ಚಿತ್ರದುರ್ಗದಲ್ಲಿ ಶರನ್ನವರಾತ್ರಿ: ಕಬೀರಾನಂದ ಸ್ವಾಮಿ ಆಶ್ರಮದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು

ಚಿತ್ರದುರ್ಗ ಸೆ. 19

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದವತಿಯಿಂದ ಸೆ. 22 ರಿಂದ ಅ. 2ರವರೆಗೆ ಆಶ್ರಮದಲ್ಲಿನ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಕಾರ್ಯ ಕ್ರಮವನ್ನು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.


ಸೆ. 22 ರಿಂದ ಅ.2ರ ವಿಜಯದಶಮಿಯವರೆಗೂ ಪ್ರತಿ ದಿನ ಸಂಜೆ 7 ರಿಂದ 9ರವರೆಗೆ ದೇವಿ ಚರಿತೆಯ ಪಾರಾಯಣ ನೆಡೆಯಲಿದೆ. ದೇವಿ ಚರಿತೆಯನ್ನು ಮಲ್ಲಾಪುರ ಗೊಲ್ಲರಹಟ್ಟಿಯ ಸಿ.ಈರಣ್ಣ ಪಠಿಸಿದರೆ ಸಾಹಿತಿಗಳು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿಗಳಾದ ಹುರಳಿ ಬಸವರಾಜು ಚರೊತೆಯನ್ನು ಪ್ರವಾಚಿಸಲಿದ್ದಾರೆ. ಇವರೊಂದಿಗೆ ಆಯಿತೋಳಿನ ಜಾನಪದ ಕಲಾವಿದರಾದ ಜಿ.ಎನ್.ವಿರೂಪಾಕ್ಷಪ್ಪರವರಿಂದ ಹಾರ್ಮೋನಿಯಂ ಹಾಗೂ ಯಶವಂತಕುಮಾರ್ ತಬಲವನ್ನು ನುಡಿಸಲಿದ್ದಾರೆ. 


ಸೆ. 26ರ ಶುಕ್ರವಾರ ಬೆಳ್ಳಿಗೆ 8 ರಿಂದ ಮಧ್ಯಾಹ್ನ 12ರವರೆಗೆ ಸುಭ್ರಾಯ ತಿಮ್ಮಣ್ಣ ಭಟ್ಟರ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ. ಅ.2ರಂದು ಸಂಜೆ 4 ಗಂಟೆಗೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 119ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಬನ್ನಿಯನ್ನು ಮುಡಿಯಲಿದ್ದು, ಸಂಜೆ 7 ಗಂಟಗೆ ಶ್ರೀದೇವಿ ಪುರಾಣ ಮುಕ್ತಾಯವಾಗಲಿದೆ. ಈ ಶರನ್ನವರಾತ್ರಿ ಸಮಯದಲ್ಲಿ ಶ್ರೀ ಭಗವತಿ ಬಗಳಾಂಬಿಕಾದೇವಿಗೆ ನಿತ್ಯವೂ ಪಂಚಾಮೃತ ಅಭೀಷೇಕ ನಡೆಯಲಿದೆ. ಇದ್ದಲ್ಲದೆ ಪ್ರತಿ ನಿತ್ಯ 5.30 ರಿಂದ 6.30ರವರೆಗೆ ಮಾತೆಯರಿಂದ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಪಠಣವಾಗಲಿದೆ.

Views: 4

Leave a Reply

Your email address will not be published. Required fields are marked *