ಸಿಬ್ಬಂದಿ ಆಯ್ಕೆ ಆಯೋಗ (SSC)ವು ಸಶಸ್ತ್ರ ಪಡೆಗಳಲ್ಲಿ 25,487 ಕಾನ್ಸ್‌ಟೇಬಲ್ (General Duty) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. 10ನೇ ತರಗತಿ ಪಾಸ್ ಆಗಿರುವುದು ಸಾಕಾಗುತ್ತಿದ್ದು, 18 ರಿಂದ 23 ವರ್ಷದ ಅಭ್ಯರ್ಥಿಗಳು ಡಿಸೆಂಬರ್ 31, 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಧಿಸೂಚನೆಯ ಪ್ರಕಾರ ಈ ಹುದ್ದೆಗಳನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs), ಅಸ್ಸಾಂ ರೈಫಲ್ಸ್, ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF) ಸೇರಿದಂತೆ ಹಲವು ಘಟಕಗಳಲ್ಲಿ ಭರ್ತಿ ಮಾಡಲಾಗುತ್ತದೆ.
ಅರ್ಹತೆ (Eligibility)
- ಶೈಕ್ಷಣಿಕ ಅರ್ಹತೆ: ಕನಿಷ್ಠ 10ನೇ ತರಗತಿ ಪಾಸಾಗಿರಬೇಕು
- ವಯೋಮಿತಿ: 01-01-2026ರ ಸ್ಥಿತಿಗೆ 18 – 23 ವರ್ಷ
- ಜನನ ದಿನಾಂಕ: 02-01-2003 ರಿಂದ 01-01-2008ರ ನಡುವೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2025
- ಅರ್ಜಿ ಶುಲ್ಕ: ರೂ. 100
- SC/ST/Ex-Servicemenಗಳಿಗೆ ಶುಲ್ಕ ವಿನಾಯಿತಿ
ಆಯ್ಕೆ ಕ್ರಮ (Selection Process)
ಅಂತಿಮ ನೇಮಕಾತಿ ಕೆಳಗಿನ ಹಂತಗಳ ಆಧಾರದ ಮೇಲೆ ನಡೆಯಲಿದೆ:
- ಸಿಬಿಇ – ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ
- ಪಿಇಟಿ – ದೈಹಿಕ ಸಾಮರ್ಥ್ಯ ಪರೀಕ್ಷೆ
- ಪಿಎಸ್‌ಟಿ – ದೈಹಿಕ ಮಾನದಂಡ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
ಅಧಿಸೂಚನೆ & ಅರ್ಜಿ ಸಲ್ಲಿಕೆ
ಅಧಿಸೂಚನೆಯಲ್ಲಿ ಹುದ್ದೆಗಳ ವಿಭಾಗವಾರು ವಿವರಗಳು, ಶಾರೀರಿಕ ಅರ್ಹತೆ, ಪರೀಕ್ಷಾ ಪ್ಯಾಟರ್ನ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:
Views: 29