ಜಿಲ್ಲಾ ಆಯುಷ್ ಇಲಾಖೆ ವತಿಯಿಂದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಆಯುರ್ವೇದ ತಿಳಿದವರಿಗೆ ರೋಗದ ಭಯವಿಲ್ಲ – ಡಾ. ನಾರದಮುನಿ ಬಿ.ಜಿ.

ಚಿತ್ರದುರ್ಗ: ಸೆ.24
ದಿನಾಂಕ 23/09/2025 ಮಂಗಳವಾರ 10ನೇ ಆಯುರ್ವೇದ ದಿನಾಚರಣೆಯ ಮತ್ತು ಧನ್ವಂತರಿ ಜಯಂತಿಯ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಹಾಗೂ ಪ್ರಕೃತಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಒನಕೆ ಓಬವ್ವ ಕ್ರೀಡಾಂಗಣ ಆವರಣದಲ್ಲಿ ಬೆಳಿಗ್ಗೆ 7:00 ಗಂಟೆಗೆ ಆಯುರ್ವೇದ ಜಾಗೃತಿ ಜಾಥ ಹಾಗೂ ಬೆಳಿಗ್ಗೆ 9:00ಗೆ ವೇದಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಗರದ ಪ್ರಕೃತಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕೃತಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಂಸ್ಥಾಪಕರಾದ ರಘು ಚಂದನ್ ಇವರು ಧನ್ವಂತರಿ ಫೋಟೋಗೆ ಪುಷ್ಪವನ್ನು ಸಮರ್ಪಿಸುವ ಮೂಲಕ ಹಾಗೂ ದೀಪಜ್ಯೋತಿಯನ್ನು ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.


ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲೂಕು ಅಳಗವಾಡಿ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಮಂದಿರದ ಆಡಳಿತ ವೈಜ್ಞಾಧಿಕಾರಿ ಡಾ. ನಾರದಮುನಿ.ಜಿ ಬಿ ಆಯುರ್ವೇದ ದಿನಾಚರಣೆ ಕುರಿತು ಮಾತನಾಡಿ ಆಯುರ್ವೇದವು ಭಾರತದ ಒಂದು ಪುರಾತನ ವೈದ್ಯಕೀಯ ಪದ್ಧತಿಯಾಗಿದೆ.

ಇದನ್ನು ವಿಶ್ವಾದ್ಯಂತ ಜನಪ್ರಿಯಗೊಳಿಸುವುದು ಮತ್ತು ಅದರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಆಯುರ್ವೇದದ ದೇವತೆಯಾದ ಧನ್ವಂತರಿಯ ಜನ್ಮದಿನದಂದು ಈ ದಿನವನ್ನು ಆಚರಿಸಲಾಗುತ್ತದೆ. ಆಯುರ್ವೇದ ಜ್ಞಾನ ಮತ್ತು ಔಷಧೀಯ ವ್ಯವಸ್ಥೆಗಳಿಗೆ ಧನ್ವಂತರಿ ಮುನಿಗಳು ನೀಡಿದ ಕೊಡುಗೆಯನ್ನು ಸ್ಮರಿಸುವುದು.


ಯೋಗ, ಧ್ಯಾನ, ಉತ್ತಮ ಆಹಾರ ಮತ್ತು ಜೀವನಶೈಲಿ ಮುಂತಾದ ಆಯುರ್ವೇದದ ಮೂಲಭೂತ ತತ್ವಗಳನ್ನು ಪ್ರಚಾರ ಮಾಡುವ ಮೂಲಕ “ಆಹಾರವೇ ಔಷಧ” ಎಂಬ ಪರಿಕಲ್ಪನೆಯನ್ನು ಜನರಿಗೆ ತಿಳಿಯಪಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಆಯುರ್ವೇದದ ಅರಿವು ಇರುವವರಿಗೆ ರೋಗದ ಭಯ ಇರುವುದಿಲ್ಲ ಎಂದು ತಿಳಿಸಿದರು.


ಪ್ರಕೃತಿ ಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ.ನವಾಜ್ ಅಧ್ಯಕ್ಷತೆ ವಹಿಸಿದ್ದ ಆಯುಷ್ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಮಂಜುಳಾ ,ಡಾ. ಎಂ ಎಲ್ ನದಾಫ್ ,ಡಾ.ಆರ್ ಎನ್ ಕೆರೂರ್ ಹಾಗೂ ಜಿಲ್ಲೆಯ ಎಲ್ಲಾ ಆಯುಷ್ ಆಡಳಿತ ವಿದ್ಯಾಧಿಕಾರಿಗಳು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Views: 41

Leave a Reply

Your email address will not be published. Required fields are marked *