ವಿದ್ಯಾ ವಿಕಾಸ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ – ವಿದ್ಯಾರ್ಥಿಗಳ ಸೃಜನಶೀಲತೆಗೆ ಪ್ರೇರಣೆಯಾದ ವೇದಿಕೆ.

ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 2025-26ನೇ ಸಾಲಿನ ವಿಜ್ಞಾನ ವಸ್ತುಪ್ರದರ್ಶನ ವಿಜೃಂಭಣೆಯಿಂದ ನಡೆಯಿತು. ವಿವಿಧ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ 327ಕ್ಕೂ ಅಧಿಕ ವಿಜ್ಞಾನ ಮಾದರಿಗಳು ಪ್ರದರ್ಶನದ ಆಕರ್ಷಣೆಯಾಗಿದ್ದವು.

ಮುಖ್ಯ ಅತಿಥಿ ಶ್ರೀಮತಿ ಗಿರಿಜ ಹೆಚ್ – ವಿದ್ಯಾರ್ಥಿಗಳ ನವೀನತೆಯನ್ನು ಮೆಚ್ಚಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಿರಿಜ ಹೆಚ್ ಅವರು ಮಾತನಾಡಿ,
“ಇಂದಿನ ಮಕ್ಕಳಿಗೆ ಲಭ್ಯವಾಗಿರುವ ಅವಕಾಶಗಳು 15–20 ವರ್ಷಗಳ ಹಿಂದೆ ನಮ್ಮ ಕಾಲದಲ್ಲಿ ಇರಲಿಲ್ಲ. ಇಲ್ಲಿ 3ನೇ ತರಗತಿಯಿಂದಲೇ ಮಕ್ಕಳು ತಯಾರಿಸಿದ ಮಾದರಿಗಳು ತಾರ್ಕಿಕ, ಚಿಂತನಾತ್ಮಕ ಮನೋಭಾವವನ್ನು ನೀಡುತ್ತವೆ,” ಎಂದು ಶ್ಲಾಘಿಸಿದರು.

ವಿಜ್ಞಾನವು ಪ್ರಶ್ನೆಗಳ ಮೇಲೆ ಬೆಳೆಸುವ ಮನೋಭಾವನೆ ಎಂದು ತಿಳಿಸಿ,
“ಇಂದಿನ ವಿದ್ಯಾರ್ಥಿಗಳೇ ನಾಳಿನ ವಿಜ್ಞಾನಿಗಳು, ಸಂಶೋಧಕರು. ನ್ಯೂಟನ್, ಕಲಾಂ, ಸಿ.ವಿ.ರಾಮನ್‌ರನ್ನು ಮಾದರಿಯಾಗಿ ಕನಸು ಕಾಣಬೇಕು,” ಎಂದು ಸಲಹೆ ನೀಡಿದರು.

ಡಾ. ಮಲ್ಲಿಕಾರ್ಜುನಪ್ಪ – ವಿಜ್ಞಾನ ವೃತ್ತಿಜೀವನಕ್ಕೆ ಉತ್ತಮ ನೆಲೆ

ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನಪ್ಪ ಅವರು ವಿಜ್ಞಾನ ಪ್ರದರ್ಶನವು ಸಂಶೋಧನಾ ಹವ್ಯಾಸ ಬೆಳೆಸುವ ಮಹತ್ವದ ವೇದಿಕೆ ಎಂದು ಹೇಳಿದರು.
“ಅಭಿವೃದ್ಧಿ ಕಣ್ಣಿಗೆ ಕಾಣುವದ್ದು, ವಿಕಾಸ ನಿಧಾನ. ಆದರೆ ವಿದ್ಯಾ ವಿಕಾಸ ಸಂಸ್ಥೆ ವಿಕಾಸದ ದಾರಿಯಲ್ಲಿ ಮುನ್ನಡೆಸುತ್ತಿದೆ,” ಎಂದು ಹೇಳಿದರು.

