ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶೋಭನ, ಕರಣ : ಗರಜ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 05 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:36 – 18:06, ಗುಳಿಕ ಕಾಲ 15:07 – 16:36, ಯಮಗಂಡ ಕಾಲ 12:08 – 13:37
ಮೇಷ ರಾಶಿ :
ಸಕಾರಾತ್ಮಕ ವಿಚಾರಗಳೇ ನಿಮ್ಮೊಳಗೆ ವಿಜೃಂಭಿಸಲಿ. ನಿಮಗೆ ಇಂದು ಬಂಧನದಿಂದ ಮುಕ್ತವಾದಂತೆ ಅನ್ನಿಸಬಹುದು. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವು ಮತ್ತೆ ಸಿಗುವುದು. ಮೋಜಿನಲ್ಲಿ ಈ ದಿನವನ್ನು ಕಳೆಯುವಿರಿ. ಇಂದು ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಆಸ್ತಿ ಖರೀದಿಯ ಬಗ್ಗೆ ಮನೆಯಲ್ಲಿ ಚಿಂತನೆಯನ್ನು ನಡೆಸಬಹುದು. ಬರಬೇಕಾದ ಹಣವನ್ನು ಪಡೆಯಲು ಮನೆಗೇ ಹೋಗಲಿದ್ದೀರಿ. ಉದ್ಯೋಗದ ಕಾರಣಕ್ಕೆ ಅಲೆದಾಟ ಅತಿಯಾಗಬಹುದು. ಮಾತು ಅವಮಾನವಂತೆ ಕಂಡರೆ ಅಲ್ಲಿರುವುದು ಬೇಡ. ಕೆಲಸ ಕಾರ್ಯಗಳಲ್ಲಿ ವಿಳಂಬ ಅಥವಾ ಅಡೆತಡೆ ಎದುರಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ. ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಲಾರದು. ಸ್ನೇಹಕ್ಕೆ ನಿಮ್ಮ ಪ್ರತ್ಯುಪಕಾರವು ಇರಲಿದೆ. ಪತ್ನಿಯ ಮಾತು ನಿಮಗೆ ಅಸಮಾಧಾನವನ್ನು ತರಿಸಬಹುದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ.
ವೃಷಭ ರಾಶಿ :
ನಡೆ ಮತ್ತು ನುಡಿಯಲ್ಲಿ ಸಂಯಮವು ಅಗ್ರಮಾನ್ಯವಾಗಲಿ. ಶ್ರಮದಿಂದ ಎಲ್ಲ ಕಾರ್ಯವೂ ಆಗದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಡುವುದು ಸೂಕ್ತ. ನೀವು ಬಂಧುಗಳಿಂದ ಸಹಾಯವನ್ನು ನಿರೀಕ್ಷಿಸುವಿರಿ. ನಿಮ್ಮ ಸಂಪತ್ತಿನ ಅಳೆಯುವರು. ಗುಟ್ಟನ್ನು ನೀವು ಬಿಟ್ಟಕೊಡುವಿರಿ. ನಿಮ್ಮ ತಪ್ಪು ತಿಳಿದಿಕೊಂಡವರಿಗೆ ಸರಿಯಾದ ಮಾಹಿತಿಯನ್ನು ಕೊಡುವಿರಿ. ಇಂದು ನಿಮ್ಮ ಆಲಸ್ಯವು ಯಶಸ್ಸಿನ ಶತ್ರುವಾಗಬಹುದು. ಸುಳ್ಳು ಹೇಳಿಕೊಂಡು ನಿಮ್ಮ ದಾಖಲೆಗಳನ್ನು ಪರಿಶೀಲಿಸಬಹುದು. ಧಾರ್ಮಿಕ ವಿಚಾರಕ್ಕೆ ನೀವು ಹೆಚ್ಚು ಒತ್ತಡುವಿರಿ. ಆರ್ಥಿಕವಾಗಿ ಬೆಳವಣಿಗೆಯನ್ನು ಕಾಣುವಿರಿ. ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಕುಟುಂಬದ ಮನೆಯಲ್ಲಿಯೇ ಇದ್ದು ಸಮಯವನ್ನು ಕಳೆಯುವಿರಿ. ಹೊಸತನ್ನು ಮಾಡಬೇಕು ಎಂಬ ಮನಸ್ಸು ಬರಬಹುದು. ಭೂಮಿಯ ವ್ಯವಹಾರವು ಇಂದು ಕಾರಣಾಂತರಗಳಿಂದ ಸ್ವಲ್ಪ ಹಿಮ್ಮುಖವಾಗಿ ಹೋಗಬಹುದು.
