ಚಿತ್ರದುರ್ಗ ನ. 23
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ವಾಲ್ಮೀಕಿ ನೀಡಿದಂತ ರಾಮಾಯಣ ಜಗತ್ತಿನ ಎಲ್ಲ ಸಮುದಾಯಕ್ಕೂ ಸಹಾ ಅಗತ್ಯವಾಗಿ ಬೇಕಾದ ಕಾವ್ಯವಾಗಿದೆ. ರಾಮಾಯಾಣ ಮಹಾಕಾವ್ಯದ ಮೌಲ್ಯಗಳು ಭಾರತೀಯ ಸಂಸ್ಕøತಿಯ ಅಷ್ಟೇ ಅಲ್ಲ ಭೂಮಿಯ ಮೇಲಿನ ಮಾನವರ ಮಾರ್ಗದರ್ಶನಕ್ಕಾಗಿ ಮಹಾ ಕಾವ್ಯವಾಗಿದೆ ಎಂದು ಡಾ.ವಾಲ್ಮೀಕಿ ಪ್ರಸನ್ನನಾಂದ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಜಿಲ್ಲಾ ನಾಯಕ ಸಮಾಜದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 2025ರಲ್ಲಿ ಶ್ರೀ ಮಠ ರಾಜನಹಳ್ಳಿಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಮತ್ತು ನಾಡದೂರೆ ಮದಕರಿ ನಾಯಕರ ಜಯಂತೋತ್ಸವಕ್ಕೆ ಸಹಕಾರ ನೀಡಿದ ಮಹನೀಯರ ಗೌರವ ಸಮರ್ಪಣೆ ಅಭೀನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಸರ್ಕಾರ ಆಕ್ಟೋಬರ್ 7 ರಂದು ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಿದೆ ವಾಲ್ಮೀಕಿಯವರ ನಾಯಕ ಸಮುದಾಯದಲ್ಲಿ ಜನಿಸಿರಬಹುದೆ ಆದರೆ ಅವರು ನೀಡಿದಂತ ರಾಮಾಯಣ ಎಲ್ಲ ಸಮುದಾಯಕ್ಕೂ ಸಹಾ ಅಗತ್ಯವಾಗಿ ಬೇಕಾದ ಕಾವ್ಯವಾಗಿದೆ. ರಾಮಾಯಾಣ ಮಹಾಕಾವ್ಯದ ಮೌಲ್ಯಗಳು ಭಾರತೀಯ ಸಂಸ್ಕøತಿಯ ಅಷ್ಟೇ ಅಲ್ಲ ಭೂಮಿಯ ಮೇಲಿನ ಮಾನವರ ಮಾರ್ಗದರ್ಶನಕ್ಕಾಗಿ ಮಹಾ ಕಾವ್ಯವನ್ನು ನೀಡಿದ್ದಾರೆ. ಇಂತಹ ಮಹಾತ್ಮನ ಜಯಂತಿಯನ್ನು ಬರೀ ಒಂದು ಸಮುದಾಯ ಮಾಡದೇ ಎಲ್ಲಾ ಸಮುದಾಯಗಳು ಸೇರಿ ಮಾಡುವಂತಾಗಬೇಕಿದೆ, ಆಗ ಮಾತ್ರ ವಾಲ್ಮೀಕಿಯವರಿಗೆ ನಿಜವಾದ ನಮನ ಸಲ್ಲಿಸಿದಂತೆ ಆಗುತ್ತದೆ ಸರ್ಕಾರ ವಾಲ್ಮೀಕಿಯವರ ಜಯಂತಿಯನ್ನು ರಾಜ್ಯ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಚರಣೆ ಮಾಡಲು ಸೂಚಿಸಿದೆ ಅದರಂತೆ ನಡೆಯುತ್ತಿದೆ ಎಂದರು.
