ಒನಕೆ ಓಬವ್ವ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಪುಟ್‌ಬಾಲ್ ಪಂದ್ಯಾವಳಿ: ವಿದ್ಯಾರ್ಥಿಗಳಿಗೆ ದೈಹಿಕ–ಮಾನಸಿಕ ಸದೃಢತೆ ಸಂದೇಶ.

ಚಿತ್ರದುರ್ಗ ನ. 30

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮಾನವ ಕ್ರೀಡೆಯಿಂದ ಉತ್ತಮವಾದ ಆರೋಗ್ಯವನ್ನು ಪಡೆಯಲು ಸಾಧ್ಯವಿದೆ, ಈ ಹಿನ್ನಲೆಯಲ್ಲಿ ಯಾವುದಾದರೊಂದು ಕ್ರಿಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಚಿತ್ರದುರ್ಗ ಪುಟ್ ಬಾಲ್ ಕ್ಲಬ್‍ನ ಅಧ್ಯಕ್ಷರಾದ ಫಾತ್ಯಾರಾಜನ್ ಕರೆ ನೀಡಿದರು.

ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಚಿತ್ರದುರ್ಗ ಪುಟ್‍ಬಾಲ್ ಕ್ಲಬ್ ವತಿಯಿಂದ ಸೆಟ್ ಟೆಕ್ನಾಲಜಿ ಆಶ್ರಯದಲ್ಲಿ 10,14,16 ವರ್ಷದೊಳಗಿನ ಸೆಟ್ ಪ್ರಮೀಯರ್ ಲೀಗ್‍ಪುಟ್‍ಬಾಲ್ ಪಂದ್ಯಾವಳಿ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ವಿವಿಧ ರೀತಿಯ ಕ್ರೀಡೆಗಳು ವರ್ಷ ಪೂರ್ತಿಯಾಗಿ ನಡೆಯುತ್ತವೆ, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಅಟವನ್ನು ಸಹಾ ಆಡುವುದರ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗಬೇಕಿದೆ ಎಂದರು.

ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದ ಅಭೀವೃದ್ದಿಗೆ ಸರ್ಕಾರ 27 ಕೋಟಿ ರೂ.ಗಳನ್ನು ನೀಡಿದೆ ಇದರಲ್ಲಿ 6.50 ಕೋಟಿರೂ.ಗಳನ್ನು ಪುಟ್‍ಬಾಲ್ ಮೈದಾನವನ್ನು ನಿರ್ಮಾಣ ಮಾಡಲು ಅನುಮತಿಯನ್ನು ನೀಡಿದೆ. ಇದರ ಹಿಂದೆ ಅಕ್ರಂರವರ ಹೋರಾಟ ಹೆಚ್ಚಾಗಿದೆ ಅವರು ಕ್ರೀಡಾ ಪ್ರೇಮಿಯಾಗಿದ್ದು ಆಟವನ್ನು ಆಡುವವರಿಗೆ ವಿವಿಧ ರೀತಿಯಲ್ಲಿ ನೆರವನ್ನು ನೀಡುತ್ತಿದ್ದಾರೆ ಎಂದರು.

ಚಿತ್ರದುರ್ಗ ಪುಟ್‍ಬಾಲ್ ಕ್ಲಬ್‍ನ ಉಪಾಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಕ್ರೀಡಾಪಟುಗಳನ್ನು ಬೆಳಸುವುದಕ್ಕಾಗಿ ಈ ರೀತಿಯಾದ ಪಂದ್ಯಾವಳಿಯನ್ನು ನಡೆಸಲಾಗುತ್ತದೆ ಇದರಲ್ಲಿ ಭಾಗವಹಿಸುವುದರ ಮೂಲಕ ಮುಂದೆ ಹೆಚ್ಚಿನ ರೀತಿಯಾದ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರ ಮೂಲಕ ಪದಕಗಳನ್ನು ಗೆಲುವಂತೆ ತಿಳಿಸಿ, ಇಂದಿನ ದಿನಮಾನದಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದು ಕಡಿಮೆಯಾಗುತ್ತಿದೆ, ಪೋಷಕರು ತಮ್ಮ ಮಕ್ಕಳನ್ನು ಬರೀ ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ಮಾಡದೆ ಕ್ರೀಡೆಯಲ್ಲಿ ಬಾಗವಹಿಸುವುದರ ಮೂಲಕ ಉತ್ತಮ ಕ್ರೀಡಾಪಟುಗಳಾಗುವಂತೆ ಕರೆ ನೀಡಿ ವಿದ್ಯಾರ್ಥಿಗಳು ಮೋಬೈಲ್ ಬಳಕೆಯನ್ನು ಕಡಿಮೆ ಮಾಡಿ ಈ ರೀತಿಯಾದ ಕ್ರೀಡೆಯಲ್ಲಿ ಭಾಗವಹಿಸಿ ಎಂದರು.

ಈ ಪಂದ್ಯಾವಳಿಯಲ್ಲಿ ಚಿತ್ರದುರ್ಗ ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರಿನಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ರಂ. ಇಮ್ರಾನ್ ಹುಸೇನ್ರ, ನವಾಜ್, ಸಿದ್ದಿಕ್, ಸೇರಿದಂತೆ ಇತರರು ಭಾಗವಹಿಸಿದ್ದರು.

Views: 20

Leave a Reply

Your email address will not be published. Required fields are marked *