ಮಿಥುನ ರಾಶಿ :
ತುಂಬಿರುವ ನೀವು ಎಲ್ಲಿಯೂ ತುಳಕದಂತೆ ನೋಡಿಕೊಳ್ಳುವಿರಿ. ಬಿಗುಮಾನವು ನಿಮ್ಮನ್ನು ತೆರೆಯಲು ಬಿಡದು. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ಬಂಧುಗಳಿಗಾಗಿ ನೀವು ಹಣವನ್ನು ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕಾಗಿ ಮನೆಯವರಿಂದ ಪ್ರೋತ್ಸಾಹವನ್ನು ಪಡೆಯುವಿರಿ. ಅನಿವಾರ್ಯವಾಗಿ ನೀವು ಬದಲಾಯಿಸಿದ ವೃತ್ತಿಗೇ ಹೋಗಬೇಕಾಗುವುದು. ನಿಮ್ಮನ್ನು ಅತಿಯಾಗಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ನಿಮಗೆ ಕೆಲವು ಜವಾಬ್ದಾರಿಗಳು ಬಂದು ಗಂಭೀರವಾಗುವಿರಿ. ಆರ್ಥಿಕ ವ್ಯವಹಾರದಲ್ಲಿ ನಿಮಗೆ ನಿಷ್ಠೆ ಇರುವುದು. ಆಲೋಚನೆಗಳು ಅಸ್ಥಿರವಾಗಿರುತ್ತವೆ. ಕೆಲಸಗಳು ಮುಂದಕ್ಕೆ ಹೋಗಬಹುದು. ವ್ಯವಹಾರದಲ್ಲಿ ಹೊಸ ಸಮಸ್ಯೆ ಉದ್ಭವಿಸಬಹುದು. ವೃತ್ತಿಯು ನಿಮಗೆ ಹಿಡಿಸುವುದು. ಸಹೋದರಿಂದ ನಿಮಗೆ ಬೇಕಾದ ಸಹಾಯ ಇಂದು ಪಡೆಯುವಿರಿ. ನಿಮ್ಮ ಬಗ್ಗೆ ಯಾರಿಂದಲೋ ಮಾಹಿತಿಯನ್ನು ಪಡೆಯುವರು. ಸಂಬಂಧಿಸದ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗಬಹುದು. ಸುಮ್ಮನೆ ಕುಳಿತಿರುವುದು ನಿಮಗೆ ಕಷ್ಟ.
ಕರ್ಕಾಟಕ ರಾಶಿ :
ಪ್ರಾಪಂಚಿಕ ಸುಖದತ್ತ ಮನವೊಲಿಯುವುದು. ನಿಮ್ಮ ಉದ್ಯಮವು ಇಚ್ಛೆಗೆ ಅನುಸಾರವಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದೂ ಮುಖ್ಯವಾಗಲಿದೆ. ಜೀವನವು ಬಹಳ ನಿಧಾನವಾಗಿ ಚಲಿಸುತ್ತಿದೆ ಎಂದು ಅನ್ನಿಸಬಹುದು. ಸಂಗಾತಿಯ ಜೊತೆಗಿನ ಕಲಹದಿಂದ ಕೆಲ ಕಾಲ ಮೌನವು ಆವರಿಸುವುದು. ಇಂದು ಆಲಸ್ಯವು ಅಧಿಕವಾಗಿ ಇರಲಿದೆ. ಉತ್ತಮವಾದ ವೈವಾಹಿಕ ಸಂಬಂಧವನ್ನು ಪೂರ್ವಾಪರ ಯೋಚಿಸದೇ ಬಿಡುವಿರಿ. ಸ್ವತಂತ್ರವಾಗಿ ಬದುಕಲು ನಿಮಗೆ ಇಷ್ಟವಾದೀತು. ಹೊಸ ವಿಷಯಗಳನ್ನು ಕಲಿತುಕೊಳ್ಳುವಲ್ಲಿ ಆಸಕ್ತಿ ವಹಿಸುವಿರಿ. ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಆಪ್ತರ ಜೊತೆ ಅನೇಕ ದಿನಗಳ ಅನಂತರ ನೀವು ಕಾಲಕಳೆಯುವಿರಿ. ಇದು ನಿಮಗೆ ಸಂತೋಷವನ್ನು ಕೊಡುವುದು. ಯಾವ ಮೆಚ್ಚುಗೆಯನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಲಾರಿರಿ. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಇನ್ನೊಬ್ಬರಿಂದ ನಿಮಗೆ ಉತ್ತೇಜನ ಸಿಗಲಿದೆ.
ಸಿಂಹ ರಾಶಿ :
ಧಾರ್ಮಿಕ ಆಸಕ್ತಿ ಸ್ಥಿರವಾಗಿರದು. ಪ್ರವಾಸದಲ್ಲಿ ಕಿರಿಕಿರಿ. ನಿಮ್ಮ ವ್ಯಕ್ತಿತ್ವದಿಂದ ಯಾರಾದರೂ ಆಕರ್ಷಿತರಾಗಬಹುದು. ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು. ಸಾಲವೇ ನಿಮಗೆ ಸಾಲವಾಗದು. ಅನಾರೋಗ್ಯದ ಕಾರಣ ಆರ್ಥಿಕ ಮಟ್ಟವು ಕುಸಿಯುವುದು. ಹೆಚ್ಚಿನ ಆರ್ಥಿಕ ಮೂಲವನ್ನೂ ಪಡೆಯಲು ಕಷ್ಟವಾದೀತು. ಹೊಸ ಉದ್ಯಮದ ಯೋಚನೆಯನ್ನು ಸದ್ಯ ಕೈ ಬಿಡುವುದು ಒಳ್ಳೆಯದು. ನಿಮ್ಮ ಕುಂದುಕೊರತೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲು ಇಚ್ಛೆಪಡುವುದಿಲ್ಲ. ಆಪ್ತರ ಜೊತೆ ನೋವು ಎಲ್ಲವನ್ನೂ ಮರೆಯಲು ಸುತ್ತಾಡಲಿದ್ದೀರಿ. ವೃತ್ತಿಪರ ಕೆಲಸ ನಿರೀಕ್ಷೆಯಂತೆ ನಡೆಯದೆ ಇರಬಹುದು. ಆಲೋಚನೆಗಳು ಅಸ್ಥಿರವಾಗಿ ಇರುತ್ತವೆ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ಅಧಿಕಾರಕ್ಕಾಗಿ ನೀವು ತಂತ್ರವನ್ನು ಬಳಸಬಹುದು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತೆಯಿಂದ ಇರುವುದು ಸುಖವೆನಿಸಬಹುದು. ಸರ್ಕಾರದ ಕೆಲಸವನ್ನು ಬಹಳ ಕಷ್ಟದಿಂದ ಮಾಡಿಸಿಕೊಳ್ಳಬೇಕು.
