ಮೊಬೈಲ್ ವ್ಯಸನ: ಮಕ್ಕಳಲ್ಲಿ ‘ನೋಮೋಫೋಬಿಯಾ’ ಹೆಚ್ಚುತ್ತಿರುವ ಆತಂಕಕಾರಿ ಪ್ರವೃತ್ತಿ – ಚಿತ್ರದುರ್ಗದಲ್ಲಿ ಉಪನ್ಯಾಸ.

ಚಿತ್ರದುರ್ಗ ಸೆ. 29

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಜಗತ್ತು ಡಿಜಿಟಲೀಕರಣವಾದಂತೆ ಮಕ್ಕಳು ಮತ್ತು ಯುವ ಜನರು ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಅಂತರ್ಜಾಲದಲ್ಲಿ ಹೆಚ್ಚು ಸಮಯ ವ್ಯಯ ಮಾಡುತ್ತ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ತಮ್ಮೆಲ್ಲಾ ಚಟುವಟಿಕೆಗಳಿಗೂ ಹಾಗೂ ಸಮಸ್ಯೆಗಳಿಗೂ ಮೊಬೈಲ್ ಪರಿಹಾರ ಎಂಬಂತೆ ಅವಲಂಬಿತವಾಗಿರುವುದು ಚಟವಾಗಿ ಈಗ ಅದೊಂದು ಮಾರಕ ರೋಗವಾಗಿ ಬದಲಾಗುತ್ತಿದೆ ಎಂದು  ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ.ಆರ್.ಮಲ್ಲೇಶ್ ತಿಳಿಸಿದರು.


ಭಾನುವಾರ ಚಿತ್ರದುರ್ಗ ತಾಲ್ಲೂಕಿನ ಮದಕರಿಪುರದಲ್ಲಿ  ಹಮ್ಮಿಕೊಂಡಿರುವ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದ ಐದನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.


ಮೊಬೈಲ್ ಚಟದಿಂದಾಗಿ ಮಕ್ಕಳು ಮತ್ತು ಯುವಜನರಲ್ಲಿ ನೋಮೋಪೋಬಿಯಾ ಅಂದರೆ ಮೊಬೈಲ್ ಪೋನ್ ಇಲ್ಲದಿದ್ದರೆ ಭಯ ಎಂಬ ವ್ಯಾದಿಗೆ ತುತ್ತಾಗಿ ಮೊಬೈಲ್ ಇಲ್ಲದೆ ಹೆಚ್ಚಿನ ಸಮಯ ಕಳೆಯಲಾಗದ ಸ್ಥಿತಿಗೆ ತಲುಪಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.ಆರಂಭದಲ್ಲಿ ಒಂಟಿತನದಿಂದ ಹೊರ ಬರಲು ಬಳಸುತ್ತಿದ್ದ ಮೊಬೈಲ್ ಈಗ ಬದುಕನ್ನೇ ಏಕಾಂಗಿಯಾಗಿಸುವಷ್ಟು ರೋಗವಾಗಿ ಮಾರ್ಪಟ್ಟಿದೆ.ಸ್ವಂತ ಕುಟುಂಬ, ಸ್ನೇಹಿತರನ್ನು ಹಾಗೂ ಬಂಧು ಬಳಗದವರಿಂದ  ದೂರವಿರಿಸಿದೆ. ಮೊಬೈಲ್ ಬಳಕೆಯು ಡ್ರಗ್ಸ್ ಮತ್ತು ಅಲ್ಕೋಹಾಲ್ ಗಿಂತಲೂ ಹೆಚ್ಚು ವ್ಯಸನವಾಗಿ ಪರಿಣಮಿಸಿದೆ ಅಲ್ಲದೆ ಮೆದುಳಿನ ರಾಸಾಯನಿಕ ಡೋಪಾಮೈನ್ ಬಿಡುಗಡೆಗೆ ಪ್ರಚೋಧಿಸಿ ಆಲೋಚನಾ ಶಕ್ತಿಯನ್ನು  ಕುಂದಿಸಿದೆ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿ ಅಸಹನೆ,ಒತ್ತಡ,ಆತಂಕ,ಖಿನ್ನತೆ, ನಿರಾಸಕ್ತಿ ಹಾಗೂ ಒಂಟಿತನದಂತಹ ಸಮಸ್ಯೆಗಳನ್ನು ಹೆಚ್ಚಿಸಿದೆ.ಆದ್ದರಿಂದ ಎಲ್ಲಾ ವಯಸ್ಸಿನ ಜನರು ಸದ್ಯದ ಸ್ಥಿತಿಯಲ್ಲಿ ಆನ್ಲೈನ್ ತೊರೆದು ಆಪ್‍ಲೈನ್‍ಗೆ ಮರಳಬೇಕಿದೆ,ಕೆಲಸದ ಸಮಯದಲ್ಲಿ ಪೋನ್ ಆಪ್ ಮಾಡಿಕೊಳ್ಳಬೇಕಿದೆ,ರಾತ್ರಿ ಮಲಗುವ ಮುಂಚೆ ಮೊಬೈಲ್ ಬಳಕೆಯನ್ನು ನಿಲ್ಲಿಸಬೇಕಿದೆ ಹಾಗೂ ಕ್ರೀಡೆ,ದೈಹಿಕ ಕೆಲಸ,ಯೋಗ,ವ್ಯಾಯಾಮ ಹಾಗೂ ಅಧ್ಯಯನದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮೊಬೈಲ್ ಗೀಳಿನಿಂದ ಹೊರ ಬರಲು ಪ್ರಯತ್ನಿಸಬೇಕಿದೆ. ಇದರಿಂದಾಗಿ ನಾವುಗಳು ವರ್ತಮಾನ ಮತ್ತು ಭವಿಷ್ಯದ ಆರೋಗ್ಯವನ್ನು ಉತ್ತಮಗೊಳಿಸಬಹುದಾಗಿದೆ ಎಂದರು


ಸಮಾರಂಭದಲ್ಲಿ  ಮದಕರಿಪುರ ಗ್ರಾಮ ಪಂಚಾಯತಿ ಸದ್ಯಸರಾದ ಶ್ರೀಮತಿ ಲಕ್ಷ್ಮಿ,ತೋಟಗಾರಿಕೆ ಇಲಾಖೆಯ ಎಂ.ಆರ್.ನಾಗರಾಜ,ಪ್ರಾಂಶುಪಾಲರಾದ ಡಾ. ಶಬ್ಬೀರ್ ಅಹಮದ್ ಖಾನ್, ಉಪನ್ಯಾಸಕರಾದ ಹೆಚ್.ಶಿವಕುಮಾರ್, ಮಹಂತೇಶ್, ಎಸ್.ಮಂಜುನಾಥ, ಶಿವಕುಮಾರ್, ಶ್ರೀಮತಿ ನಾಜಿಯಾತಾಜ್, ಶಿಬಿರಾಧಿ ಕಾರಿಗಳಾದ ಟಿ.ಪೆನ್ನಯ್ಯ,ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.


ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರು ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು

Views: 16

Leave a Reply

Your email address will not be published. Required fields are marked *