ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಕ್ಷಣಗಣನೆ: ತ್ರಿಶತಕ ಬಾರಿಸಿದ ಭಾರತೀಯ ದಿಗ್ಗಜರ ಪಟ್ಟಿ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್‌ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸರಣಿಗಾಗಿ ಉಭಯ ತಂಡಗಳು ಈಗಾಗಲೇ ಮೈದಾನದಲ್ಲಿ ಭರದ ಸಿದ್ಧತೆಗಳನ್ನು ನಡೆಸಿವೆ. ಇದೇ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಇತಿಹಾಸದ ಪುಟಗಳನ್ನು ಕೆದಕಿದಾಗ ಹಲವು ಮಹತ್ವದ ಅಂಕಿ ಅಂಶಗಳು ಕಣ್ಣಿಗೆ ಕಾಣಿಸಿಕೊಳ್ಳುತ್ತವೆ.

ಈ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 4 ಭಾರತೀಯ ಬ್ಯಾಟರ್‌ಗಳು ಮಾತ್ರ ದ್ವಿಶತಕದ ಸಾಧನೆ ಮಾಡಿದ್ದಾರೆ. ಇದರಲ್ಲಿ ಒಬ್ಬ ಕನ್ನಡಿಗನಿಗೂ ಸ್ಥಾನವಿದೆ.


ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೈದಾನಕ್ಕೆ ಇಳಿದಾಗಲೆಲ್ಲಾ ನೆನಪಾಗುವ ಒಬ್ಬ ಬ್ಯಾಟರ್‌ ವೀರೇಂದ್ರ ಸೆಹ್ವಾಗ್‌. ಇವರು ತಮ್ಮ ವೃತ್ತಿ ಬದುಕಿನಲ್ಲಿ ಎರಡು ಬಾರಿ ತ್ರಿಶತಕ ಬಾರಿಸಿದ ದಾಖಲೆಯನ್ನು ಬರೆದಿದ್ದಾರೆ. ಇದರಲ್ಲಿ ಪಾಕ್‌ ವಿರುದ್ಧ ಒಂದು ತ್ರಿಶತಕ ದಾಖಲಾಗಿದ್ದರೆ, ಇನ್ನೊಂದು ತ್ರಿಶತಕವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ್ದಾರೆ. ಚೆನ್ನೈನಲ್ಲಿ 2008ರಂದು ನಡೆದ ಟೆಸ್ಟ್‌ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ, ತ್ರಿಶತಕ ಬಾರಿಸಿದ್ದರು. ಈ ವೇಳೆ ಇವರು 319 ರನ್‌ಗಳ ಇನಿಂಗ್ಸ್ ಕಟ್ಟಿ ಅಬ್ಬರಿಸಿದ್ದರು. ಇವರ ಈ ಇನಿಂಗ್ಸ್‌ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಇವರನ್ನು ಬಿಟ್ಟರೆ ಉಭಯ ತಂಡಗಳ ಪರ ಯಾರೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿಲ್ಲ.


ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್‌ ಸರಣಿ 2019ರಲ್ಲಿ ನಡೆದಿತ್ತು. ಆಗಲೂ ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಆರಂಭಿಸಿತ್ತು. ಈ ಸರಣಿಯ ಎರಡನೇ ಟೆಸ್ಟ್‌ ಪಂದ್ಯ ಪುಣೆಯಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ 336 ಎಸೆತಗಳಲ್ಲಿ 33 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 254 ರನ್‌ ಸಿಡಿಸಿದ್ದರು.


ಮಯಾಂಕ್ ಸಾಧನೆ
2019ರಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸವನ್ನು ಬೆಳೆಸಿದ್ದಾಗ ಮೊದಲ ಟೆಸ್ಟ್‌ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಆರಂಭಿಕಾಗಿ ಕಣಕ್ಕೆ ಇಳಿದ ಮಯಾಂಕ್ ಅಗರ್‌ವಾಲ್‌ 371 ಎಸೆತಗಳಲ್ಲಿ 23 ಬೌಂಡರಿ, 6 ಸಿಕ್ಸರ್ ಸಹಾಯದಿಂದ 215 ರನ್‌ ಬಾರಿಸಿದ್ದರು. ಇದೇ ಸರಣಿಯ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ತ್ರಿಶತಕ ಬಾರಿಸಿ ಅಬ್ಬರಿಸಿದ್ದರು. ಇವರು 255 ಎಸೆತಗಳಲ್ಲಿ 28 ಬೌಂಡರಿ, 6 ಸಿಕ್ಸರ್ ನೆರವಿನಿಂದ 212 ರನ್‌ ಸಿಡಿಸಿದ್ದರು.


ಈ ನಾಲ್ವರು ಆಟಗಾರರನ್ನು ಬಿಟ್ಟರೆ ಆ ಬಳಿಕ ಬೇರೊಬ್ಬ ಬ್ಯಾಟರ್‌ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ ಬಾರಿಸಿಲ್ಲ. ಈ ಸರಣಿಯಲ್ಲಿ ಯಾರು ಬಾರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Views: 18

Leave a Reply

Your email address will not be published. Required fields are marked *