ಕನ್ಯಾ ರಾಶಿ :
ಕೈಯಲ್ಲಿರುವುದನ್ನು ಬಿಟ್ಟು, ಮತ್ತೊಂದನ್ನೂ ಪಡೆಯಲಾಗದು. ಔಷಧೀಯ ವ್ಯಾಪಾರದಲ್ಲಿ ಗಣನೀಯ ಪ್ರಗತಿಯು ಕಾಣಿಸುವುದು. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ನಿಮ್ಮ ಬಳಿ ಅಪರಿಚಿತರು ಸಹಾಯವನ್ನು ಕೇಳಿಕೊಂಡು ಬರಬಹುದು. ಇಲ್ಲ ಎನದೇ ಅಲ್ಪವನ್ನಾದರೂ ದಾನಮಾಡಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಯಾವ ಹೊರೆಯನ್ನೂ ನೀವು ಹೊರಲು ಸಿದ್ಧರಾಗುವುದಿಲ್ಲ. ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕಾರ್ಯವನ್ನು ಮಾಡುವ ಯೋಚನೆ ಇರಲಿದೆ. ಅಧಿಕ ಕಾರ್ಯಗಳು ಇರಲಿದ್ದು ನಿಮಗೆ ಯಾವುದೂ ಸೂಚಿಸದೇ ಹೋಗಬಹುದು. ಕೈಗೊಂಡ ಕೆಲಸಗಳಲ್ಲಿ ಅಡೆತಡೆ ಎದುರಾಗುತ್ತವೆ. ಅನಗತ್ಯ ವೆಚ್ಚ ಹೆಚ್ಚಾಗುವ ಸಂಭವವಿದೆ. ಕುಟುಂಬದ ಜವಾಬ್ದಾರಿ ನಿಮಗೆ ಹೆಚ್ಚಿನ ಭಾರವೆನಿಸಬಹುದು. ಮನಬಂದಂತೆ ಯಾರ ಬಗ್ಗೆಯೂ ಮಾತನಾಡುವುದು ಬೇಡ. ಬಂಧುಗಳ ಜೊತೆ ನಿಮ್ಮ ವಿಚಾರವನ್ನು ಹಂಚಿಕೊಂಡು ಸಮಾಧಾನ ಪಡುವಿರಿ. ಭವಿಷ್ಯದ ಬಗ್ಗೆ ಚಿಂತೆಯೂ ಕಾಡಬಹುದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ.
ತುಲಾ ರಾಶಿ :
ಚಿತ್ತವು ಭಾರವಾದಂತೆ ಅನಿಸಿದರೆ, ವಾಯುವಿಹಾರ ಮಾಡಿದರೆ ಹಗುರಾಗುವುದು. ನಿಮ್ಮ ಖರ್ಚಿನ ಅಂದಾಜು ಮೀರಿದಂತೆ ನಿಮಗೆ ಕಾಣಿಸಬಹುದು. ನಿಮಗೆ ಸಿಗುವ ಜಯದಿಂದ ಕುಟುಂಬಕ್ಕೆ ಸಂತಸ. ಒಂಟಿಯಾಗಿ ಇದ್ದಷ್ಟೂ ನಿಮಗೆ ಏನೇನೋ ಯೋಚನೆಗಳು ಬರಬಹುದು. ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಕೆಲವು ಪ್ರಗತಿಗಳು ನಿಮಗೆ ಆಶ್ಚರ್ಯಕರ ಎನಿಸುವುದು. ಜಾಣತನದಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಬೇಕಾಗಬಹುದು. ಇಂದು ನಿಮಗೆ ಎಲ್ಲ ಕಾರ್ಯಗಳೂ ವಿಳಂಬವಾಗಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲದೇ ಹೋಗಬಹುದು. ನೀವು ನಡೆಸುವ ಉದ್ಯಮಕ್ಕೆ ನೀವು ವೇಗವನ್ನು ಕೊಡುವಿರಿ. ವ್ಯವಹಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗದಲ್ಲಿನ ಸಮಸ್ಯೆ ಪರಿಹಾರವಾಗುತ್ತವೆ. ವಿದೇಶಪ್ರಯಾಣಕ್ಕೆ ನಿಮಗೆ ಅವಕಾಶಗಳು ಬರಬಹುದು. ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡುವಿರಿ. ಆತ್ಮೀಯರ ಒಡನಾಟದಿಂದ ನಿಮಗೆ ಖುಷಿಯಾಗಲಿದೆ. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು.
