“ಸ್ವದೇಶಿ ಮೇಳದಲ್ಲಿ ಮನೆಯಲ್ಲಿ ತಯಾರಿಸಬಹುದಾದ ನಿತ್ಯ ಬಳಕೆ ವಸ್ತುಗಳ ಮಹತ್ವದ ಮೇಲೆ ಒತ್ತು”

ಚಿತ್ರದುರ್ಗ  ನ. 14

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನಮ್ಮ ಮನೆಯಲ್ಲಿ ಇರುವಂತ ವಿವಿಧ ರೀತಿಯ ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ವಿವಿಧ ನಮಗೆ ಅಗತ್ಯವಾಗಿ ಬೆಕಾದ ವಿವಿಧ ರೀತಿಯ ವಸ್ತುಗಳನ್ನು ತಯಾರಿ ಮಾಡುವುದರ ಮುಲಕ ಸ್ವದೇಶಿ ವಸ್ತುಗಳ ಬಳಕೆಯನ್ನು ಮಾಡಬೇಕಿದೆ ಎಂದು ಶ್ರೀಮತು ಮಂಜುಳ ಭೀಮರಾವ್ ತಿಳಿಸಿದರು.


ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ ಎರಡನೇ ದಿನವಾದ ಗುರುವಾರ ನಡೆದ ನಿತ್ಯ ಬಳಕೆ ವಸ್ತುಗಲ ತಯಾರಿಕಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತಿಚಿನ ದಿನಮಾನದಲ್ಲಿ ಬಹುತೇಕ ಜನತೆ ಅಂಗಡಿಯಲ್ಲಿ ತಯಾರಾದ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ, ಆದರೆ ನಮ್ಮ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ವಿವಿಧ ರೀತಿಯ ವಸ್ತುಗಳನ್ನು ತಯಾರು ಮಾಡಬಹುದಾಗಿದೆ ಅದರೆ ಇದಕ್ಕೆ ಯಾರೂ ಸಹಾ ಮನಸ್ಸು ಮಾಡುತ್ತಿಲ್ಲ, ನಾವುಗಳು ಸಾಧ್ಯವಾದಷ್ಟು ಅಂಗಡಿಯಿಂದ ವಸ್ತುಗಳನ್ನು ತರದೆ ನಮ್ಮ ಮನೆಯಲ್ಲಿಯೇ ಇರುವಮತ ವಸ್ತುಗಳನ್ನು ಬಳಕೆ ವiಡಿಕೊಂಡು ನಮೆಗ ಅಗತ್ಯವಾಗಿ ಬೇಕಾದ ವಸ್ತುಗಳನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ ಎಂದರು.
ಪ್ರಕೃತಿ ಮನಗೆ ಬೇಕಾದ ಎಲ್ಲಾ ರೀತಿಯ ವಸ್ತುಗಳನ್ನು ನೀಡಿದೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ನಮ್ಮ ದಿನ ನಿತ್ಯದ ವಸ್ತುಗಳನ್ನು ನಿರ್ಮಾಣ ಮಾಡುವುದರ ಮೂಲಕ ನಮ್ಮ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದನ್ನು ಕಲಿಯಬೇಕಿದೆ, ಹಿಂದಿನ ಕಾಲದವರು ಯಾರೂ ಸಹಾ ಅಂಗಡಿಗಳಿಂದ ವಸ್ತುಗಳನ್ನು ಖರೀಧಿ ಮಾಡುತ್ತಿರಲ್ಲಿಲ್ಲ, ಎಲ್ಲವನ್ನು ಸಹಾ ಮನೆಯಿಂದಲೇ ತಯಾರು ಮಾಡಿಕೊಳ್ಳುತ್ತಿದ್ದರು ಆದರೆ ಕಾಲ ಬದಲಾದಂತೆ ಜನ ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುತ್ತಾ ವಿವಿಧ ಕಂಪನಿಗಳ ಮೊರೆ ಹೋಗುತ್ತಿದ್ದಾರೆ ಎಂದರು. 


ಈ ಸಂದರ್ಭದಲ್ಲಿ ಡಾ ರೂಪರವರು ಆಯುರ್ವೇದ ಪದ್ದತಿಯ ಬಗ್ಗೆ ತಿಳಿಸಿಕೊಟ್ಟರು, ಆಯುರ್ವೆದವನ್ನು ಬಳಕೆ ಮಾಡುವುದರಿಂದ ಸಂದಿವಾತ, ಅಮವಾತ, ಚರ್ಮದ ಖಾಯಿಲೆಗಳು, ಕಿಡ್ನಿ ಸಮಸ್ಯೆ, ಗ್ಯಾಸ್ಟಿಕ್ ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಚಿಕಿತ್ಸೆ ಕೂಡುವುದರ ಮೂಲಕ ಆಹಾರ ಪದ್ದತಿ ಪತ್ಯೆ, ಅಪತ್ಯೆಗಳ ಮೂಲಕ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದರು, 
ಕಾರ್ಯಕ್ರಮದಲ್ಲಿ ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಶಶಿರೇಖಾ ರವಿಶಂಕರ್, ಶೈಲಜ ರೆಡ್ಡಿ, ಲಕ್ಷ್ಮೀ ಭಾಗವಹಿಸಿದ್ದರು.

Views: 16

Leave a Reply

Your email address will not be published. Required fields are marked *