ಮುಂಬೈ: ಭರವಸೆಯ ಆರಂಭಿಕ ಆಟಗಾರ್ತಿಯರಾದ ಪ್ರತಿಕಾ ರಾವಲ್ (122) ಹಾಗೂ ಸ್ಮೃತಿ ಮಂಧನಾ (109) ಇವರುಗಳ ಭರ್ಜರಿ ಜೊತೆಯಾಟದ ನೆರವಿನಿಂದ ಟೀಮ್ ಇಂಡಿಯಾ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ … ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಇದ ಭಾರತದ ಸ್ಟಾರ್ ಓಪನರ್‌ಗಳು ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಪ್ರತಿಕಾ ರಾವಲ್ ಹಾಗೂ ಸ್ಮೃತಿ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ನ್ಯೂಜಿಲೆಂಡ್ ವಿಫಲವಾಯಿತು. ಈ ಜೋಡಿ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಜೋಡಿ ಬಳಿಕ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಯಿತು. ಉಭಯ ಆಟಗಾರ್ತಿಯರು ತಮ್ಮ ನೈಜ್ಯ ಆಟವನ್ನು ಆಡಿ ಎದುರಾಳಿ ಬೌಲರ್‌ಗಳನ್ನು ಕಾಡಿದರು.
ಮೊದಲ ವಿಕೆಟ್‌ಗೆ ಪ್ರತಿಕಾ ರಾವಲ್ ಹಾಗೂ ಸ್ಮೃತಿ ಜೋಡಿ 33.2 ಓವರ್‌ಗಳಲ್ಲಿ 212 ರನ್‌ಗಳ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಸ್ಮೃತಿ ಮಂಧಾನ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 109 ರನ್ ಬಾರಿಸಿ ಔಟ್ ಆದರು.
ಪ್ರತಿಕಾ ಶತಕ
2ನೇ ವಿಕೆಟ್‌ಗೆ ಪ್ರತಿಕಾ ರಾವಲ್ ಹಾಗೂ ಜೇಮಿಮಾ ರೋಡ್ರಿಗಸ್ ಜೋಡಿ ಸಹ ಅರ್ಧಶತಕ ಜೊತೆಯಾಟ ನೀಡಿದರು. ಈ ವೇಳೆ ಪ್ರತಿಕಾ ರಾವಲ್ ಜೋಡಿ 134 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ 122 ರನ್ ಸಿಡಿಸಿದರು. ಇನ್ನು ಜೆಮಿಮಾ ಅಜೇಯ 76 ರನ್ ಸಿಡಿಸಿದರು. ಈ ವೇಳೆ 11 ಬೌಂಡರಿ ಬಾರಿಸಿದರು. ಅಂತಿಮವಾಗಿ ಭಾರತ 49 ಓವರ್‌ಗಳಲ್ಲಿ 3 ವಿಕೆಟ್‌ಗೆ 340 ರನ್ ಕಲೆ ಹಾಕಿತು.
ಆರಂಭಿಕ ಸೂಜಿ ಬೇಟ್ಸ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಜಾರ್ಜಿಯಾ ಪ್ಲಿಮ್ಮರ್ (30) ಬಿಗ್ ಇನಿಂಗ್ಸ್ ಕಟ್ಟಲೇ ಇಲ್ಲ. ನಾಯಕಿ ಸೋಫಿಯಾ ಡಿವೈನ್ (6) ಸಹ ನಿರಾಸೆ ಅನುಭವಿಸಿದರು. 59 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಮೆಲಿಯಾ ಕೆರ್ ಹಾಗೂ ಬ್ರೂಕ್ ಹ್ಯಾಲಿಡೇ ಜೋಡಿ 56 ಎಸೆತಗಳಲ್ಲಿ 56 ರನ್ ಸೇರಿಸಿತು. ಅಮೆಲಿಯಾ ಕೆರ್ 4 ಬೌಂಡರಿ ನೆರವಿನಿಂದ 45 ರನ್ ಬಾರಿಸಿ ಆರ್ಭಟಿಸಿದರು.
ಬ್ರೂಕ್ ಹ್ಯಾಲಿಡೇ 84 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 81 ರನ್ ಸಿಡಿಸಿದರು. ಇಸಾಬೆಲ್ಲಾ ಗೇಜ್ 51 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ ಅಜೇಯ 65 ರನ್ ಸಿಡಿಸಿ ಸೋಲಿನಲ್ಲಿ ಮಿಂಚಿದರು. ಅಂತಿಮವಾಗಿ ನ್ಯೂಜಿಲೆಂಡ್ ಡೆಕ್‌ವರ್ತ್ ಲೂಯಿಸ್ ನಿಯಮದಂತೆ ನ್ಯೂಜಿಲೆಂಡ್ ಗೆಲುವಿಗೆ 325 ರನ್ ಗುರಿ ನೀಡಲಾಗಿತ್ತು.
ಆದರೆ ಕಿವೀಸ್ 44 ಓವರ್‌ಗಳಲ್ಲಿ8 ವಿಕೆಟ್ ನಷ್ಟಕ್ಕೆ 271 ರನ್ ಸಿಡಿಸಿ ಸೋಲು ಕಂಡಿತು. ಭಾರತದ ಪರ ಕ್ರಾಂತಿ ಗೌಡ, ರೆಣುಕಾ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.
Views: 11