ರಾಜಕೀಯ ಪಕ್ಷಗಳ ನಿರ್ಲಕ್ಷ್ಯ: ವಾಲ್ಮೀಕಿ ಸಮುದಾಯ ಏಕತೆಯ ಅಗತ್ಯವಿದೆ – ಡಾ. ಪ್ರಸನ್ನಾನಂದ ಶ್ರೀಗಳು.

ಚಿತ್ರದುರ್ಗ ನ. 23

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯವಾದ ವಾಲ್ಮೀಕಿ ಸಮುದಾಯವನ್ನು ರಾಜಕೀಯ ಪಕ್ಷಗಳು ಬರೀ ಮತದ ಬ್ಯಾಂಕ್ ಆಗಿ ರೂಪಿಸಿಕೊಂಡಿವೆ ಚುನಾವಣೆಯಲ್ಲಿ ನಮ್ಮ ಸಮುದಾಯದ ನೆರವನ್ನು ಪಡೆದು ಗೆದ್ದ ಮೇಲೆ ನಮ್ಮಗಳ ಸಮಸ್ಯೆಯ ಬಗ್ಗೆ ಗಮನ ನೀಡುತ್ತಿಲ್ಲ ಇದರ ಬಗ್ಗೆ ನಮ್ಮ ಸಮುದಾಯ ಆಲೋಚನೆ ಯನ್ನು ಮಾಡಬೇಕಿದೆ ಎಂದು ಡಾ.ವಾಲ್ಮೀಕಿ ಪ್ರಸನ್ನನಾಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಜಿಲ್ಲಾ ನಾಯಕ ಸಮಾಜದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 2025ರಲ್ಲಿ ಶ್ರೀ ಮಠ ರಾಜನಹಳ್ಳಿಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಮತ್ತು ನಾಡದೂರೆ ಮದಕರಿ ನಾಯಕರ ಜಯಂತೋತ್ಸವಕ್ಕೆ ಸಹಕಾರ ನೀಡಿದ ಮಹನೀಯರ ಗೌರವ ಸಮರ್ಪಣೆ ಅಭೀನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಲಿಂಗಾಯತ ಸಮುದಾಯ, ಒಕ್ಕಲಿಗ ಸಮುದಾಯ ಕುರುಬ ಸಮುದಾಯದ ರೀತಿಯಲ್ಲಿ ನಮ್ಮ ಮಾಲ್ಮೀಕಿ ಸಮುದಾಯವೂ ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ ನಮ್ಮನ್ನು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಾತ್ರ ಪ್ರಾತಿನಿಧ್ಯವನ್ನು ನೀಡುತ್ತಾರೆ ತದ ನಂತರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ.

ಯಾವುದೇ ಒಂದು ಸಮುದಾಯದ ಅಭೀವೃದ್ದಿಗೆ ಗುರುವಿನ ಮಹತ್ವ ಅಗತ್ಯವಾಗಿದೆ ಲಿಂಗಾಯತ ಸಮುದಾಯ ವಿಶ್ವ ಗುರು ಬಸವಣ್ಣ, ಕುರುಬ ಸಮುದಾಯ ಕನಕದಾಸರ ಹೆಸರಿನಲ್ಲಿ, ಗೊಲ್ಲ ಸಮುದಾಯ ಶ್ರೀ ಕೃಷ್ಣನ ಹೆಸರಿನಲ್ಲಿ ಸಂಘಟನೆಯಾಗುತ್ತಿದೆ, ಪರಿಶಿಷ್ಟ ಜಾತಿಯ ಸಮುದಾಯಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಹೆಸರಿನಲ್ಲಿ ಸಂಘಟನೆಯಾಗುತ್ತಿದೆ, ಬೇಡ ವಾಲ್ಮೀಕಿ ಸಮುದಾಯ ಭಾರತಿಯ ಸಂಸ್ಕøತಿಗೆ ರಾಮಯಾಣ ಮಹಾಕಾವ್ಯವನ್ನು ನೀಡಿದಂತಹ ಆದಿ ಕವಿ ವಾಲ್ಮೀಕಿ ಹೆಸರಿನಲ್ಲಿ ನಾವೆಲ್ಲರು ಸಹಾ ಸಂಘಟನೆ ಯಾಗುತ್ತಿದ್ದೇವೆ, ಸಮುದಾಯದಲ್ಲಿ ದೊಡ್ಡದಾದ ಲಿಂಗಾಯತ ಅಥವಾ ವೀರಶೈವ ಸಮುದಾಯ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯದವರಿದ್ದಾರೆ, ಮೂರನೇ ಸ್ಥಾನದಲ್ಲಿ ಕುರುಬ ಸಮುದಾಯದವರಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ವಾಲ್ಮೀಕಿ ಸಮುದಾಯವರಿದ್ದಾರೆ. ರಾಜ್ಯದಲ್ಲಿ ಲಿಂಗಾಯ ತರಷ್ಟೇ ಒಕ್ಕಲಿಗರು, ಕುರುಬರಿದ್ದಾರೆ, ಅಷ್ಟೇ ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯವರು ಇದ್ದಾರೆ ಎಂದರು.

ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ಮಾತ್ರ ನಮ್ಮ ಸಮುದಾಯವನ್ನು ನೆನಪಿಸಿಕೊಳ್ಳುತ್ತಾರೆ, ಮತವನ್ನು ಪಡೆದು ಗೆದ್ದ ಮೇಲೆ ನಮ್ಮ ಹಿತವನ್ನು ಕಾಯುತ್ತಿಲ್ಲ, ಸರ್ಕಾರಗಳು ಈ ಸಮುದಾಯವನ್ನು ಮತದ ಬ್ಯಾಂಕ್‍ಗಳಾಗಿ ರೂಪಿಸಿಕೊಂಡಿವೆ, ಅಧಿಕಾರಕ್ಕೆ ಬಂದ ಮೇಲೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿವೆ, ಈ ಹಿನ್ನಲೆಯಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿ, ಮಹರ್ಷಿ ವಾಲ್ಮೀಕಿ ಜಾತ್ರೆ ಬಂದಾಗ, ಮದಕರಿ ಜಯಂತಿ ಮಾಡುವಾಗ ನಾವೆಲ್ಲರೂ ಸಹಾ ಪಕ್ಷಾತೀತವಾಗಿ ಸಮುದಾಯಕ್ಕೆ ಸಾಮಿದಾನಿಕ ಹಕ್ಕುಗಳನ್ನು ಸರ್ಕಾರದ ಕೂಡುವ ವಿಚಾರದಲ್ಲಿ ವಿಳಂಭ ನೀತಿಯನ್ನು ಅನುಸರಿದರೆ ನಾವೇಲ್ಲಾ ಒಂದಾಗಿ ಬಗ್ಗಟಾಗಿ ಪಕ್ಷಾತೀತವಾಗಿ ಹೋರಾಟವನ್ನು ಮಾಡಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಂಘದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ, ಸಮುದಾಯದ ಮುಖಂಡರುಗಳಾದ ಸಂಪತ್ ಕುಮಾರ್, ಪಾಪನಾಯಕ, ವಿರೇಶ್, ಸೂರಗೌಡ, ಮಹೇಶ್, ರವಿಕುಮಾರ್, ಮಲ್ಲಿಕಾರ್ಜನ್, ಹೊರಕೇರಪ್ಪ, ತಿಪ್ಪಮ್ಮ, ಶ್ರೀನಿವಾಸ್ ನಾಯಕ, ಪ್ರಕಾಶ್, ಕವನ ಕರಿಯಮ್ಮ, ವಿಮಲಾಕ್ಷಿ ಲೋಹಿತ್ ಕುಮಾರ್ ನರಸಿಂಹರಾಜು ದಿನೇಶ್ ಗೌಡಗೆರೆ, ಅಂಜನಪ್ಪ, ಶಿವಕುಮಾರ್, ಮಂಜುನಾಥ್ ಆಶೋಕ ಬೆಳಗಟ್ಟ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 19

Leave a Reply

Your email address will not be published. Required fields are marked *