ಯೋಗದಿಂದ ನೋವು ನಿವಾರಣೆ: ಹಿರೇಗುಂಟನೂರು ಆರೋಗ್ಯ ಕೇಂದ್ರದ ಪ್ರೇರಣಾದಾಯಕ ಕಾರ್ಯಕ್ರಮ.

ಹಿರೇಗುಂಟನೂರು ಆರೋಗ್ಯ ಕೇಂದ್ರದಿಂದ ಯೋಗ ತರಬೇತಿ: ವಯಸ್ಕರ ಸಾಮಾನ್ಯ ನೋವುಗಳಿಗೆ ನಿತ್ಯ ಯೋಗಭ್ಯಾಸ ಅವಶ್ಯಕ_ ರವಿ ಕೆ.ಅಂಬೇಕರ್.

ಹಿರೇಗುಂಟನೂರು/ ಚಿತ್ರದುರ್ಗ: ಅ.27
ವಯಸ್ಕರ ಸಾಮಾನ್ಯ ನೋವುಗಳಿಗೆ ಯೋಗ ಬಹುಮುಖ್ಯವಾಗಿ ಸಹಾಯಕವಾಗಿದೆ.

ಯೋಗಾಸನಗಳು ಮತ್ತು ಪ್ರಾಣಾಯಾಮಗಳು ಸ್ನಾಯು ಬಲಪಡಿಸುವುದರ ಜೊತೆಗೆ, ಬೆನ್ನುನೋವು, ಕೀಲು ನೋವು, ಮಂಡಿನೋವು ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತವೆ. ಎಂದು ಯೋಗ ತರಬೇತುದಾರ ರವಿ ಕೆ ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.


ಚಿತ್ರದುರ್ಗ ತಾಲ್ಲೂಕು ಹೊಸೂರುಕಟ್ಟೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುಂಟನೂರು ವತಿಯಿಂದ ಗ್ರಾಮಸ್ಥರಿಗಾಗಿ ಆಯೋಜಿಸಿದ್ದ ವಯಸ್ಕರ ಸಾಮಾನ್ಯ ನೋವುಗಳಿಗೆ ಯೋಗ ಚಿಕಿತ್ಸೆ ಹಾಗೂ ಯೋಗ ತರಬೇತಿ ನೀಡಿ ಮಾತನಾಡಿದ ಅವರು ಯೋಗವು ವಯಸ್ಕರ ಸಾಮಾನ್ಯ ನೋವುಗಳಿಗೆ, ವಿಶೇಷವಾಗಿ ಮಣಿಕಟ್ಟು ನೋವು, ಬೆನ್ನುನೋವು, ಮೂಳೆಕ್ಕೆ ಸಂಬಂಧಿತ ನೋವುಗಳು ಮತ್ತು ಮನೋಸ್ಥಿತಿಗೆ ಹಾನಿ ಮಾಡುವ ಒತ್ತಡವನ್ನು ಕಡಿಮೆ ಮಾಡಲು ಅತ್ಯುತ್ತಮ ವಿಧಾನವಾಗಿದೆ.


ತಾಡಾಸನ, ಭುಜಂಗಾಸನ, ಮತ್ತು ಮರ್ಜರ್ಯಾಸನ-ಬಿಟಿಲಾಸನ (ಕ್ಯಾಟ್-ಕೌ ಸ್ಟ್ರೆಚ್) ಹೀಗೆ ಸುಲಭ ಮತ್ತು ಪರಿಣಾಮಕಾರಿ ಯೋಗಾಭ್ಯಾಸಗಳು ವಿಶ್ರಾಂತಿ, ಉಸಿರಾಟದ ಸುಧಾರಣೆ ಮತ್ತು ದೇಹದ ಸಮತೋಲನಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತವೆ. ಈ ಯೋಗಾಭ್ಯಾಸಗಳ ನಿಯಮಿತ ಅಭ್ಯಾಸ ನೆಣಪುಗಳು, ದೇಹದ ಬಲ, ಮತ್ತು ಶ್ವಾಸಕೋಶದ ಆರೋಗ್ಯವನ್ನು ಉತ್ತೇಜಿಸುವ ಮೂಲಕ ನೋವು ಕಡಿಮೆಯಾಗುವ ಪರಿಣಾಮವನ್ನು ಕಾಣಿಸುತ್ತದೆ.ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹದ ಒಕ್ಕೂಟವನ್ನು ಸುಧಾರಿಸಲು ಯೋಗದ ಮೂಲಕ ನೀಡಬಹುದಾದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರತಿದಿನ ಯೋಗಾಭ್ಯಾಸ ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.


ತರಬೇತಿಯಲ್ಲಿ ಅಂಗನವಾಡಿ ಶಿಕ್ಷಕಿ ಶಮಾಅಂಜುಂ, ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ಸಾವಿತ್ರಮ್ಮ ಸೇರಿದಂತೆ ಹಲವಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Views: 82

Leave a Reply

Your email address will not be published. Required fields are marked *