ವೃಶ್ಚಿಕ ರಾಶಿ :
ನಿಮ್ಮ ಮೇಲೆ ಟೀಕೆಗಳು ಬರಲಿವೆ. ಅದನ್ನು ಧನಾತ್ಮಕವಾಗಿ ಪಡೆದರೆ ಅದೇ ನಿಮಗೆ ಮಿತ್ರನಾಗುವುದು. ಎಲ್ಲವನ್ನೂ ಸಂಭ್ರಮಿಸಿದರೆ ಯಾವುದೂ ಕಷ್ಟವೆನಿಸದು. ನಿಮ್ಮ ಸಮಾನರಿಗೂ ಕೆಲವು ಸಂದರ್ಭದಲದಲಿ ಗೌರವ ಕೊಡಬೇಕಾಗುವುದು. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗದು. ದ್ವಂದ್ವಗಳು ಬಂದಾಗ ಎದುರಿಸುವ ಬಗ್ಗೆ ಯೋಚಿಸಿ. ಆಪ್ತರ ಭೇಟಿಯಾಗುವ ನಿಮ್ಮ ಕಾರ್ಯವು ಸಫಲವಾಗದು. ಅಧಿಕಾರಿ ವರ್ಗ ನಿಮ್ಮ ಮೇಲೆ ಬಂದ ದೂರಿನ ವಿಚಾರಣೆಯನ್ನು ಮಾಡಬಹುದು. ಸ್ತ್ರೀಯರ ಸಖ್ಯವನ್ನು ನೀವು ಮಾಡಿಕೊಳ್ಳುವಿರಿ. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲು ನಿಮಗೆ ಕೆಲವು ತಂತ್ರಗಳು ಗೊತ್ತಿರುವುದು. ಅದನ್ನು ಪ್ರಯೋಗಿಸುವಿರಿ. ವ್ಯವಹಾರ ಲಾಭದಾಯಕವಾಗಿ ನಡೆಯಲಿದೆ, ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ನಿಮ್ಮ ಅಗಾಧ ಜ್ಞಾನದ ಬಗ್ಗೆ ಸ್ಥೈರ್ಯವು ಬೇಕು. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ.
ಧನು ರಾಶಿ :
ಅನಪೇಕ್ಷಿತ ಕಾನುನಾತ್ಮಕ ತಿಳಿವಳಿಕೆಯನ್ನು ಪಡೆದು ಏನೂ ಆಗದು. ನಿಮಗೆ ಹೊಂದಾಣಿಕೆ ಸ್ವಭಾವವು ಹಿಡಿಸುವುದಿಲ್ಲ. ಸುಖವಾಗಿರಲು ಬೇಕಾದ ಎಲ್ಲ ಮಾರ್ಗಗಳನ್ನು ಹುಡುಕುವಿರಿ. ಗೊತ್ತಿಲ್ಲದೇ ಮಾತನಾಡುವುದು ನಿಮಗೆ ಶೋಭೆ ತರದು. ವಂಚನೆಯ ಬಲೆಯಲ್ಲಿ ನೀವು ಸಿಕ್ಕಿಕೊಳ್ಳಬಹುದು. ಕಲಹವದಿಂದ ನಿಮಗೆ ತೃಪ್ತಿ ಸಿಕ್ಕರೂ ಇತರರ ಪಾಡನ್ನೂ ಗಮನಿಸಿ. ನಿಮ್ಮವರನ್ನು ರಕ್ಷಿಸಿಕೊಳ್ಳಲು ಬಹಳ ಪ್ರಯತ್ನ ಪಡುವಿರಿ. ನೀವು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರಲಾರಿರಿ. ಮನೆಯವರ ವೈರವನ್ನು ಕಟ್ಟಿಕೊಂಡು ಏನು ಸಾಧಿಸುವಿರಿ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚಿಂತನೆ. ವ್ಯವಹಾರದಲ್ಲಿ ಏರುಪೇರು ಅಂದಾಜಿಗೆ ಸಿಗದು. ಉದ್ಯೋಗ ಕ್ಷೇತ್ರದಲ್ಲಿ ಗೊಂದಲ. ಸಂಗಾತಿಯ ಪ್ರೀತಿಯನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸುವಿರೊ. ಬಂಧುಗಳು ನಿಮ್ಮನ್ನು ಮನೆಗೆ ಆಹ್ವಾನಿಸಬಹುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಆಸಕ್ತಿಯು ಕಡಿಮೆ ಆಗಬಹುದು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು.