ಹೆಚ್.ಎಸ್.ಟಿ. ಸ್ವಾಮಿ – ಚಿತ್ರದುರ್ಗದ ಟೆಲಿಸ್ಕೋಪ್‌ ಕುರಿತು ಹಂಚಿಕೊಂಡರು

ವಿಜ್ಞಾನ ಕ್ಲಬ್ ಕಾರ್ಯದರ್ಶಿ ಎಸ್.ಟಿ.ಸ್ವಾಮಿ ಅವರು,
“ವಿಜ್ಞಾನ ಬಿಟ್ಟು ನಾವಿಲ್ಲ, ನಮ್ಮನ್ನು ಬಿಟ್ಟು ವಿಜ್ಞಾನವಿಲ್ಲ. ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಪರೂಪದ ಟೆಲಿಸ್ಕೋಪ್ ಹಾಗೂ ವಿಜ್ಞಾನ ಸಲಕರಣೆಗಳನ್ನು ನೀಡಲಾಗಿದೆ,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿ – ಬಿ. ವಿಜಯಕುಮಾರ್

ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್ ಅವರು ವಿದ್ಯಾರ್ಥಿಗಳ ಮಾದರಿಗಳನ್ನು ಮೆಚ್ಚಿ, “ನಮ್ಮ ಶಾಲೆಗೆ ವಿಜ್ಞಾನವೇ ನಿಲುವಂಗಿ. ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರ ಬೆಂಬಲವೇ ಪ್ರಮುಖ ಶಕ್ತಿ” ಎಂದರು.

ಪ್ರಾಂಶುಪಾಲ ಪಿ. ಬಸವರಾಜಯ್ಯ – ‘ಅನುಭವವೇ ಪಾಠ’

ಐಸಿಎಸ್ಸಿ ಪ್ರಾಂಶುಪಾಲ ಪಿ. ಬಸವರಾಜಯ್ಯ ಅವರು,
“ವಿಜ್ಞಾನ ಜ್ಞಾನ ಕೊಡುತ್ತದೆ, ತಂತ್ರಜ್ಞಾನ ಶಕ್ತಿ ಕೊಡುತ್ತದೆ. ಶಾಲೆಯೊಳಗೆ ಕಲಿಯುವುದಕ್ಕಿಂತ ಹೊರಗಿನ ನಿಸರ್ಗವೇ ದೊಡ್ಡ ಪಾಠಶಾಲೆ,” ಎಂದು ಹೇಳಿದರು.

ಶಾಲಾ ಮುಖ್ಯಶಿಕ್ಷಕ ಎನ್.ಜಿ. ತಿಪ್ಪೆಸ್ವಾಮಿ ಅವರ ಸಂದೇಶ

ಮುಖ್ಯಶಿಕ್ಷಕರಾದ ಎನ್.ಜಿ. ತಿಪ್ಪೆಸ್ವಾಮಿ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ,
“ವಿಜ್ಞಾನವೆಂದರೆ ಪ್ರಶ್ನಿಸುವ ಗುಣ. ‘ಉತ್ತಮ ನಾಳೆಗಾಗಿ ಹೊಸತನ’ ಎಂಬ ವಿಷಯದಡಿ ಮಕ್ಕಳು ಅತ್ಯುತ್ತಮ ಮಾದರಿಗಳನ್ನು ತಯಾರಿಸಿದ್ದಾರೆ. ಕುತೂಹಲವೇ ವಿಜ್ಞಾನಕ್ಕೆ ದಾರಿ,” ಎಂದು ಉತ್ಸಾಹ ತುಂಬಿದರು.

ವಿಶೇಷ ಅಂಶಗಳು

ಒಟ್ಟು 327 ವಿಜ್ಞಾನ ಮಾದರಿಗಳು ಪ್ರದರ್ಶನ

ತೀರ್ಪುಗಾರರು: ವೀರಭದ್ರಯ್ಯ ಎಂ.ಬಿ., ನವೀನ್ ಪಿ., ಲೋಕೇಶ್ ಎಂ.ಆರ್., ಸವಿತಾ ಡಿ.ಆರ್. ಪರ್ಹಾತ್ ಖಾನಂ

ಪ್ರಾರ್ಥನೆ: ಶ್ರೀನಿಧಿ

ಸ್ವಾಗತ: ಚೈತ್ರಾ ಸಿ.ಎನ್

ನಿರೂಪಣೆ: ಡಿ.ಕೃಷ್ಣವೇಣಿ

ವಂದನೆ: ಮೊಹಮ್ಮದ್ ಆರೀಫ್

ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *