ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದಲ್ಲಿ ಆಯೋಜನೆಯಾದ “ಪ್ರತಿಭಾ ಕಾರಂಜಿ” ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಮೆರೆದಿದ್ದು, ಹಲವಾರು ಬಹುಮಾನಗಳನ್ನು ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉತ್ತರ ಕ್ಲಸ್ಟರ್ ಮಟ್ಟದಲ್ಲಿ 26.11.2025 ಮತ್ತು 27.11.2025 ರಂದು ನಡೆದ ಸ್ಪರ್ಧೆಯಲ್ಲಿ, ಕಿರಿಯ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮೂರು ಹಂತಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಹಂತ – 1 : ಪ್ರಶಸ್ತಿ ಪಟ್ಟಿ
| ಅನ್ಕೆ | ವಿದ್ಯಾರ್ಥಿಯ ಹೆಸರು | ತರಗತಿ | ಸ್ಪರ್ಧೆ | ಸ್ಥಾನ |
|---|---|---|---|---|
| 1 | ಬಾಂಧವ್ಯ | 3ನೇ | ಛದ್ಮವೇಷ | ಪ್ರಥಮ |
| 2 | ರಿತು ವಿ ಲಾಡ್ | 4ನೇ | ಕಥೆ ಹೇಳುವುದು | ಪ್ರಥಮ |
| 3 | ಸಾನ್ವಿಕ ಎಸ್ | 4ನೇ | ಧಾರ್ಮಿಕ ಪಠಣ – ಸಂಸ್ಕೃತ | ತೃತೀಯ |
| 4 | ಮೊಹಮ್ಮದ್ ಉಮರ್ ಫರೂಕ್ | 4ನೇ | ಧಾರ್ಮಿಕ ಪಠಣ – ಅರೇಬಿಕ್ | ತೃತೀಯ |
| 5 | ನಿನಾದ್ ಸೂರ್ಯ | 3ನೇ | ದೇಶಭಕ್ತಿ ಗೀತೆ | ತೃತೀಯ |
ಹಂತ – 2 : ಪ್ರಶಸ್ತಿ ಪಟ್ಟಿ
| ಅನ್ಕೆ | ವಿದ್ಯಾರ್ಥಿಯ ಹೆಸರು | ತರಗತಿ | ಸ್ಪರ್ಧೆ | ಸ್ಥಾನ |
|---|---|---|---|---|
| 1 | ರಕ್ಷಿತಾ | 7ನೇ | ಕಂಠಪಾಠ – ಇಂಗ್ಲೀಷ್ | ದ್ವಿತೀಯ |
| 2 | ಆದ್ಯ ಎನ್ | 7ನೇ | ದೇಶಭಕ್ತಿ ಗೀತೆ | ದ್ವಿತೀಯ |
ಹಂತ – 3 : ಪ್ರಶಸ್ತಿ ಪಟ್ಟಿ
| ಅನ್ಕೆ | ವಿದ್ಯಾರ್ಥಿಯ ಹೆಸರು / ತಂಡ | ತರಗತಿ | ಸ್ಪರ್ಧೆ | ಸ್ಥಾನ |
|---|---|---|---|---|
| 1 | ಮೋನಿಷಾ | 10ನೇ | ಭಾಷಣ – ಹಿಂದಿ | ಪ್ರಥಮ |
| 2 | ಅಪೂರ್ವ ಮತ್ತು ತಂಡ | 8/9ನೇ | ಜಾನಪದ ನೃತ್ಯ | ಪ್ರಥಮ |
| 3 | ವಿದ್ಯಾಶ್ರೀ ಆರ್ ಎಂ | 10ನೇ | ಭಾಷಣ – ಕನ್ನಡ | ದ್ವಿತೀಯ |
| 4 | ರಶ್ಮಿತಾ | 10ನೇ | ಭಾಷಣ – ಇಂಗ್ಲೀಷ್ | ದ್ವಿತೀಯ |
| 5 | ನಾಗಪ್ರಣತಿ | 9ನೇ | ಧಾರ್ಮಿಕ ಪಠಣ – ಸಂಸ್ಕೃತ | ದ್ವಿತೀಯ |
| 6 | ಕೃತಿಕಾ ಬಿ ಜಿ | 9ನೇ | ಚರ್ಚಾ ಸ್ಪರ್ಧೆ | ದ್ವಿತೀಯ |
| 7 | ಸಿಂಚನಾ | 9ನೇ | ರಂಗೋಲಿ | ದ್ವಿತೀಯ |
| 8 | ಸಾನ್ವಿ | 9ನೇ | ಕವನ/ಪದ್ಯವಾಚನ | ದ್ವಿತೀಯ |
| 9 | ಸೃಷ್ಠಿ | 9ನೇ | ಆಶುಭಾಷಣ | ಪ್ರಥಮ |
| 10 | ಗಗನ ಪಡ್ವಿಡಿ | 9ನೇ | ಭರತನಾಟ್ಯ | ದ್ವಿತೀಯ |
| 11 | ಕನ್ನಿಕಾ ವೀರು ಮತ್ತು ಶ್ರೇಯ | 9/10ನೇ | ಕ್ವಿಜ್ | ದ್ವಿತೀಯ |
ತಾಲ್ಲೂಕು ಮಟ್ಟಕ್ಕೆ ಆಯ್ಕೆ
ಈ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು.
ಪ್ರಶಸ್ತಿ ಪಡೆದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ. ಬಿ ವಿಜಯ ಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಎಸ್ ಎಂ.ಪೃಥ್ವೀಶ, ಐಸಿಎಸ್‌ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಶಾಲೆಯ ಮುಖ್ಯೋಪಾಧ್ಯಾಯರಾದ ತಿಪ್ಪೇಸ್ವ್ವಾಮಿ ಎನ್ ಜಿ, ಶಾಲೆಯ ಎಲ್ಲಾ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಶ್ಲ್ಲಾಘಿಸಿ ಅಭಿನಂದಿಸಿರುತ್ತಾರೆ.
Views: 153