ಮಕರ ರಾಶಿ :
ನಿಮ್ಮ ಬಗ್ಗೆ ಋಣಾತ್ಮಕ ಮಾತು ಬಂದಾಗ ನಿಮ್ಮ ಮಾತಿನ ಒರಸೆ ಬದಲಾಗುವುದು. ಸಾಲವನ್ನು ತೀರಿಸುವ ಬಗ್ಗೆ ಸಣ್ಣ ಪ್ರಯತ್ನವನ್ನಾದರೂ ಮಾಡಿ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಆರ್ಥಿಕ ಮೂಲವು ಕೈತಪ್ಪಿ ಹೋಗಬಹುದು. ಕನಸನ್ನು ನನಸಾಗಿಸಲು ನಿಮ್ಮ ಪ್ರಯತ್ನ ಅತಿಮುಖ್ಯವಾಗುವುದು. ಎಲ್ಲವೂ ಸರಿಯಿದ್ದರೂ ಮತ್ತೆಲ್ಲೋ ತಪ್ಪನ್ನು ಕಂಡುಕೊಳ್ಳುವಿರಿ. ನಿಮ್ಮ ನಿಯಮವನ್ನು ಪಾಲಿಸಿದ್ದು ನಿಮಗೆ ಖುಷಿ ಕೊಡಬಹುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ಅಲ್ಪ ಪ್ರಮಾಣದಲ್ಲಿ ಖುಷಿ ಕಾಣಿಸುವುದು. ನಿಮಗೆ ಒತ್ತಡದಲ್ಲಿ ಕೆಲಸ ಮಾಡುವುದು ಅಭ್ಯಾಸವಾಗಿ ಹೋಗಿದೆ. ಸ್ವಲ್ಪ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ. ಕೈಗೊಂಡ ಕೆಲಸಗಳಲ್ಲಿ ಅಡೆತಡೆ. ತಾಯಿಯಿಂದ ಅತಿಯಾದ ಸಹಕಾರವನ್ನು ಬಯಸುವಿರಿ. ಜನರ ಜೊತೆ ಬೆರೆಯಲು ನಿಮಗೆ ಇಂದು ಸಮಯ ಸಾಕಾಗದು. ಸಂಗಾತಿಯನ್ನು ನೀವು ಖುಷಿಪಡಿಸಲು ಎಲ್ಲಿಗಾದರೂ ಕರೆದುಕೊಂಡು ಹೋಗುವಿರಿ. ಯಾರಿಂದಲೂ ದಿಡೀರ್ ಬದಲಾವಣೆಯನ್ನು ನಿರೀಕ್ಷಿಸುವುದು ಬೇಡ.
