ಖಗೋಳ ವಿಸ್ಮಯ ಹಾಗೂ ವೈಚಾರಿಕ ಚಿಂತನೆ ಕುರಿತು ವಿಶೇಷ ಉಪನ್ಯಾಸ ಕಡೂರಿನಲ್ಲಿ.

ಕಡೂರು, ಅ.10:
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಡೂರಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ “ಖಗೋಳ ವಿಸ್ಮಯ ಹಾಗೂ ವೈಚಾರಿಕ ಚಿಂತನೆ” ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇಂದು ಕಾಲೇಜಿನ ಜಿ-01 ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜಣ್ಣ ಕೆ.ಎ. ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್ (ರಿ), ಚಿತ್ರದುರ್ಗ ಸಂಸ್ಥೆಯ ಕಾರ್ಯದರ್ಶಿ ಶ್ರೀ. ಎಚ್.ಎಸ್.ಟಿ. ಸ್ವಾಮಿ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಮತ್ತು ತಾರಕಾ ವಿಶ್ವದ ರಹಸ್ಯಗಳ ಬಗ್ಗೆ ಆಸಕ್ತಿಕರ ಉಪನ್ಯಾಸ ನೀಡಿದರು.

ಉಪನ್ಯಾಸದಲ್ಲಿ ಅವರು, ಖಗೋಳಶಾಸ್ತ್ರವು ಕೇವಲ ವಿಜ್ಞಾನ ವಿಷಯವಲ್ಲ, ಅದು ಮಾನವ ಕುತೂಹಲ ಮತ್ತು ವೈಚಾರಿಕ ಚಿಂತನೆಗೆ ದಾರಿತೋರಿಸುವ ಪಠ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ವಿಜ್ಞಾನಾಧಾರಿತ ದೃಷ್ಟಿಕೋನ ಬೆಳೆಸಿಕೊಳ್ಳಬೇಕೆಂದು ಅವರು ಹಿತವಚನ ನೀಡಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರು ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಶ್ರೀ. ಸಂಪತ್ ಕುಮಾರ್ ವೈ.ಜಿ., ಹಾಗೂ ವಿಭಾಗಾಧ್ಯಕ್ಷರಾದ ಡಾ. ಸೋಮಶೇಖರಪ್ಪ ಎಂ.ಪಿ. (ರಸಾಯನಶಾಸ್ತ್ರ), ಡಾ. ಕುಮಾರಸ್ವಾಮಿ ಎಂ.ಎನ್. (ಸಸ್ಯಶಾಸ್ತ್ರ), ಡಾ. ಪಾಲಾಕ್ಷಮೂರ್ತಿ ಬಿ. (ಗಣಿತಶಾಸ್ತ್ರ), ಮತ್ತು ಡಾ. ದಯಾನಂದ ಎಚ್.ಎಂ. (ಭೌತಶಾಸ್ತ್ರ) ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು.

Views: 60

Leave a Reply

Your email address will not be published. Required fields are marked *