ಚಿತ್ರದುರ್ಗ ಅ. 18
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಅ.14ರ ಮಂಗಳವಾರ ನಡೆದ ಸೋಲಾಪುರ ಗ್ರಾಮದ ನೂತನ ಶಾಲಾ ಕೊಠಡಿಗೆ ಸಂಸದರ ಅನುದಾನದಲ್ಲಿ ನಿರ್ಮಾಣವಾಗಿದ್ದು ಈ ಕಾರ್ಯಕ್ರಮದಲ್ಲಿ ಬರಿ ಬಿಜೆಪಿ ಮುಖಂಡರನ್ನು ಮಾತ್ರ ಕಾರ್ಯಕ್ರಮಕ್ಕೆ ಕರೆದಿರು ವುದರ ಮೂಲಕ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ ಆದ್ದರಿಂದ ಈ ಕೊಡಲೇ ಶಿಕ್ಷಣ ಸಚಿವರು ಇದಕ್ಕೆ ಕಾರಣರಾದವರನ್ನು ಅಮಾನತ್ತು ಮಾಡುವಂತೆ ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಸರ್ಕಾರದ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಅದಕ್ಕೆ ತನ್ನದೆ ಶಿಷ್ಠಾಚಾರಗಳಿವೆ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಚುನಾಯಿತ ಪ್ರತಿನಿಧಿಗಳನ್ನು ಕರೆಯಬೇಕು ಎಂದು ಇದ್ದರು ಸಹಾ ಇಲ್ಲಿ ಯಾವೊಬ್ಬ ಚುನಾಯಿತ ಪ್ರತಿನಿಧಿಯನ್ನು ಕರೆಯದೇ ತಮಗೆ ಬೇಕಾದವರನ್ನು ಮಾತ್ರವೇ ಕರೆಯುವುದರ ಮೂಲಕ ಕಾರ್ಯಕ್ರಮವನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರವನ್ನು ಪಾಲಿಸಿಲ್ಲ ಉಲ್ಲಂಘನೆಯನ್ನು ಮಾಡಲಾಗಿದೆ. ಶಿಕ್ಷಣ ಮಂತ್ರಿಗಳು ಇದ್ದು ಹಾಲಿ ಗ್ಯಾರಂಟಿ ಅಧ್ಯಕ್ಷರು ಇದ್ದು ಆದರೂ ಸಹ ಬರಿ ಬಿಜೆಪಿಗರನ್ನೇ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರೋದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಮಹಾ ದ್ರೋಹವಾಗಿದೆ ಎಂದು ತಿಳಿಸಿದ್ದಾರೆ.
ಡಿಡಿಪಿಐ ಹಾಗೂ ಬಿಇಓ ಅವರನ್ನು ಕೂಡಲೇ ಸಸ್ಪೆಂಡ್ ಮಾಡಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹ ಮಾಡುತ್ತೇನೆ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎನ್ ಡಿ ಕುಮಾರ್ ತಿಳಿಸಿದ್ದಾರೆ
Views: 73