ಕುಂಭ ರಾಶಿ :
ಪ್ರಾಯೋಗಿಕವಾಗಿ ಯೋಚಿಸಿ, ಅದನ್ನು ಸುಧಾರಿಸಿಕೊಳ್ಳುವಿರಿ. ನಿಮ್ಮ ನಕಾರಾತ್ಮಕ ಆಲೋಚನೆಗಳು ಇತರರಿಗೂ ಹಬ್ಬಬಹುದು. ಇಂದು ನಿಮಗೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಬಂಧುಗಳ ವಿಚಾರದಲ್ಲಿ ನಿಮಗೆ ಸಂಪೂರ್ಣ ಮನಸ್ಥಿತಿಯು ಏಕರೂಪವಾಗಿ ಇರಲಾರದು. ಪರಿಚಿತ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ಕ್ರಮವು ಬದಲಾದೀತು. ಅಧ್ಯಾತ್ಮವು ನಿಮಗೆ ನೆಮ್ಮದಿಯನ್ನು ಕೊಡುವುದು. ಮುಖದಲ್ಲಿ ನಗುವುದು ನಿಮ್ಮ ಎಲ್ಲ ಕೆಲಸಗಳನ್ನು ಮಾಡಿಸಿಕೊಡುವುದು. ಆರ್ಥಿಕ ಪರಿಸ್ಥಿತಿ ಸರಿಯಾಗಲಿದೆ. ಆತ್ಮೀಯ ಗೆಳೆಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆಸ್ತಿ ಲಾಭ. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಇನ್ನೊಬ್ಬರ ಸುಖಕ್ಕಾಗಿ ನೀವು ಸುಖವನ್ನೇ ತ್ಯಾಗಮಾಡುವಿರಿ. ಜ್ಞಾನದ ಬಗ್ಗೆ ನಿಮಗೆ ಅರಿವು ಕಡಿಮೆ ಇರುವುದು ಗೊತ್ತಾಗುವುದು. ವಿನಾ ಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು.
ಮೀನ ರಾಶಿ :
ಪ್ರಗತಿಗೆ ತಕ್ಕಂತ ನಡೆ ನಿಮ್ಮದಾಗಲಿ. ನಿಮಗೆ ಯಾವುದೇ ಕಟ್ಟುಪಾಡುಗಳಲ್ಲಿ ಇರಲು ಮನಸ್ಸಾಗದು. ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ಭವಿಷ್ಯದ ಬಗ್ಗೆ ನಿಮಗಿರುವ ಕಲ್ಪನೆಯು ಬದಲಾಗಬಹುದು. ಹಣಕಾಸಿನ ವಿಚಾರದಲ್ಲಿ ನೀವು ಬಹಳ ಕಾಳಜಿಯನ್ನು ವಹಿಸಬೇಕಾಗುವುದು. ಅತಿಯಾದ ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ಮುಗ್ಗರಿಸಬಹುದು. ವಾಹನಕ್ಕಾಗಿ ಖರ್ಚು ಮಾಡುವ ಸ್ಥಿತಿಯು ಬರಬಹುದು. ಸಹಾಯವನ್ನು ಯಾರಾದರೂ ಕೇಳುವರು. ಒಂಟಿಯಾಗಿ ಇರಲು ನೀವು ಇಂದು ಹೆಚ್ಚು ಇಷ್ಟಪಡಬಹುದು. ಆಸ್ತಿಗೆ ಸಂಬಂಧಿತ ವಿವಾದ ಬಗೆಹರಿಯಲಿದೆ. ಮನಸ್ಸಿಗೆ ಶಾಂತಿ ಸಿಗಲಿದೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ವ್ಯಾಪಾರ ವ್ಯವಹಾರ ಲಾಭದಾಯಕವಾಗಿರಲಿದೆ. ಭೂಮಿಗೆ ಸಂಬಂಧಪಟ್ಟ ಕಲಹವು ತಾತ್ಕಾಲಿಕವಾಗಿ ನಿಲ್ಲುವುದು. ಏನನ್ನಾದರೂ ಯೋಚಿಸುವ ಬದಲು ಆಗಬೇಕಾದ ಕೆಲಸದ ಕಡೆ ಗಮನಕೊಡುವುದು ಮುಖ್ಯವಾಗುವುದು. ಹಳೆಯ ಕಡತಗಳನ್ನು ನೀವು ವಿಲೇವರಿ ಮಾಡುವಿರಿ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ.
Views: 43