
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 09 : ನಾವೆಲ್ಲರೂ ಸಹಾ ಮಧ್ಯಪಾನ ಹಾಗೂ ಮಾದಕ ವಸ್ತುಗಳ ವಿರುದ್ದ ಯೋಧರಾಗಿ ಕೆಲಸವನ್ನು ಮಾಡುವುದರ ಮೂಲಕ ಇದನ್ನು ತಡೆಯುವ ಕಾರ್ಯವನ್ನು ಮಾಡಬೇಕಿದೆ ಎಂದು ಪೋಲಿಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಉಮೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ಆರ್) ಚಿತ್ರದುರ್ಗ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ಚಿತ್ರದುರ್ಗ ಜಿಲ್ಲೆ. ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಚಿತ್ರದುರ್ಗ ಮತ್ತು ಸಿರಿಗೆರೆ ಯೋಜನಾ ಕಛೇರಿವತಿಯಿಂದ ನಗರದ ಸದ್ಗುರು ಶ್ರೀ ಕಬೀರಾನಂದ ಸ್ವಾಮಿ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ಮತ್ತು ದುಶ್ಚಟ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಜ್ಞಾನ ನಿಧಿ ಶಿಷ್ಯವೇತನಾ ಮಂಜೂರಾತಿ ಪತ್ರ ವಿತರಣೆ ಮಾಡಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಯುವ ಜನತೆ ಮಧ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ, ಇದರಿಂದ ನಮ್ಮ ದೇಶ ಹಾಗೂ ಅದನ್ನು ಬಳಕೆ ಮಾಡುವವರು ಸಹಾ ಆರ್ಥಿಕವಾಗಿ ದುರ್ಬಲರಾಗುತ್ತಾರೆ. ಇದ್ದಲ್ಲದೆ ನಮ್ಮ ನೆಮ್ಮದಿಯನ್ನು ಸಹಾ ಹಾಳು ಮಾಡುತ್ತಿದೆ, ಇದರ ಬಗ್ಗೆ ನಮ್ಮ ಪೋಲಿಸ್ಇಲಾಖೆಗೆ ಸಾಕಷ್ಟು ದೂರುಗಳು ಬರುತ್ತವೆ ಸಾರ್ ನಮ್ಮಲ್ಲಿ ಅನಧಿಕೃತವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ ಇದರಿಂದ ನಮ್ಮ ಗಂಡಸರನ್ನು ಹಾಳಾಗುತ್ತಿದ್ದಾರೆ ಇದನ್ನು ನಿಲ್ಲಿಸಿ ಎಂದು ದೂರವಾಣಿ ಮೂಲಕ ಕರೆಗಳು ಬರುತ್ತವೆ, ಮಧ್ಯವಾಗಲಿ, ಮಾದಕ ವಸ್ತುಗಳಲ್ಲಿ ಅದನ್ನು ಸೇವನೆ ಮಾಡುವವರು ಮನಸ್ಸು ಮಾಡಿದರೆ ಇದನ್ನು ನಿಲ್ಲಿಸಲು ಸಾಧ್ಯವಿದೆ. ಮನಸ್ಸಿಗಿಂತ ದೊಡ್ಡದ್ದು ಯಾವುದು ಇಲ್ಲ ಎಂದು ತಿಳಿಸಿದ ಅವರು ಇದನ್ನು ನಿಲ್ಲಿಸಲು ಬರೀ ನಮ್ಮ ಇಲಾಖೆವತಿಯಿಂದ ಮಾತ್ರ ಸಾಧ್ಯವಿಲ್ಲ ಇದಕ್ಕೆ ಜನತೆಯ ಸಹಕಾರ ಬಹಳ ಅಗತ್ಯ ಇದೆ. ಎಲ್ಲರು ಸೇರಿದರೆ ಮಾತ್ರ ಇದನ್ನು ನಿಲ್ಲಿಸಲು ಸಾಧ್ಯವಿದೆ ಎಂದರು.
ನಮ್ಮ ಪೋಲಿಸ್ ಇಲಾಖೆವತಿಯಿಂದ ಆಪ್ನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನೀವುಗಳು ಅನಧಿಕೃತವಾಗಿ ಮಧ್ಯವನ್ನು ಮಾರಾಟ ಮಾಡುವವರ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡು ವವರ ಮಾಹಿತಿಯನ್ನು ನಮಗೆ ನೀಡಿದೆ ಇದನ್ನು ತಡೆಗಟ್ಟಗಲು ಸಾಧ್ಯವಾಗುತ್ತಿದೆ ಇದರಲ್ಲಿ ನಮಗೆ ಯಾರು ಮಾಹಿತಿ ನೀಡಿದರು ಎಂಬ ಮಾಹಿತಿಯನ್ನು ಎಲ್ಲಿಯೂ ಸಹಾ ಬಹಿರಂಗ ಮಾಡದೆ ಗೌಪ್ಯತೆಯನ್ನು ಕಾಪಾಡಲಾಗುವುದು ಈ ಕೆಲಸವನ್ನು ಎಲ್ಲರು ಮಾಡಿದಾಗ ಮಾತ್ರ ಈ ದುಶ್ಚಟವನ್ನು ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಉಮೇಶ್ ಬಾಬು ತಿಳಿಸಿದರು.