ಚಿತ್ರದುರ್ಗದ ಪಾಳೇಗಾರರು ಮೊಗಲರ ಧಾಳಿಯನ್ನು ಹಿಮ್ಮೆಟ್ಟಿಸುವುದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಅದರಲ್ಲಿ ರಾಜವೀರ ಮದಕರಿ ನಾಯಕರಾಗಿದ್ದಾರೆ. ಇವರು 25 ವರ್ಷಗಳ ಚಿತ್ರದುರ್ಗವನ್ನು ಧರ್ಮ ಸಹಿಷ್ಟುತೆಯ ಆಧಾರದ ಮೇಲೆ ಆಳ್ವಿಕೆಯನ್ನು ಮಾಡಿದ್ದಾರೆ. ಅವರ ಕೊಡುಗೆ ಸರ್ವ ಧರ್ಮದವರನ್ನು ಸಹಾ ಸಮಾನಾಗಿ ಕಾಣುವಂತದ್ಧಾಗಿದೆ, ಚಿತ್ರದುರ್ಗಕ್ಕೆ ಉತ್ತಮವಾದ ಆಡಳಿತವನ್ನು ನೀಡಿದವರು ರಾಜವೀರ ಮದಕರಿನಾಯಕ ಇವರ ಜಯಂತಿಯನ್ನು ಸರ್ಕಾರ ಕಡ್ಡಾಯವಾಗಿ ಆಚರಣೆಯನ್ನು ಮಾಡಬೇಕಿದೆ. ಇದು ಈ ನಾಡಿಗೆ ನೀಡುವಂತ ಗೌರವಾಗಿದೆ, ದುಗೋತ್ಸವವನ್ನು ಮಾಡಲು ಸರ್ಕಾರವನ್ನು ಒತ್ತಾಯಿಸಲಾಗಿದೆ. ಒಂದು ವರ್ಷ ಮಾತ್ರ ದುಗೋತ್ಸವವನ್ನು ಮಾಡಲಾಯಿತು. ನಾಡಿನ ಹಲವಾರು ಕಡೆಗಳಲ್ಲಿ ವಿವಿಧ ರೀತಿಯ ಉತ್ಸವಗಳನ್ನು ಮಾಡಲಾಗುತ್ತದೆ. ಇದೇ ರೀತಿ ಮುಂದಿನ ದಿನದಲ್ಲಿ ದುಗೋತ್ಸವವನ್ನು ಮಾಡುವಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಲ್ಲಿ ಶ್ರೀಗಳು ಮನವಿ ಮಾಡಿ ಮುಂದಿನ ಬಾರಿ ದುಗೋತ್ಸವವನ್ನು ಮಾಡುವಂತೆ ಆಗ್ರಹಿಸಿ ಇಲ್ಲವಾದಲ್ಲಿ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಇದು ನೆನೆಗುದ್ದಿಗೆ ಬೀಳಿತ್ತದೆ ಎಂದ ಅವರು ದುಗೋತ್ಸವದ ನೆಪದಲ್ಲಿ ಚಿತ್ರದುರ್ಗವನ್ನಾಳಿದ ಎಲ್ಲಾ ಪಾಳೆಗಾರರು ಹಾಗೂ ಮದಕರಿನಾಯಕರ ಜಯಂತಿಯನ್ನು ಸಹಾ ಆಚರಣೆ ಮಾಡಬೇಕಿದೆ ಎಂದರು.
ಜಿಲ್ಲೆಯಲ್ಲಿ ನಡೆದ ಮದಕರಿನಾಯಕ ಜಯಂತಿಗೆ ಬರೀ ನಾಯಕ ಸಮುದಾಯ ಮಾತ್ರವಲ್ಲಿ ಬೇರೆ ಸಮುದಾಯದವರು ಸಹಾ ಸಹಾಯವನ್ನು ಮಾಡಿದ್ದಾರೆ. ಅವರಿಗೆ ಗೌರವಿಸುವುದು ನಮ್ಮ ಕೆಲಸವಾಗಿದೆ. ಮದಕರಿ ನಾಯಕ ನಾಯಕ ಸಮುದಾಯದಲ್ಲಿ ಜನಿಸಿರಬಹುದೆ ಆದರೆ ಅವರು ನೀಡಿದ ಕೂಡುಗೆ ಎಲ್ಲಾ ಸಮುದಾಯವರಿಗೂ ಸಹಾ ತಲುಪಿದೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಂಘದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ, ಸಮುದಾಯದ ಮುಖಂಡರುಗಳಾದ ಸಂಪತ್ ಕುಮಾರ್, ಪಾಪನಾಯಕ, ವಿರೇಶ್, ಸೂರಗೌಡ, ಮಹೇಶ್, ರವಿಕುಮಾರ್, ಮಲ್ಲಿಕಾರ್ಜನ್, ಹೊರಕೇರಪ್ಪ, ತಿಪ್ಪಮ್ಮ, ಶ್ರೀನಿವಾಸ್ ನಾಯಕ, ಪ್ರಕಾಶ್, ಕವನ ಕರಿಯಮ್ಮ, ವಿಮಲಾಕ್ಷಿ ಲೋಹಿತ್ ಕುಮಾರ್ ನರಸಿಂಹರಾಜು ದಿನೇಶ್ ಗೌಡಗೆರೆ, ಅಂಜನಪ್ಪ, ಶಿವಕುಮಾರ್, ಮಂಜುನಾಥ್ ಆಶೋಕ ಬೆಳಗಟ್ಟ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 32