ಪಡಿತರ ಅಕ್ಕಿ ದುರುಪಯೋಗ ತಡೆಯಲು ಕಠಿಣ ಕ್ರಮ: ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಆರ್. ಪ್ರಕಾಶ್ ಸೂಚನೆ.

ಚಿತ್ರದುರ್ಗ ಸೆ. 20 

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಸೆ. 30 ರಂದು ದೊಡ್ಡಸಿದ್ದವ್ವನಹಳ್ಳಿಯಲ್ಲಿ ಚಿತ್ರದುರ್ಗ ತಾಲ್ಲೂಕು ಮಟ್ಟದ ಗ್ಯಾರೆಂಟಿ ಫಲಾನುಭವುಗಳ ಶಿಬಿರವನ್ನು ಆಯೋಜಿಸಲಾಗಿದ್ದು ಇದರಲ್ಲಿ ತಾಲ್ಲೂಕಿನ ಅರ್ಹ ಫಲಾನುಭವಿಗಳನ್ನು ಕರೆತರುವುದರ ಮೂಲಕ ಶಿಬಿರವನ್ನು ಯಶಸ್ವಿ ಮಾಡಬೇಕಿದೆ ಇದರಲ್ಲಿ ಸರ್ಕಾರ ಗ್ಯಾರೆಂಟಿ ಯೋಜನೆಯಿಂದ ಪ್ರಯೋಜನ  ಪಡೆದವರು ತಮ್ಮ ಅನುಭವವನ್ನು ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಗ್ಯಾರೆಂಟಿ ಯೋಜನೆಯ ಐದು ಇಲಾಖೆಗಳು ಸಹಕಾರವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕಿದೆ.
                    — ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಆರ್. ಪ್ರಕಾಶ್


ರಾಜ್ಯದಲ್ಲಿ ಯಾರೂ ಸಹಾ ಹಸಿವಿನಿಂದ ಇರಬಾರದು ಹೊಟ್ಟೆ ತುಂಬ ಊಟವನ್ನು ಮಾಡಬೇಕೆಂದು ರಾಜ್ಯ ಸರ್ಕಾರ ಆಕ್ಕಿಯನ್ನು ನೀಡುತ್ತಿದೆ ಆದರೆ ಕೆಲವರು ಅಕ್ಕಿಯನ್ನು ಮಾರಾಟ ಮಾಡುವುದು ಕಂಡು ಬರುತ್ತಿದೆ ಅಕ್ಕಿಯನ್ನು ಖರೀದಿ ಮಾಡುವವರ ವಿರುದ್ದ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಆರ್ ಪ್ರಕಾಶ್ ಸೂಚನೆ ನೀಡಿದರು.


ಚಿತ್ರದುರ್ಗ ನಗರದ ತಾಲ್ಲೂಕು ಪಂಚಾಯಿತು ಸಭಾಂಗಣದಲ್ಲಿ ಶನಿವಾರ ನಡೆದ ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಸಮಯದಲ್ಲಿ ಜನತೆ ಹಸಿವಿನಿಂದ ಇರಬಾರದು ಎಂಬ ಉದ್ಧೇಶದಿಂದ ಅಕ್ಕಿಯನ್ನು ಪಡಿತರ ಅಂಗಡಿಯ ಮೂಲಕ ವಿತರಣೆ ಮಾಡುವ ಬಗ್ಗೆ ಭರವಸೆಯನ್ನು ನೀಡಿತ್ತು ಅದರಂತೆ ನಮ್ಮ ಪಕ್ಷ ಆಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ಅಕ್ಕಿಯನ್ನು ನೀಡಲಾರಂಭಿಸಿತು ಆದರೆ ಇದನ್ನು ಕೆಲವರು ಇದನ್ನು ಮಾರಾಟ ಮಾಡುತ್ತಿದ್ದಾರೆ, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ನೀಡಬೇಕಿದೆ ಪಡಿತರ ಅಂಗಡಿಗಳ ಬಳಿಯಲ್ಲಿ ಕಾಯುವುದರ ಮೂಲಕ ಈ ರೀತಿಯಾದ ಅಕ್ಕಿಯನ್ನು ಖರೀದಿ ಮಾಡುವವರನ್ನು ಪತ್ತೇ ಮಾಡುವುದರ ಮೂಲಕ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.


