ಚಿತ್ರದುರ್ಗದಲ್ಲಿ ‘ರಾಜಮತ್ತಿತಿಮ್ಮಣ್ಣ ನಾಯಕ ವೃತ್ತ’ ಉದ್ಘಾಟನೆ ಸೆ. 23ರಂದು

ಚಿತ್ರದುರ್ಗ ಸೆ. 20 

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನಗರದ ಕೋಟೆ ರಸ್ತೆಯಲ್ಲಿನ ಏಕನಾಥೇಶ್ವರ ಪಾದಗುಡಿಯ ಬಳಿಯಲ್ಲಿನ ವೃತ್ತಕ್ಕೆ ಹಗಲು ಕಗ್ಗೋಲೆಯ ಮಾನ್ಯ ರಾಜಮತ್ತಿತಿಮ್ಮಣ್ಣ ನಾಯಕ ವೃತ್ತ ಎಂದು ನಾಮಕರಣ ಮಾಡಲು ನಗರಸಭೆಯಲ್ಲಿ ಅನುಮೋದನೆ ಪಡೆದಿದ್ದು ಇದರ ಉದ್ಘಾಟನಾ ಸಮಾರಂಭವೂ ಸೆ. 23ರ ಮಂಗಳವಾರ ನಡೆಯಲಿದೆ ಎಂದು ಮದಕರಿ ಸಂಘದ ಅಧ್ಯಕ್ಷರಾದ ಡಿ.ಗೋಪಾಲಸ್ವಾಮಿ ನಾಯಕ್ ತಿಳಿಸಿದ್ದಾರೆ. 


ರಾಜಮತ್ತಿತಿಮ್ಮಣ್ಣ ನಾಯಕರವರು ಚಿತ್ರದುರ್ಗವನ್ನು ಆಳಿದ ಪ್ರಥಮ ಅರಸರಾಗಿದ್ಧಾರೆ, ತಿಮ್ಮಣ್ಣ ನಾಯಕ ಕರೆ, ಮಾವಿನ ತೋಪು ಹಾಗೂ ಬೆಟ್ಟದ ಮೇಲಿನ ಏಕನಾಥೇಶ್ವರಿ ಅಮ್ಮನವರ ದೇವಾಲಯವನ್ನು ಇವರ ಕಾಲದಲ್ಲಿಯೇ ನಿರ್ಮಾಣ ಮಾಡಲಾಗಿತ್ತು.  
ಸೆ, 23ರಂದು ಬಿಳ್ಳಿಗೆ 11 ಗಂಟೆಗೆ ವೃತ್ತದ ನಾಮಫಲಕವನ್ನು ನಾಡಿನ ಹೆಸರಾಂತ ಸಾಹಿತಿಗಳಾದ ಬಿ.ಎಲ್. ವೇಣು ರವರು ಉದ್ಘಾಟನೆಯನ್ನು ಮಾಡಲಿದ್ದಾರೆ. ಈ ಸಮಾರಂಭದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ರಮೇಶ್, ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಸೇರಿದಂತೆ ನಗರಸಭಾ ಸದಸ್ಯರು, ಅಭಿಮಾನಿಗಳು ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Views: 98

Leave a Reply

Your email address will not be published. Required fields are marked *