್ಲಿ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನು ವರ್ಲ್ಡ್ ವೈಡ್ ʼಮಿರೈʼ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದ ಗಳಿಕೆ ಕಂಡಿದೆ. ಮೊದಲ ದಿನ 27.20 ಕೋಟಿ ರೂ., ಎರಡನೇ ದಿನ 28.40 ಕೋಟಿ ರೂ.ಗಳಿಕೆ ಕಂಡಿದೆ. ಎರಡು ದಿನಗಳಲ್ಲಿ ವರ್ಲ್ಡ್ ವೈಡ್ ಗ್ರಾ ಕಲೆಕ್ಷನ್ 55.60 ಕೋಟಿ ರೂ. ಆಗಿದೆ ಎಂದು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಹೇಳಿದೆ.
ಭಾರತದಲ್ಲಿ ʼಮಿರೈʼ ತೇಜ ಅವರ ಹಿಂದಿನ ʼಹನುಮಾನ್ʼ ದಾಖಲೆಯನ್ನು ಬ್ರೇಕ್ ಮಾಡಿದೆ. ʼಹನುಮಾನ್ʼ ಮೊದಲ ದಿನ 8.05 ಕೋಟಿ ರೂ. ಮತ್ತು 2ನೇ ದಿನ 12.45 ಕೋಟಿ ರೂ. ಗಳಿಸಿತ್ತು.
ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಚಿತ್ರದಲ್ಲಿ ರಿತಿಕಾ ನಾಯಕ್, ಮನೋಜ್ ಮಂಚು, ಜಗಪತಿ ಬಾಬು, ಶ್ರಿಯಾ ಶರಣ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Views: 9