ಚಿತ್ರದುರ್ಗದಲ್ಲಿ ಜೂನಿಯರ್ ಕಬಡ್ಡಿ ಚಾಂಪಿಯನ್‌ಶಿಫ್: ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ನ.29ರಂದು.

ಚಿತ್ರದುರ್ಗ ನ. 28

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಕರ್ನಾಟಕ ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್‍ನಿಂದ ಅನುಮೋದನೆಗೊಳಪಟ್ಟ ದಿ ಚಿತ್ರದುರ್ಗ ಜಿಲ್ಲಾ ಕಬಡ್ಡಿ ಅಸೋಸಿಯೇಷನ್(ರಿ.)ವತಿಯಿಂದ ಚಿತ್ರದುರ್ಗ ಜಿಲ್ಲಾ ಜೂನಿಯರ್ ಬಾಲಕರ ಮತ್ತು ಬಾಲಕಿಯರ ಕಬಡ್ಡಿ ಚಾಂಪಿಯನ್ ಶಿಪ್ ಚಿತ್ರದುರ್ಗ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಜೂನಿಯರ್ ಬಾಲಕರ ಮತ್ತು ಬಾಲಕಿಯರ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನ್‍ಶಿಫ್ ಮತ್ತು ಜಿಲ್ಲಾ ಜೂನಿಯರ್ ತಂಡದ ಆಯ್ಕೆಯನ್ನು 29-11-2025 ರಂದು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ ಪ್ರಕಟಣೆ ತಿಳಿಸಿದೆ.


ಇಲ್ಲಿ ಆಯ್ಕೆಯಾದ ಆಟಗಾರರು ಡಿಸೆಂಬರ್ 11, 12,13 ಮತ್ತು 14 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಜೂನಿಯರ್ ಕಬಡ್ಡಿ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಆಡಲು ಅರ್ಹತೆ ಪಡೆಯುತ್ತಾರೆ. ದಿನಾಂಕ: 31-01-2006ರ ನಂತರ ಜನಿಸಿದ ಬಾಲಕರು 75ಕೆಜಿ ತೂಕದ ಒಳಗೆ ಹಾಗೂ ಬಾಲಕಿಯರು 65ಕೆಜಿ ತೂಕದ ಒಳಗೆ ಇರುವ ಆಟಗಾರರು ಆಡಲು ಅರ್ಹತೆ ಪಡೆದಿರುತ್ತಾರೆ. ತಂಡದ ಆಟಗಾರರು ತಮ್ಮಕ್ಲಬ್‍ನ ಲೆಟರ್‍ಹೆಡ್‍ನಲ್ಲಿ ಬರತಕ್ಕದ್ದು, ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ. ನೋಂದಾಯಿತ ತಂಡಗಳು ದಿನಾಂಕ:29-11-2025 ರಂದು ಬೆಳಿಗ್ಗೆ 10.00 ಗಂಟೆ ಒಳಗೆ ರೂ.500/- ಪ್ರವೇಶ ಶುಲ್ಕದೊಂದಿಗೆ ವರದಿಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಕಡ್ಡಾಯ, ಚಿತ್ರದುರ್ಗ ಜಿಲ್ಲೆಯವರಿಗೆ ಮಾತ್ರ ಆಡಲು ಅವಕಾಶ. ನಿಮ್ಮ ಊರಿನಲ್ಲಿ ಕಬಡ್ಡಿ ತಂಡ ಇಲ್ಲದ ಪಕ್ಷದಲ್ಲಿ ನೇರವಾಗಿ ದಿನಾಂಕ: 29-11-2025 ರಂದು ಬೆಳಿಗ್ಗೆ 10.00 ಗಂಟೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ರೂ.100/- ಪ್ರವೇಶ ಶುಲ್ಕ ಪಾವತಿಸಿ ಆಡಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 94820 13306 : 9480778282.  ಸಂಪರ್ಕಿಸಬಹುದಾಗಿದೆ.

Views: 8

Leave a Reply

Your email address will not be published. Required fields are marked *