ಕೋಲ್ಕತ್ತ: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಮೂರನೇ ಅವಧಿಯಲ್ಲಿ ದಕ್ಷಿಣ ಆಫ್ರಿಕಾ 55 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಪಡೆದು ಮಿಂಚಿದರು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಆರಂಭಿಕರಾದ ಏಡೆನ್ ಮಾರ್ಕರಂ ಹಾಗೂ ರಿಯಾನ್ ರಿಕೆಲ್ಟನ್ ಆಕ್ರಮಣಕಾರಿಯಾಗಿ ಆಡಿದರು. ಅವರಿಬ್ಬರು ಮೊದಲ ವಿಕೆಟ್‌ಗೆ 10.2 ಓವರ್‌ಗಳಲ್ಲಿ 57 ರನ್ ಸೇರಿಸಿದರು.
ಈ ಹಂತದಲ್ಲಿ ಆರಂಭಿಕರಿಬ್ಬರನ್ನು ಹೊರದಬ್ಬಿದ ಜಸ್‌ಪ್ರೀತ್ ಬೂಮ್ರಾ ಎದುರಾಳಿ ತಂಡಕ್ಕೆ ತಿರುಗೇಟು ನೀಡಿದರು.
ನಾಯಕ ತೆಂಬ ಬವುಮಾ (3) ಅವರನ್ನು ಕುಲದೀಪ್ ಯಾದವ್ ಪೆವಿಲಿಯನ್‌ಗೆ ಮರಳಿಸಿದರು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟರ್ ಏಡನ್ ಮಾರ್ಕರಂ (31 ರನ್) ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ರಿಯಾನ್ ರಿಕಲ್ಟನ್ (23) ವಿಯಾನ್ ಮಲ್ದರ್ (24) ಹಾಗೂ ಟೋನಿ ಡಿ ಝಾರ್ಜಿ (24) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತದ ಪರ ಜಸ್‌ಪ್ರೀತ್ ಬೂಮ್ರಾ (15-5-27-5) ಪಡೆದು ಮಿಂಚಿದದರು. ಮೊಹಮ್ಮದ್ ಸಿರಾಜ್ (12-0-47-2) ಹಾಗೂ ಕುಲದೀಪ ಯಾದವ್ (14-1-36-2) ವಿಕೆಟ್ ಪಡೆದುಕೊಂಡರು. ಅಕ್ಷರ್ ಪಟೇಲ್ ಕೂಡ 1 ವಿಕೆಟ್ ಪಡೆದುಕೊಂಡರು.
ಬಳಿಕ, ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿತ್ತು. 12 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಜನ್‌ಸೆನ್‌ಗೆ ವಿಕೆಟ್ ಒಪ್ಪಿಸಿದರು. 13 ರನ್ ಗಳಿಸಿರುವ ಕೆ.ಎಲ್. ರಾಹುಲ್ ಮತ್ತು 6 ರನ್ ಗಳಿಸಿರುವ ವಾಷಿಂಗ್ಟನ್ ಸುಂದರ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Views: 13