ಚಿತ್ರದುರ್ಗ ನ. 15
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಾಧನೆಗೆ ಅಂಗವಿಕಲತೆ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಕು ಶ್ರೀಚಿತ್ರ ಆರ್‍ರವರು ಉದಾಹರಣೆಯಾಗಿದ್ದಾರೆ. ಇಂದಿನ ದಿನಮಾನದಲ್ಲಿ ದೇಹದ ಎಲ್ಲಾ ಅಂಗಳು ಸರಿಯಿದ್ದರು ಸಹಾ ಸಾಧನೆ ಮಾಡಲು ಮುಂದೆ ಬಾರದ ಜನತೆಗೆ ಶ್ರೀಚಿತ್ರ ಮಾದರಿಯಾಗಿದ್ದಾಳೆ, ಬೇರೆಯವರಿಗೆ ಸ್ಪೂರ್ತಿಯಾಗಿದ್ದಾಳೆ.

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ನೆಹರು ನಗರದಲ್ಲಿ ವಾಸವಾಗಿರುವ ರಮೇಶ್ ಸಿ. ಮತ್ತು ಶ್ರೀಮತಿ ಸಿ.ಆರ್. ವಿಜಯರವರ ಪುತ್ರಿ ಕು|| ಶ್ರೀಚಿತ್ರ ಆರ್. ಆಲಿಸುವ ಮತ್ತು ಮಾತನಾಡುವ ಸಾಮಥ್ರ್ಯವಿಲ್ಲದಿದ್ದರೂ ತನ್ನ ಅಚಲ ಮನೋಬಲ, ಧೈರ್ಯ ಹಾಗೂ ಪರಿಶ್ರಮದ ಮೂಲಕ ನೃತ್ಯ ಕಲೆಯ ಅಂತರಂಗವನ್ನು ಆರಿತು ಅದರಲ್ಲಿ ನಿಪುಣತೆ ಸಾಧಿಸುತ್ತಿದ್ದಾಳೆ. ಕುಃ ಶ್ರೀಚಿತ್ರ ಆರ್. 10ನೇ ತರಗತಿಯವರೆಗೆ ಚಿತ್ರದುರ್ಗದ ಜ್ಞಾನವಿಕಾಸ ವಿದ್ಯಾಸಂಸ್ಥೆಯಲ್ಲಿ ಓದಿದ್ದು, ಪ್ರಸ್ತುತ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿದ್ದಾಳೆ. ಈ ನಡುವೆಯೇ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಜ್ಯೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದು, ನೃತ್ಯವನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡು ಸಂಸ್ಕೃತಿಯ ಮೌಲ್ಯಗಳನ್ನು ಜೀವಂತವಾಗಿಟ್ಟು ಕೊಂಡಿದ್ದಾಳೆ.
ನೃತ್ಯ ಕಲಾವಿದೆ ವಿದುಷಿ ಗುರು ಶ್ರೀಮತಿ ಶ್ವೇತಾ ಮಂಜುನಾಥ್ ಪ್ರೀತಿಯ ಶಿಷ್ಯ ನಯ-ವಿನಯ, ಸರಳ, ಸೌಜನ್ಯಯುತ ನಡವಳಿಕೆಯ ಕು ಶ್ರೀಚಿತ್ರ ಆರ್. ಭರತನಾಟ್ಯ ಕಲೆಯತ್ತ ಅಪಾರ ಆಸಕ್ತಿ ಹೊಂದಿದ್ದು ಅವರ ಪ್ರೇರಣೆ, ಸಹನೆ ಹಾಗೂ ನಿಷ್ಠಾವಂತ ಮಾರ್ಗದರ್ಶನದ ಅಡಿಯಲ್ಲಿ ಹಲವು ವರ್ಷಗಳಿಂದ ಭರತನಾಟ್ಯ ನೃತ್ಯಾಭ್ಯಾಸ ಮುಂದುವರೆಸಿದ್ದಾಳೆ. ಚಿತ್ರದುರ್ಗದ ಪ್ರತಿಷ್ಠಿತ ನಾಟ್ಯ ಸಂಸ್ಥೆಯಾದ ಲಾಸಿಕಾ ಫೌಂಡೇಶನ್ ಕಲಾತಂಡದೊಂದಿಗೆ ಹಲವಾರು ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಕಲಾರಸಿಕರ ಪ್ರಶಂಸೆಗೆ ಪಾತ್ರಳಾಗಿ ರುತ್ತಾಳೆ. ಇದೀಗ ನಾಟ್ಯ ಶಾಸ್ತ್ರದ ಸಂಪ್ರದಾಯದಂತೆ ಗುರು-ಹಿರಿಯರ ಸಮ್ಮುಖದಲ್ಲಿ ಭರತನಾಟ್ಯ ರಂಗ ಪ್ರವೇಶದ ಮುಖಾಂತರ ಗುರುವಂದನಾಪೂರ್ವಕ ಕಲಾರಾಧನೆಗೆ ಅಣಿಗೊಳ್ಳುತ್ತಿರುವ ಕುಃ ಶ್ರೀಚಿತ್ರ ಆರ್.ರವರ ಕಲಾ ಭವಿಷ್ಯಕ್ಕೆ ಈ ಕಾರ್ಯಕ್ರಮ ಮಹತ್ವದ ಮೈಲಿಗಲ್ಲಾಗಲಿದೆ. ಈ ರಂಗಪ್ರವೇಶವು ಅವಳ ಪರಿಶ್ರಮ, ತ್ಯಾಗ ಮತ್ತು ಕನಸನ್ನು ಸಾಕಾರಗೊಳಿಸುವ ಕ್ಷಣವಾಗಿದ್ದು, ಗುರು-ಶಿಷ್ಯರ ಬಾಂಧವ್ಯಕ್ಕೆ ಗೌರವ ಸಲ್ಲಿಸುವ ಅಪೂರ್ವ ನೃತ್ಯ ಸಂಜೆಯಾಗಲಿದೆ.
ನ. 16ರ ಭಾನುವಾರ ಸಂಜೆ 6:30ಕ್ಕೆ ಜಿ.ಜಿ. ಸಮುದಾಯ ಭವನದಲ್ಲಿ ಭರತನಾಟ್ಯ ರಂಗಪ್ರವೇಶ ನಡೆಯಲಿದೆ. ಗುರು ಶ್ವೇತಾ ಭಟ್ ಅವರ ಮಾರ್ಗದರ್ಶನದಲ್ಲಿ ಸಾಧಿಸಿದ ಈ ಪಯಣ `ಅಂಗವೈಕಲ್ಯ ಅಡಚಣೆ ಅಲ್ಲ ಕಲೆ ಮನದ ಶಕ್ತಿ ಎಂಬ ಸಂದೇಶವನ್ನು ಹೊತ್ತಿದೆ. ಗುರುವಂದನಾ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ, ಚೈತನ್ಯ ಪಿ.ಯು. ಡಿಗ್ರಿ ಕಾಲೇಜಿನ ಎಸ್.ಎಂ. ಮಧು, ಶ್ರೀ ಹರಿ ವಿಜುಕೇಷನ್ ಟ್ರಸ್ಟ್‍ನ ನಿರ್ದೇಶಕ ಶ್ರೀಮತಿ ರಕ್ಷಾ ಮಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ|| ಬಿ.ಎಂ. ಗುರುನಾಥ, ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆ ವಿದುಷಿ ಶ್ರೀಮತಿ ಶ್ವೇತಾ ಮಂಜುನಾಥ್ ಭಾಗವಹಿಸಲಿದ್ದಾರೆ. ರಂಗ ಪ್ರವೇಶದಲ್ಲಿ ಹಾಡುಗಾರಿಕೆ ವಿದ್ವಾನ್ ರೋಹಿತ್ ಭಟ್, ಬೆಂಗಳೂರು, ಮೃದಂಗ ವಿದ್ವಾನ್ ನಾಗೇಂದ್ರ ಪ್ರಸಾದ್, ಬೆಂಗಳೂರು ಕೊಳಲು ವಿದ್ವಾನ್ ಶಶಾಂಕ್ ಜೋಡಿದಾರ್, ಬೆಂಗಳೂರು ಪೀಟಿಲು ವಿದ್ವಾನ್ ವಿಭುದೇಂದ್ರ ಸಿಂಗ್, ಬೆಂಗಳೂರು ವಿದ್ವಾನ್ ರಿದಂ ಪ್ಯಾಡ್ ಸಾಯಿ ವಂಶಿ, ಬೆಂಗಳೂರು ಇವರು ನುಡಿಸಲಿದ್ದಾರೆ.
Views: 3