ಚಿತ್ರದುರ್ಗ ಸೆ. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕುಂಚಿಗನಾಳ್ ನಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಛೇರಿಯನ್ನು ವೈದ್ಯಕೀಯ ಕಾಲೇಜನ್ನಾಗಿ ಪರಿವರ್ತನೆ ಮಾಡಿರುವ ಬಗ್ಗೆ ಆಕ್ಷೇಪಣೆಯನ್ನುನ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಾರ್ಟಿ ಈ ಸರ್ಕಾರ ಕಟ್ಟಿರುವ ಕಟ್ಟಡದಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿಯನ್ನು ಪ್ರಾರಂಭ ಮಾಡುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ಬಿ.ಜಗದೀಶ್ ಮಾತನಾಡಿ, ಸುಮಾರು 10 ವರ್ಷಗಳ ಹಿಂದೆ ಅಂದರೆ ಕಾಂಗ್ರೆಸ್ ಸರ್ಕಾರ ಆಡಳಿತಾವಧಿಯಲ್ಲಿ ಅಂದಿನ ಜಿಲ್ಲಾ ಸಚಿವರಾದ ಹೆಚ್.ಆಂಜನೇಯರವರು ಜಿಲ್ಲಾ ಆಡಳಿತ ಅನುಕೂಲಕ್ಕಾಗಿ ಸುಮಾರು 3 ಕಿ.ಮೀ. ದೂರದಲ್ಲಿ. ಕುಂಚಿಗನಾಳ್‍ನಲ್ಲಿ ಸರ್ಕಾರದ ಗಮನಕ್ಕೆ ತಂದು ಈಗ ಸುಸಜ್ಜಿತವಾದ ಕಟ್ಟಡವು ಸಹ ನಿರ್ಮಾಣವಾಗಿದ್ದು, ಇನ್ನೆನು ಸ್ವಲ್ಪ ದಿನಗಳಲ್ಲಿ ಜಿಲ್ಲಾಡಳಿತದ ಎಲ್ಲಾ ಕಡತಗಳನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಇಂದಿನ ಜಿಲ್ಲಾ ಸಚಿವರು, ಶಾಸಕರುಗಳು ಸೇರಿ ಜಿಲ್ಲಾ ಕಛೇರಿ ಬದಲಾಗಿ ವೈದ್ಯಕೀಯ ಕಾಲೇಜಿಗೆ ಬದಲಾಗಬೇಕೆಂದು ಸರಿಯಷ್ಟೆ. ಆದ್ದರಿಂದ ತಾವುಗಳು ಕೂಲಂಕುಷವಾಗಿ ಯೋಚಿಸಿ ಈ ಹಿಂದೆ ಯಾವುದಕ್ಕೊಸ್ಕರ ಅಂದಿನ ಸಚಿವರು ಮಂಜೂರು ಮಾಡಿದ್ದರು. ಅದು ಜಿಲ್ಲಾ ಆಡಳಿತಕ್ಕಾಗಿ ಇರಬೇಕು ಎಂದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.
ಕುಂಚಿಗನಾಳ್‍ನಲ್ಲಿ ಜಿಲ್ಲಾಡಳಿತ ಕಛೇರಿಯಾಗುವುದರಲ್ಲಿ ಹಲವಾರು ಅನುಕೂಲಗಳಿವೆ ಚಿತ್ರದುರ್ಗ ನಗರದಲ್ಲಿ ಪುನಃ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆ ಇರುವುದಿಲ್ಲ. ನಗರದಲ್ಲಿ ವಾಹನಗಳು ಹೆಚ್ಚಾಗಿ ಇರುವುದರಿಂದ ವಾಹನ ಮಾಲಿನ್ಯ ಉಂಟಾಗುತ್ತದೆ. ಜಿಲ್ಲಾಡಳಿತ ಕಛೇರಿ ಬದಲಾಗುವುದರಿಂದ ಆರ್ಥಿಕವಾಗಿ ಹಿಂದುಳಿದ ಗ್ರಾಮಗಳು ಆರ್ಥಿಕವಾಗಿ ಸದೃಢವಾಗಿ ಉದ್ಯೋಗ ಸೃಷ್ಟಿಸಲು ಅನುಕೂಲವಾಗುತ್ತದೆ. ಕಛೇರಿ ಬದಲಾಗುವು ದರಿಂದ ಜಿಲ್ಲೆಯ ಕೆಲವು ತಾಲ್ಲೂಕುಗಳಾದ ಹಿರಿಯೂರು, ಚಳ್ಳಕೆರೆ. ಮೊಳಕಾಲ್ಕೂರು ಇವರುಗಳಿಗೆ ಅನುಕೂಲ ವಾಗುತ್ತದೆ. ಜಿಲ್ಲಾಡಳಿತ ಕಛೇರಿ ದೂರ ಇದ್ದಷ್ಟು ಅನಾವ್ಯಶಕವಾಗಿ ಪ್ರತಿಭಟನೆಗಳಿಗೆ ಆಸ್ಪದ ಇರುವುದಿಲ್ಲ.
ನಗರದಿಂದ ದೂರ ಇದ್ದರೆ ವ್ಯವಹಾರಕ್ಕೆ ಅನುಕೂಲ ಸಮಯಕ್ಕೆ ಸರಿಯಾಗಿ ಅಧಿಕಾರಿ ವರ್ಗದವರು ಹಾಜರಿರು ತ್ತಾರೆ.ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ಈಗ ಮಂಜೂರಾಗಿರುವ ಕಟ್ಟಡದಲ್ಲಿ ಜಿಲ್ಲಾಡಳಿತ ಕಾರ್ಯ ನಿರ್ವಹಿ ಸುವುದು ಸೂಕ್ತವಾಗಿದ್ದು ಅಲ್ಲಿ ವೈದ್ಯಕೀಯ ಕಾಲೇಜು ಆಗುವುದರಿಂದ ವಿದ್ಯಾರ್ಥಿಗಳಿಗೆ ದೂರ ಇರುವುದರಿಂದ ವಿದ್ಯಾರ್ಥಿನಿಯರಿಗೆ ಭದ್ರತೆಗೆ ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಜಗದೀಶ್ ತಿಳಿಸಿದರು.
ಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಜಯಲಕ್ಷ್ಮೀ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ತನ್ವೀರ್, ಸಂಘಟನಾ ಕಾರ್ಯದರ್ಶಿ ರವಿ, ಜಂಟಿ ಕಾರ್ಯದರ್ಶಿ ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಗವಹಿಸಿದ್ದರು.
Views: 49