ಚಿತ್ರದುರ್ಗ ಸೆ. 24
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಭಾರತೀಯ ಜನತಾ ಪಾರ್ಟಿಯವತಿಯಿಂದ ಸೆ. 17 ರಿಂದ ನಡೆಯುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಸೇವಾ ಪಾಕ್ಷಕಿ ಅಭಿಯಾನದಡಿಯಲ್ಲಿ ಚಿತ್ರದುರ್ಗ ಗ್ರಾಮಾಂತರ ಮಂಡಲದಿಂದ ಚಿತ್ರದುರ್ಗ ತಾಲ್ಲೂಕಿನ ಗಂಜಿಗಟ್ಟೆ ಗ್ರಾಮದಲ್ಲಿ ಬುಧವಾರ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಬೆಟ್ಟದ ಮೇಲಿರುವ ಶ್ರೀ ಪಾಂಡು ರಂಗನಾಥಸ್ವಾಮಿ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಚ ಮಾಡಲಾಯಿತು.

ಚಿತ್ರದುರ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಕೆ.ನಾಗರಾಜ್ ಉಪ್ಪನಾಯಕನಹಳ್ಳಿ ಇವರು ಮಾತನಾಡಿ ನಮಗೆ ಸ್ವಚ್ಚತೆ ಅತಿ ಮುಖ್ಯವಾಗಿದೆ ಎಲ್ಲಿ ಸ್ವಚ್ಚತೆ ಇರುವುದಿಲ್ಲವೂ ಅಂತಹ ಪ್ರದೇಶಗಳಲ್ಲಿ ರೋಗಗಳು ಕಾಣುತ್ತವೆ, ನಮ್ಮ ಮನೆ, ಶಾಲೆ, ಆಸ್ಪತ್ರೆ, ಸೇರಿದಂತೆ ಎಲ್ಲಡೆ ಸಹಾ ಸ್ವಚ್ಚತೆಯನ್ನು ಕಾಪಾಡುವುದರ ಮೂಲಕ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕಿದೆ, ನಮ್ಮ ಮನೆಯ ಕಸವನ್ನು ಬೇರೆಯವರ ಮನೆ ಮುಂದೆ ಹಾಕದೇ ಅದನ್ನು ಕಸದ ಗಾಡಿಯಲ್ಲಿ ಅಥವಾ ಕಸದ ತೊಟ್ಟಿಯಲ್ಲಿ ಹಾಕುವುದರ ಮೂಲಕ ಸ್ವಚ್ಚತೆಯನ್ನು ಕಾಪಾಡಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸಚಿನ್, ಯುವ ಮೋರ್ಚಾದ ಅಧ್ಯಕ್ಷ ಸಿದ್ದೇಶ್, ಗ್ರಾಮದ ಮುಖಂಡರಾದ ಆನಂದಪ್ಪ, ರಮೇಶ್ ಪಮಡರಹಳ್ಳಿ, ವಿನಯ ನಂದಿಪುರ, ರಾಘವೇಂದ್ರ ಗಂಜಿಗಟ್ಟೆ ಪ್ರಾಣೇಶ್ ಸೇರಿದಂತೆ ಭಾಗವಹಿಸಿದ್ದರು.
Views: 17