ಯುವ ಜನತೆ ಮಾನಸಿಕ ಹಾಗೂ ದೈಹಿಕವಾಗಿ ಸಧೃಢರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ:ಹೆಚ್ಚುವರಿ ರಕ್ಷಾಣಾಧಿಕಾರಿ ಡಾ.ಶಿವಕುಮಾರ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 11: ಇಂದಿನ ದಿನಮಾನದಲ್ಲಿ ದೇಶ, ರಾಜ್ಯ ಜಿಲ್ಲೆ ಸಧೃಢವಾಗಿರಬೇಕಾದರೆ ಯುವ ಜನತೆ ಮಾನಸಿಕ ಹಾಗೂ ದೈಹಿಕವಾಗಿ ಸಧೃಢರಾದಾಗ ಮಾತ್ರ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೆಚ್ಚುವರಿ ರಕ್ಷಾಣಾಧಿಕಾರಿಗಳಾದ ಡಾ.ಶಿವಕುಮಾರ್ ತಿಳಿಸಿದರು.

ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ವಿಜ್ಞಾನ ಕಾಲೇಜು, ದಾವಣಗೆರೆ ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಕಾಲೇಜಿನ ದೈಹಿಕ ಶಿಕ್ಷಣ ಮತು ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಂಜೆ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆದ 2025-26ನೇ ಶೈಕ್ಷಣಿಕ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳೆಯರ ವೇಟ್‍ಲಿಫ್ಟಿಂಗ್, ಪವರ್‍ಲಿಫ್ಟಿಂಗ್ ಮತ್ತು ಪುರುಷರ ದೇಹರ್ದಾಢ್ಯ ಸ್ಫರ್ಧೆಗಳ ಸಮಾರೋಪ ಸಮಾರಂಭದಲ್ಲಿ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.

filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 266.90918; hist255: 0.0; hist252~255: 0.0; hist0~15: 0.0;

ಇಂದಿನ ದಿನಮಾನದಲ್ಲಿ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುವುದರ ಮೂಲಕ ತಮ್ಮ ಜೀವನವನ್ನು ಹಾಳು
ಮಾಡಿಕೊಳ್ಳುವುದ್ದಲ್ಲದೆ ತಮ್ಮ ಆರೋಗ್ಯವನ್ನು ಸಹಾ ಹಾಳು ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ಅವರಿಗೆ ಮಾತ್ರ ನಷ್ಠವಲ್ಲ ಇದರಿಂದ ದೇಶಕ್ಕೂ ಸಹಾ ನಷ್ಠವಾಗುತ್ತದೆ. ಯುವ ಜನತೆ ನಮ್ಮ ದೇಶದ ಸಂಪತ್ತು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಮಾತ್ರ ದೇಶ ಪ್ರಗತಿಯನ್ನು ಕಾಣಲು ಸಾಧ್ಯವಿದೆ. ತಮ್ಮ ವಿದ್ಯಾಭ್ಯಾಸದ ಜೊತೆಯಲ್ಲಿ ಯಾವುದಾದರೊಂದು ಕ್ರೀಡೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವೂ ತೊಡಗಿಸಿಕೊಳ್ಳಿ ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿ ಇರಲು ಸಹಾಯವಾಗುತ್ತದೆ ಎಂದು ಯುವ ಜನತೆಗೆ ಕಿವಿ ಮಾತು ಹೇಳಿದರು.