ಪಡಿತರ ಅಂಗಡಿಗಳಲ್ಲಿ ಅಕ್ಕಿಯನ್ನು ವಿತರಣೆ ಮಾಡವ ಸಮಯದಲ್ಲಿ ನಮ್ಮ ಸಮಿತಿಯ ಸದಸ್ಯರನ್ನು ಕರೆಯಿಸುವುದರ ಮೂಲಕ ನಮ್ಮ ಮೂಲಕ ಅಕ್ಕಿಯನ್ನು ವಿತರಣೆ ಮಾಡುವಂತ ಕಾರ್ಯವನ್ನು ಮಾಡಬೇಕಿದೆ, ಪಡಿತರ ಅಂಗಡಿಯಲ್ಲಿ ಹೆಚ್ಚುವರಿಯಾಗಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಬರುತ್ತಿದೆ ಇದರ ಬಗ್ಗೆ ಇಲಾಖೆಯ ಅಧಿಕಾರಿಗಳು ಗಮನ ನೀಡಬೇಕಿದೆ, ಇಂತಹ ಪ್ರಕರಣ ಕಂಡು ಬಂದಾಗ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕಿದೆ, ಅಕ್ಕಿಯನ್ನು ಬಿಜೆಪಿಯವರು ನೀಡುತ್ತಿದ್ದಾರೆ ಎಂದು ಪಡಿತರದಾರರು ತಿಳಿದಿದ್ದಾರೆ, ಇದರಿಂದ ಪಡಿತರ ಅಂಗಡಿಯ ಮುಂದೆ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆಹಾರ ಸಚಿವರ ಭಾವಚಿತ್ರ ಇರುವ ಫೆಕ್ಸ್‍ನ್ನು ಹಾಕಬೇಕಿದೆ ಇದರಿಂದ ಪಡಿತರವನ್ನು ಪಡೆಯುವವರಿಗೆ ಅಕ್ಕಿಯನ್ನು ಯಾರು ನೀಡುತ್ತಿದ್ದಾರೆ ಎಂದು ಗೊತ್ತಾಗಬೇಕಿದೆ ಎಂದರು.


ಸರ್ಕಾರ ನೀಡಿದ ಪಂಚ ಗ್ಯಾರೆಂಟಿಗಳು ಸರಿಯಾದ ರೀತಿಯಲ್ಲಿ ಜನತೆಗೆ ತಲುಪುವಂತ ಕಾರ್ಯವನ್ನು ಇಲಾಖೆಯ ಅಧಿಕಾರಿಗಳು ಮಾಡಬೇಕಿದೆ ಯಾರು ಸಹಾ ಈ ಗ್ಯಾರೆಂಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದ ಅವರು ಬಸ್ಸ್‍ಗಳಲ್ಲಿ ಮಹಿಳೆಯರು ಸಂಚಾರ ಮಾಡುವಾಗ ಅವರನ್ನು ಗೌರವದಿಂದ ಕಾಣಬೇಕಿದೆ ಕೆಲವೊಂದು ಬಸ್ಸ್‍ಗಳಲ್ಲಿ ಕಂಡಕ್ಟ್‍ರ್‍ಗಳು ಮಹಿಳೆಯರನ್ನು ಅಗೌರವದಿಂದ ಕಾಣುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಇದರ ಬಗ್ಗೆ ಗಮನ ನೀಡುವಂತೆ ಅಧಿಕಾರಿಗಳಿಗೆ ಅಧ್ಯಕ್ಷರಾದ ಆರ್ ಪ್ರಕಾಶ್ ಸೂಚನೆ ನೀಡಿದರು.


ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಗೆ ಬೆಸ್ಕಾಂ ಇಲಾಖೆಯವರು ಬಂದಿಲ್ಲ ಇದರಿಂದ ಸಭೆಯಲ್ಲಿ ಅವರು ನೀಡಬೇಕಾದ ಮಾಹಿತಿ ಸಿಕ್ಕಿಲ್ಲ ಈ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡುವುದರ ಮೂಲಕ ಎಚ್ಚರಿಕೆಯನ್ನು ನೀಡಿ ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿಗಳಿಗೆ ಸೂಚನೆ ನೀಡಿ ಎಂದ ಅವರು ಚಿತ್ರದುರ್ಗ ತಾಲ್ಲೂಕಿನ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳ ಶಿಬಿರವನ್ನು ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಇದರ ಬಗ್ಗೆ ಅಧಿಕಾರಿಗಳು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿ ಇದರಲ್ಲಿ ಸರ್ಕಾರದ ಗ್ಯಾರೆಂಟಿ ಯೋಜನೆಯ ಫಲವನ್ನು ಪಡೆಯುತ್ತಿರುವವರನ್ನು ಕರೆಯಿಸಿ ತಮ್ಮ ಅನುಭವವನ್ನು ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದರು.


ಈ ಸಭೆಯಲ್ಲಿ ಸಮಿತಿಯ ಸದಸ್ಯರಾದ ಶ್ರೀಮತಿ ನಜ್ಮಾತಾಜ್, ಶಶಿಕರಣ, ಕಾಂತರಾಜ್ ಹಾಗೂ ಮಹಮ್ಮದ್ ಮುದಾಸಿರ್ ನವಾಜ್, ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಚಿತ್ರದುರ್ಗ ತಾ.ಪಂ. ಕಾರ್ಯನಿರ್ವ ಹಕಾಧಿಕಾರಿಗಳಾದ ರವಿಕುಮಾರ್ ಭಾಗವಹಿಸಿದ್ದರು.

Views: 16

Leave a Reply

Your email address will not be published. Required fields are marked *