ಚಿತ್ರದುರ್ಗ ನ. 28
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನಮ್ಮ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಜನತೆಯ ಕನಸನ್ನು ನನಸು ಮಾಡಲು ಮುಂದಾಗಿದೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರಾದ ದೊಡ್ಡ ರಂಗಪ್ಪ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವತಿಯಿಂದ ಖಾಸಗಿ ಹೋಟೇಲ್‍ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಿಟೇಲ್ ಕ್ರೆಡಿಟ್ ಔಟ್ ರೀಚ್ ಅಭೀಯಾನವನ್ನು ಉದ್ಘಾಟಿಸಿ ಮಾತನಾಡಿ, ಜನತೆಯಲ್ಲಿ ನಮ್ಮ ಬ್ಯಾಂಕಿನಲ್ಲಿ ಸಿಗುವಂತ ವಿವಿಧ ರೀತಿಯ ಸೌಲಭ್ಯಗಳನ್ನು ತಿಳಿಸಿಕೊಡುವ ಸಲುವಾಗಿ ದೇಶದಲ್ಲಿ ಈ ರೀತಿಯಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ನಮ್ಮ ಬ್ಯಾಂಕಿಗೆ 115 ವರ್ಷಗಳ ಇತಿಹಾಸ ಇದೆ. ದೇಶದಲ್ಲಿ 4500 ಶಾಖೆಗಳನ್ನು ಹೊಂದಿದೆ. ರಾಜ್ಯದಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ವಲಯ ಕಚೇರಿಗಳನ್ನು ಹೊಂದಿದೆ. ನಮ್ಮ ಬ್ಯಾಂಕ್‍ನಲ್ಲಿ ನೀಡುವ ಸಾಲಗಳಿಗೆ ಬೇರೆ ಬ್ಯಾಂಕ್ ಗಳಿಗೆ ನೀಡುವ ಸಾಲದ ಬಡ್ಡಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಅಲ್ಲದೆ ಸಾಲ ಮರು ಪಾವತಿಗೆ ಅಧಿಕ ಸಮಯವನ್ನು ಸಹಾ ನೀಡಲಾಗುತ್ತದೆ ಎಂದರು.
ನಮ್ಮಲ್ಲಿ ಮನೆ ನಿರ್ಮಾಣಕ್ಕೆ, ವಾಹನ ಖರೀದಿಗೆ, ಬಂಗಾರದ ಸಾಲ, ಮನೆ, ನಿವೇಶನ ಖರೀದಿಗೆ ಸಾಲವನ್ನು ನೀಡಲಾಗುವುದು, ಇದರ ಸದುಪಯೋಗವನ್ನು ಚಿತ್ರದುರ್ಗ ಜಿಲ್ಲೆಯ ಜನತೆ ಸದುಪಯೋಗ ಪಡಿಸಿಕೊಳ್ಳ ಬೇಕಿದೆ, ನಮ್ಮಲ್ಲಿ ಪಾರದರ್ಶಕತೆಯಿಂದ ಸಾಲವನ್ನು ನೀಡಲಾಗುವುದು ಇದರಲ್ಲಿ ಯಾವುದೇ ಹೆಚ್ಚಿನ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ, ಇದು ಮಾರ್ಚಿ 2026ರವರೆಗೆ ಇರುತ್ತದೆ. ಸಾಲದ ಅರ್ಜಿಯನ್ನು ನೀಡಿದ 24 ಗಂಟೆಯೊಳಗೆ ಸಾಲವನ್ನು ನೀಡಲಾಗುತ್ತದೆ. ನಮ್ಮಲ್ಲಿ ತ್ವರಿತಗತಿಯಲ್ಲಿ ಸಾಲವನ್ನು ನೀಡುವ ವ್ಯವಸ್ಥೆ ನಮ್ಮಲ್ಲಿ ಇದೆ. ನಮ್ಮಲ್ಲಿ ಸಾಲವನ್ನು ಪಡೆಯುವುದರ ಮೂಲಕ ಜನತೆ ತಮ್ಮ ಆರ್ಥಿಕತೆಯನ್ನು ಹೆಚ್ಚಳ ಮಾಡಿಕೊಳ್ಳಬೇಕಿದೆ. ದೇಶವೂ 2047ರಲ್ಲಿ ಅಭೀವೃದ್ದಿಯನ್ನು ಹೊಂದಿದ ದೇಶವಾಗುವುದರಲ್ಲಿ ಎಲ್ಲರ ಪಾತ್ರ ಅಗತ್ಯವಾಗಿದೆ ಎಂದು ತಿಳಿಸಿದರು.