ಕ್ರೀಡೆ ಎಂದರೆ ಉತ್ಸಾಹ ಉತ್ಸಾಹ ಎಂದರೆ ಕ್ರೀಡೆಯಾಗಿದೆ, ಈ ಕ್ರೀಡೆಯನ್ನು ಯುವ ಜನತೆ ಮಾಡಬೇಕಿದೆ ನಮ್ಮಂತಹ ವಯಸ್ಸಾದವರು ಮಾಡಲು ಸಾಧ್ಯವಿಲ್ಲ, ಉತ್ಸಾಹ ಎಂದರೆ ಯುವ ಜನತೆಯಲ್ಲಿ ಇರುತ್ತದೆ, ಇದನ್ನು ನೋಡಿದರೆ ನಮ್ಮ ಕಾಲೇಜಿನ ದಿನಗಳು ನಮಗೆ ನೆನಪಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ದೆ ಎಂದರೆ ಬರೀ ಪಠ್ಯ ಓದುವುದು ಅಂಕಗಳನ್ನುಗಳಿಸುವುದು ಮಾತ್ರವಲ್ಲಿ ಈ ರೀತಿಯಾದ ಪಂದ್ಯಾವಳಿ ಯಲ್ಲಿಯೂ ಸಹಾ ತೀವ್ರವಾದ ಸ್ಪರ್ದೆ ಇರುತ್ತದೆ ಅದನ್ನು ಸಹಾ ಎದುರಿಸಬೇಕಿದೆ, ಇದಕ್ಕೆ ಸಜ್ಜಾಗಬೇಕಿದೆ. ಈ ರೀತಿಯಾದ ದೈಹಿಕ ಸ್ಪರ್ದೆಗಳಲ್ಲಿ ಕ್ಷಮತೆ ಅತಿ ಮುಖ್ಯವಾಗಿ ಇರುತ್ತವೆ. ಹಿಂದಿನ ತಲೆಮಾರಿನ ಜನತೆ ಈಗಲೂ ಸಹಾ ಸುಮಾರು ದೂರ ನಡೆಯುತ್ತಾರೆ. ಅದರೆ ಇಂದಿನ ಯುವ ಜನತೆ ಅಷ್ಟು ದೂರ ನಡೆಯುವುದಿಲ್ಲ, ಅವರು ಅಷ್ಠಾಗಿ ದೈಹಿಕ ಚಟುವಟಿಕೆಗಳಿಂದ ಇರುವುದಿಲ್ಲ, ಈ ರೀತಿಯಾದ ಸ್ಪರ್ದೆಗಳ ಮೂಲಕ ಯುವ ಜನತೆಯನ್ನು ಹುರಿದುಂಬಿಸಬೇಕಿದೆ ಆಗ ಅವರು ಸಹಾ ಇಂತಹ ಪಂದ್ಯಾವಳಿಯಲ್ಲಿ ಸಕ್ರ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದರು.

filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 260.04254; hist255: 0.0; hist252~255: 0.0; hist0~15: 0.0;


ಇಂದಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಈ ರೀತಿಯಾದ ಅವಕಾಶಗಳು ಸಹಾ ಹೆಚ್ಚಾಗಿ ಯುವ ಜನತೆಗೆ ಸಿಗುತ್ತವೆ, ಇದಕ್ಕೆ ಮರುಳಾದರೆ ನಿಮ್ಮ ಜೀವನ ಸಂಕಟಕ್ಕೆ ಈಡಾಗುತ್ತದೆ ಸಾಧ್ಯವಾದಷ್ಟು ಇದರಿಂದ ದೂರ ಇರುವಂತಾಗಬೇಕಿದೆ. ಅಗ ಮಾತ್ರ ಉತ್ತಮವಾದ ಜೀವನ ಸಾಗಿಸಲು ಸಾಧ್ಯವಿದೆ. ಮಾನಸಿಕ ಮತ್ತು ದೃಹಿಕವಾಗಿ ಸದೃಡವಾಗಿದ್ದಾರೆ ಮಾತ್ರ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದ ಅವರು ಚಿತ್ರದುರ್ಗ ಜಿಲ್ಲೆಯನ್ನು ನಶೆಮುಕ್ತವಾಗಿಸಲು ಪೊಲೀಸ್ ಇಲಾಖೆ ಯೊಂದಿಗೆ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿ ಅ.12 ರಂದು ಪೋಲಿಸ್‍ಠಾಣೆ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರವಿಕಾಂತ್ ವಹಿಸಿದ್ದರು. ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಹಾಗೂ ರಾಷ್ಟ್ರೀಯ ತೀರ್ಪುಗಾರರಾದ ಎನ್.ಡಿ.ಕುಮಾರ್, ರಾಷ್ಟ್ರೀಯ ಪವರ್ ಲಿಫ್ಟಿಂಗ್ ತರಬೇತುದಾರರಾದ ಕೆ.ಕುಮಾರ್, ಶಂಕ್ರಪ್ಪ, ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಕರಪ್ಪ, ಹನುಮಂತಪ್ಪ, ರೇಖಾ, ದೇವೇಂದ್ರಪ್ಪ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಘವೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
ಈ ಪಂದ್ಯಾವಳಿಯಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯದ 40 ಕಾಲೇಜುಗಳಿಂದ ಸುಮಾರು 250 ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳು ಸ್ಪರ್ದೆಯಲ್ಲಿ ಭಾಗವಹಿಸಿದ್ದರು.

Views: 13

Leave a Reply

Your email address will not be published. Required fields are marked *