ಚಿತ್ರದುರ್ಗ ಅ. 11,
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಯುವ ಪರಿವರ್ತನೆ ಯಾತ್ರೆ ಯಾವುದೆ ಪಕ್ಷ, ವ್ಯಕ್ತಿಯ ವಿರುದ್ಧ ಅಲ್ಲ, ಯುವಕರ ಜಾಗೃತಿಗಾಗಿ, ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಈ ಯಾತ್ರೆ ಎಂದು ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರು ತಿಳಿಸಿದರು.
ಬೀದರನಿಂದ ಬೆಂಗಳೂರಿನವರೆಗೆ ಯುವ ಪರಿವರ್ತನಾ ಯಾತ್ರೆ ಆರಂಭಿಸಿದ್ದ, ಮುದೋಳ ಯಲ್ಲಪ್ಪ ಹೆಗಡೆ ಹಾಗೂ ದ್ರಾವಿಡ ಸಂಘಟನೆ ಮಂಡ್ಯ ಅಭಿಗೌಡ ಇವರ ನೇತೃತ್ವದಲ್ಲಿ ನಗರದ ಕನಕ ವೃತದಿಂದ ಜಿಲ್ಲಾಧಿಕಾರಿ ಕಚೇರಿ ಅವರಿಗೆ ಮೆರವಣಿಗೆಯನ್ನು ನಡೆಸಿ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿ ಮಾತನಾಡಿದ ಅವರು, ನಮ್ಮ ಈ ಪರಿವರ್ತನೆ ಯಾತ್ರೆ ಯಾವುದೋ ಪಕ್ಷ ವ್ಯಕ್ತಿಯ ವಿರುದ್ಧ ಅಲ್ಲ. ಯುವ ಸಮೂಹ ಪರಿವರ್ತನೆ ಆಗಬೇಕಾಗಿದೆ ಅನೇಕ ಯುವಕರು ದುಷ್ಟಗಳಿಗೆ ಬಲಿಯಾಗುತ್ತಿರುವುದರಿಂದ ಬದಲಾವಣೆ ಕಾಣುತ್ತಿಲ್ಲ.
ಪ್ರಜಾಪ್ರಭುತ್ವದ ಉಳಿವಿಗಾಗಿ ಯುವ ಜನರ ಶಕ್ತಿ ಬಹಳ ಅವಶ್ಯಕತೆ ಇದೆ. ಯುವ ಜನರು ಜಾಗೃತ ಆದರೆ ಎಲ್ಲ ರೀತಿಯ ಜಾಗೃತಿ ಮೂಡಿಸಲು ಸಾಧ್ಯ. ಯುವಕರು ರೈತ ಪರ, ಕಾರ್ಮಿಕ ಪರ, ಶೈಕ್ಷಣಿಕ ವಿಚಾರಗಳ ಕಡೆಗೆ ಗಮನ ಹರಿಸಬೇಕಿದೆ. ಹಾಳಾದ ವ್ಯವಸ್ಥೆ ಸರಿಯಾಗ ಬೇಕಾದರೆ ಯುವಕರಿಂದ ಸಾಧ್ಯ ಎಂದರು.
ದ್ರಾವಿಡ ಸಂಘಟನೆಯ ಅಭಿಗೌಡ್ರು ಮಾತನಾಡಿ ಕರ್ನಾಟಕ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷವನ್ನು ಸರ್ಕಾರದ ಗಮನಕ್ಕೆ ತರಲು ಪಕ್ಷಾತೀತವಾಗಿ ಜಾತಿತವಾಗಿ ಸರ್ವ ಧರ್ಮದ ಸರ್ವರು ಜಿಲ್ಲಾ ಕೇಂದ್ರಗಳಲ್ಲಿ ಜಾತವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ, ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಕ್ರಮವಹಿಸಬೇಕಿದೆ, ಪ್ರತಿಯೊಂದು ಶಾಲೆಗೆ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಯುವಕರ ಕನಸು ಸಮಯಕ್ಕೆ ಸರಿಯಾದ ಉದ್ಯೋಗಾವಕಾಶಗಳನ್ನು ರಾಜ್ಯ ಸರ್ಕಾರಕ್ಕೆ ಸರಿಯಾದ ಸಮಯಕ್ಕೆ ಒದಗಿಸಿ ಕೊಡಬೇಕು, ಅಕ್ರಮವಾಗಿ ನಡೆಯುತ್ತಿರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸರ್ಕಾರ ನಿಯಂತ್ರಿಸಬೇಕು, ಕಷ್ಟ ಬಿದ್ದು ಓದಿದಂತಹ ಯುವ ಸಮುದಾಯಕ್ಕೆ ಅನ್ಯಾಯ ಆಗಬಾರದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜವಾದಿ ಪಾರ್ಟಿ ಸಂಚಾಲಕ ಲಕ್ಷ್ಮಿಕಾಂತ್, ಪತ್ರಕರ್ತರಾದ ಮಾಲ್ತೇಶ್ ಅರಸು, ಹನುಮಂತಪ್ಪ, ಕುರಿ ನಾಗರಾಜ್, ಕುಮಾರಸ್ವಾಮಿ, ಚಿದಾನಂದ, ಸಂದೀಪ್, ನಾಗರಾಜ್, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 10