ನಮ್ಮ ಬ್ಯಾಂಕ್‍ನಲ್ಲಿ ಸಾಲವನ್ನು ಪಡೆದರು ಅರ್ಥಿಕವಾಗಿ ಪ್ರಗತಿಯನ್ನು ಸಾಧಿಸಿ ಇದಾದ ನಂತರ ಸಾಲವನ್ನು ಪಡೆದ ಬ್ಯಾಂಕ್‍ನ್ನು ಮರೆಯಬೇಡಿ ಸಕಾಲಕ್ಕೆ ಸರಿಯಾಗಿ ಪಡೆದ ಸಾಲವನ್ನು ಮರುಪಾವತಿಯನ್ನು ಮಾಡುವುದರ ಮೂಲಕ ಬ್ಯಾಂಕ್‍ನ ಪ್ರಗತಿಗೆ ನೆರವಾಗಬೇಕಿದೆ ಸಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡುವುದರ ಮೂಲಕ ನಿಮ್ಮ ಮುಂದಿನ ಸಾಲಕ್ಕೆ ಬುನಾದಿಯಾಗಲಿದೆ ಸರಿಯಾಗಿ ಸಾಲವನ್ನು ಮರು ಪಾವತಿ ಮಾಡಿದವರಿಗೆ ಬ್ಯಾಂಕ್ ಮುಂದಿನ ಸಾಲವನ್ನು ಯಾವುದೇ ತಕರಾರು ಇಲ್ಲದೆ ನೀಡುತ್ತದೆ ಇದರಿಂದ ಮರುಪಾವತಿಯನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಗ್ರಾಹಕರಿಗೆ ದೊಡ್ಡ ರಂಗಪ್ಪ ಕಿವಿ ಮಾತು ಹೇಳಿದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಚಿತ್ರದುರ್ಗ ಶಾಖೆಯ ವ್ಯವಸ್ಥಾಪಕರಾದ ಶ್ರೀಧರ ಮಾತನಾಡಿ, ನಮ್ಮಲ್ಲಿ ದೊರೆಯವಂತ ವಿವಿಧ ರೀತಿಯ ಸಾಲಗಳ ಬಡ್ಡಿಯ ದರ ಬೇರೆ ಬ್ಯಾಂಕಿಗಳಿಗಿಂತ ಕಡಿಮೆ ಇದೆ. ನಮ್ಮಲ್ಲಿ ಸೆಂಟ್ ಟೆಕ್ಸ್‍ಟೈಲ್ಸ್‍ಗೆ ಗರಿಷ್ಠ 100 ಕೋಟಿಯವರೆಗೂ ಸೆಂಟ್ ಶಾಪೆಗೆ 5 ಕೋಟಿಯವರೆಗೂ, ಸೆಂಟ್ ವ್ಯವಹಾರ ಸಾಲ 25 ಕೋಟಿಯವರೆಗೂ ಸೆಂಟ್ ಸಿ.ಎ/ಸಿಎಸ್,/ಸಿಎಮ್‍ಎಗೆ 2 ಕೋಟಿಯಷ್ಟು ಸೆಂಟ್ ಬಂಗಾರದ ಸಾಲ ಯೋಜನೆಯಲ್ಲಿ 40 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಸೆಂಟ್ ಗೃಹಲಕ್ಷ್ಮೀ ಬೃಹ ಸಾಲಕ್ಕೆ ಶೇ.7.35, ಸೆಂಟ್ ಗೃಹ ಸಾಲಕ್ಕೆ ಶೇ.7.65 ಸೆಂಟ್ ಅಡಮಾನ ಸಾಲಕ್ಕೆ ಶೇ,7.85 ಸೆಂಟ್ ಟಾಪ್ ಆಪ್ ಸಾಲಕ್ಕೆ ಶೇ.7.80, ಸೆಂಟ್ ವಾಹನ ಸಾಲಕ್ಕೆ ಶೇ. 7.85 ರಷ್ಟು ಬಡ್ಡಿಯನ್ನು ಹಾಕಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಾಲ ಮಂಜೂರಾದವರಿಗೆ ಸಾಲದ ಮಂಜೂರಾತಿ ಪತ್ರವನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ದಾವಣಗೆರೆ ಶಾಖೆಯ ವ್ಯವಸ್ಥಾಪಕರಾದ ರವಿಸಿಂಹ, ಹಿರಿಯ ವ್ಯವಸ್ಥಾಪಕರಾದ ವಿರಾಲ್ ಕುಮಾರ್ ಚೌವಾಲ, ಅಧಿಕಾರಿಗಳಾದ ವೆಂಕಟೇಶ್ ಸೋನಾಕರ್, ಸುರೇಶ್ ಕುಮಾರ್ ಭಾಗವಹಿಸಿದ್ದರು.
Views: 9