ಚಿತ್ರದುರ್ಗ ನ. 29
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗೆ ಇಳಿದರೆ ಅವರ ಸ್ಥಾನಕ್ಕೆ ದಲಿತ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದರೆ.
ಶ್ರೀ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಕೆಲ ತಿಂಗಳಿಂದ ಸಿಎಂ ಬದಲಾವಣೆ ವಿಚಾರ ಹಿನ್ನೆಲೆಯಲ್ಲಿ ಜನರ ದೃಷ್ಠಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಿನ್ನೆಡೆಯಾಗಿದೆ.ಆದಷ್ಟು ಬೇಗ ಕೈ ಹೈಕಮಾಂಡ್ ಶೀಘ್ರ ಗೊಂದಲ ಇತ್ಯರ್ಥಗೊಳಿಸಬೇಕು.ರಾಜ್ಯದ ಅಭಿವೃದ್ಧಿ ಕಾರ್ಯ ಸುಗಮಗೊಳಿಸಬೇಕು. ಎಲ್ಲಾ ಸಮುದಾಯದವರಿಂದ ಮುಖ್ಯಮಂತ್ರಿ ಸ್ಥಾನದ ಕೂಗು ಕೇಳಿ ಬರುತ್ತಿದೆ ಎಲ್ಲಾ ಸಮುದಾಯಕ್ಕೂ ಸಿಎಂ ಸ್ಥಾನ ನೀಡಲು ಆಗುವುದಿಲ್ಲ.ಅವಕಾಶ ಬಂದರೆ ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು..ಸಿಎಂ ಸ್ಥಾನದಲ್ಲಿ ಸಿದ್ಧರಾಮಯ್ಯ ಮುಂದುವರೆದಿದ್ದಾರೆ.. ಕೆಳಗಿಳಿಸಿ ದಲಿತ ಸಮಾಜಕ್ಕೆ ಸಿಎಂ ಸ್ಥಾನ ಕೊಡಿ ಎಂದು ಕೇಳಲಾಗದು.ಸಿಎಂ ಸ್ಥಾನದಿಂದ ಇಳಿದರೆ ದಲಿತ ಸಮುದಾಯಕ್ಕೆ ಅವಕಾಶ ನೀಡಬೇಕು.ದಲಿತರಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಇದ್ದಾರೆ ಎಂದರು.
ದಲಿತ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು.ಡಿಸಿಎಂ ಡಿ.ಕೆ ಶಿವಕುಮಾರ್‍ಗೆ ಸಿಎಂ ಸ್ಥಾನದ ಬಗ್ಗೆ ಮಾತುಕತೆ ನಡೆದಿದೆ ಎಂಬ ಚರ್ಚೆ ಇದೆ. ಈ ಮಾತುಕತೆ ನಡೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ… ಮಾತುಕತೆ ನಡೆದಿದ್ದೇ ಆದರೆ ಹಾಗೆ ನಡೆದುಕೊಳ್ಳಲಿ.ಸ್ವತಂತ್ರ್ಯ ಬಂದಾಗಿಂದ ರಾಜ್ಯದಲ್ಲಿ ದಲಿತ ಸಿಎಂ ಆಗಿಲ್ಲ. ದಲಿತರಿಗೆ ಕೈ ಹೈಕಮಾಂಡ್ ಅವಕಾಶ ನೀಡಬೇಕು. ಡಿ.ಕೆ ಶಿವಕುಮಾರ್ ಪರ ಆದಿಚುಂಚನಗಿರಿ ಶ್ರೀ ಬ್ಯಾಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ ಸಮುದಾಯದ ಕಾರಣಕ್ಕೆ ಆದಿಚುಂಚನಗಿರಿ ಶ್ರೀ ಕೇಳಿಲ್ಲ. ಪಕ್ಷ ಮುನ್ನಡೆಸಿದ ಶಿಸ್ತಿನ ಸಿಪಾಯಿ ಎಂಬ ಕಾರಣಕ್ಕೆ ಹೇಳಿದ್ದಾರೆ.ಡಿ.ಕೆ ಶಿವಕುಮಾರ್‍ರವರ ಪರಿಶ್ರಮಕ್ಕೆ ಫಲ ಸಿಗಬೇಕೆಂದು ಶ್ರೀಗಳು ಹೇಳಿದ್ದಾರೆ.ನಮ್ಮ ಅಭಿಪ್ರಾಯ ಸಹ ಹಾಗೇನೆ ಇದೆ ಎಂದರು.
ಸಿದ್ಧರಾಮಯ್ಯ ಮುಂದುವರಿಕೆಗೆ ಕಾಗಿನೆಲೆ ಶ್ರೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅಹಿಂದ ನಾಯಕರಾದ ಸಿದ್ಧರಾಮಯ್ಯ 2ನೇ ಸಲ ಸಿಎಂ ಆಗಿದ್ದಾರೆ… ಸಹಜವಾಗಿ ಸಮುದಾಯದ ಬೇಡಿಕೆಯನ್ನು ಕಾಗಿನೆಲೆ ಶ್ರೀ ಹೇಳಿದ್ದಾರೆ.ಕಾಗಿನೆಲೆ ಶ್ರೀ ಹೇಳಿದ್ದು ತಪ್ಪಲ್ಲ, ವಿವಾದ ಮಾಡುವುದು ಬೇಡ ಎಂದು ಶ್ರೀ ಬಸವಮೂರ್ತಿ ಮಾದಾರ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
Views: 11