ಪ್ರಾದೇಶಿಕ ಅಧಿಕಾರಿ ನಾಗರಾಜ್ ಪ್ರಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳದ ವೀರೇಂದ್ರ ಹೆಗೆಡೆಯವರು 1982ರಲ್ಲಿ
ಬೆಳ್ಳಂಗ್ತಡಿಯಲ್ಲಿ ಈ ಸಂಸ್ಥೆಯನ್ನು ಸಣ್ಣದಾಗಿ ಪ್ರಾರಂಭ ಮಾಡಿದರು, ಅಂದು ಅಲ್ಲಿನ ಜನತೆಗೆ ಅರ್ಥಿಕ ಪ್ರಗತಿಗಾಗಿ ಈ ಸಂಸ್ಥೆಯನ್ನು ನಡೆಸುವುದರ ಮೂಲಕ ಸಮಾರು 10 ವರ್ಷ ನಿರಂತರವಾಗಿ ನಡೆಸಿದಗ್ದು ತದ ನಂತರ ಇದನ್ನು ರಾಜ್ಯ ವ್ಯಾಪ್ತಿಯಾಗಿ
ವಿಸ್ತರಣೆಯನ್ನು ಮಾಡಲಾಯಿತು. ಇದ್ದಾದ ನಂತರ ಹಲವಾರು ಮಹಿಳೆಯರಿಂದ ಬಂದ ಬೇಡಿಕೆ ಅನ್ವಯ ನಮ್ಮ ಗಂಡದಿರು ಮಧ್ಯಪಾನವನ್ನು ಮಾಡುವುದರ ಮೂಲಕ ದುಡಿಮೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ತಿಳಿಸಿದಾಗ ಹೆಗಡೆಯವರು ಇದನ್ನು ತಡೆಯವ ಪ್ರಯತ್ನವನ್ನು ಮಾಡಿದರು 1990ರಿಂದ ನಮ್ಮ ಸಂಸ್ಥೆವತಿಯಿಂದ ದುಶ್ಚಟ ವಿರುದ್ದ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಇದುವರೆವಿಗೆ 1222 ಶಿಬಿರಗಳನ್ನು ಮಾಡುವುದರ ಮೂಲಕ 1.36 ಕುಟುಂಬಗಳಿಗೆ ಜೀವನ ನೀಡಲಾಗಿದೆ. ಇದ್ದಲ್ಲದೆ ನಮ್ಮ ಸಂಸ್ಥೆವತಿಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಥಿಕವಾಗಿ ದುರ್ಬಲರಾದವರನ್ನು ಸಬಲರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೂಪ ಜನಾರ್ಧನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕಾರ್ಯದರ್ಶಿ ಹುರುಳಿ ಎಂ. ಬಸವರಾಜ ಭಾಗವಹಿಸಿ ಉಪನ್ಯಾಸ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಕಮಲಾಕ್ಷ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಎಸ್.ಟಿ. ನಾಗರಾಜ್ ಸಂಗಮ, ಸಿ.ಬಿ.ನಾಗರಾಜ, ಮಹಮ್ಮದ್ ನೂರುಲ್ಲಾ, ಶ್ರೀಮತಿ ಶಾಂತಕುಮಾರಿ ಹಾಗೂ ಜೆ. ರಾಜು ಸಬ್ಇನ್ಸ್ಪೆಕ್ಟರ್ ಗೀತಾ ಭಾಗವಹಿಸಿದ್ದರು.
ನಿಂಗಮ್ಮ ತಂಡ ಪ್ರಾರ್ಥಿಸಿದರೆ, ಸಿರಿಗೆರೆ ಯೋಜನಾಧಿಕಾರಿ ರವಿಚಂದ್ರ ಸ್ವಾಗತಿಸಿದರು, ಬಾಲಕೃಷ್ಣ ವಂದಿಸಿದರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.). ಯೋಜನಾಧಿಕಾರಿ ಚಂದ್ರಹಾಸ್ ಕಾರ್ಯಕ್ರಮ ನಿರೂಪಿಸಿದರು.
Views: 21