ಚಿತ್ರದುರ್ಗ ನ. 29
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನಗರದ 26ನೇ ವರ್ಷದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ)ಸದಸ್ಯರು ಹಾಗೂ ನಗರದ ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ಸಹಕಾರದೊಂದಿಗೆ ಶುಕ್ರವಾರ ಬೆಳಿಗ್ಗೆ ಗಣಪತಿ ಹಾಗೂ ಸುಬ್ರಮಣ್ಯ ದೇವಸ್ಥಾನಧ ಗರ್ಭಗುಡಿಯ ಗೋಪುರಕ್ಕೆ ಹಿತ್ತಾಳೆಯ ಕವಚದ ಶಿಲ್ಪಿಗಳಾದ ತಿಪ್ಪೇಸ್ವಾಮಿ ಮತ್ತು ಮಕ್ಕಳು ನಾಯಕನಹಟ್ಟಿ ಇವರಿಂದ ಕೆತ್ತನೆಯ ಕೆಲಸ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಅರ್ಚಕರಾದ ಸತೀಶ್ ಶರ್ಮ ಸಂಗಡಿಗರಿಂದ ರಾಕ್ಷೋ ಹೋಮ, ಪ್ರಾಯಶ್ಚಿತ ಹೋಮ, ಅಘೋರ ರುದ್ರ ಹೋಮ , ಪಶುಪತಿ ಹೋಮ ,ವಾಸ್ತು ಹೋಮ, ವಾಸ್ತು ಬಲಿ, ಶಾಂತಿ ಹೋಮ, ಗಣಪತಿ ಮೂಲ ಮಂತ್ರ, ಅಷ್ಟ ದ್ರವ್ಯ ನಾರಿ ಕೇಶ ಹೋಮ, ಸುಬ್ರಹ್ಮಣ್ಯ ಮೂಲ ಮಂತ್ರ ಹೋಮ, ಮಹಾ ಕುಂಭ ಸ್ಥಾಪನ ಹೋಮವನ್ನು ನೆರವೇರಿಸಲಾಯಿತು. ಕಳಸಾಭಿಷೇಕ ಪೂಜೆಯ ಮುಖಾಂತರ ದೇವಸ್ಥಾನದ ಕಳಸವನ್ನು ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾಂತೇಶ್ ,ಮಾತಾ ಇಂಡಸ್ಟ್ರೀಸ್, ಉದಯ್ ಶೆಟ್ಟಿ ವರ್ತಕರು, ಹಾಗೂ ಕಂಠೇಶ್ವರ ಗ್ರೂಪ್ ಸಹೋದರರು. ಕರ್ನಾಟಕದ ಮಹಾ ಅನ್ನದಾನ ಅಯ್ಯಪ್ಪ ಸ್ವಾಮಿ ಸಮಿತಿಯ ಅಧ್ಯಕ್ಷರಾದ ಶರಣ್ ಕುಮಾರ್, ಕಾರ್ಯದರ್ಶಿ ಎಂ ಪಿ ವೆಂಕಟೇಶ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ರಮೇಶ್ ಗುರುಸ್ವಾಮಿ ಹಾಗೂ ದೇವಸ್ಥಾನದ ಸದಸ್ಯರು ಉಪಸ್ಥಿತರಿದ್ದರು.
Views: 65