ಮತಗಳ್ಳತನದ ವಿರುದ್ಧ ಕಾಂಗ್ರೆಸ್ ವತಿಯಿಂದ ಅಭಿಯಾನ.

ನಗರದ ಸಂತೇಪೇಟೆ ವೃತ್ತದಲ್ಲಿ ಸಾರ್ವಜನಿಕರಿಂದ ಕಾರ್ಯಕರ್ತರಿಂದ ಸಹಿ ಚಳುವಳಿ 

ಚಿತ್ರದುರ್ಗ ಆ. 02ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ದೇಶದಾದ್ಯಂತ ಹಮ್ಮಿಕೊಂಡಿರುವ “ವೋಟ್ ಚೋರ್ ಗದ್ದಿ ಚೋಡ್” ಅಭಿಯಾನಕ್ಕೆ ಬೆಂಬಲವಾಗಿ ಚಿತ್ರದುರ್ಗ ನಗರದ ಮಹಾತ್ಮ ಗಾಂಧಿ ವೃತದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಹಮ್ಮಿಕೊಂಡಿದ್ದ “ಮತಗಳ್ಳತನ ವಿರುದ್ಧ ಅಭಿಯಾನ” ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಮಹಮ್ಮದ್ ಖುದ್ದುಸ್  ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿದ್ದಾರೆ. ಮತಗಳ್ಳತನದ ವಿರುದ್ಧ ಆರಂಭವಾಗಿರುವ ಈ ಪ್ರತಿಭಟನಾ ಅಭಿಯಾನ ಕರ್ನಾಟಕ ರಾಜ್ಯದಿಂದ ಆರಂಭವಾಗಿ ಇಡೀ ದೇಶಾದ್ಯಂತ ವ್ಯಾಪಿಸಲಿದೆ.ಈಗಾಗಲೇ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ಚಳವಳಿ ಆರಂಭವಾಗಿದೆ. ಇದಕ್ಕೆ ಇಡೀ ರಾಜ್ಯದ ಜನತೆಯೇ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ತಿಳಿಸಿ, ಸಹಿ ಹಾಕುವ ಮೂಲಕ ಸಹಿ ಸಂಗ್ರಹ ಅಭಿಯಾನಕ್ಕೆ ಚಿತ್ರದುರ್ಗದಲ್ಲಿ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್ ಪೀರ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಸ ಸಂಪತ್ ಕುಮಾರಾ, ಮೈಲಾರಪ್ಪ, ಗ್ಯಾರೆಂಟಿ ಅಧ್ಯಕ್ಷರಾದ ಶಿವಣ್ಣ, ತಿಪ್ಪೇಸ್ವಾಮಿ, ಲಕ್ಷ್ಮೀಕಾಂತ್ ಚೋಟು, ಪ್ರಕಾಶ್ ರಾಮ ನಾಯ್ಕ್, ಎಸ್.ಎಂ.ಎಲ್,ತಿಪ್ಪೆಸ್ವಾಮಿ, ನಜ್ಮತಾಜ್, ಮುನೀರ ಮಕಂದರ್, ಮಹಬೂಬ್ ಖತೂನ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು, ಮುಖಂಡರು, ಮಹಿಳಾ ಮುಖಂಡರು, ಜನಪ್ರತಿನಿಧಿಗಳು, ಯುವ ಕಾಂಗ್ರೆಸ್ ನಾಯಕರು, ಕಾರ್ಯಕರ್ತ ಹಾಜರಿದ್ದರು.

Views: 31

Leave a Reply

Your email address will not be published. Required fields are marked *