ಚಿತ್ರದುರ್ಗ| ವಿದ್ಯಾರ್ಥಿಗಳಿಂದ ನಶಾಮುಕ್ತ–ಅಂಗಾಂಗ ದಾನ ಜಾಗೃತಿ ಜಾಥಾ: RGUHS ನೇತೃತ್ವದಲ್ಲಿ ಭವ್ಯ ಆಯೋಜನೆ.

ಚಿತ್ರದುರ್ಗ ಡಿ. 02

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಶಾಮುಕ್ತ ಭಾರತ ಮತ್ತು ಅಂಗಾಂಗ ವಾಸ ಅಭಿಯಾನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿರುವ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮಹಾವಿದ್ಯಾಲಯದೊಂದಿದೆ ಹಮ್ಮಿಕೊಂಡಿರುವ ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಅಭಿಯಾನ ಮತ್ತು ಜಾಧಾ(ವಾಕಥಾನ್) ಕಾರ್ಯಕ್ರಮ ಡಿ. 3ರ ಬುಧವಾರ ಚಿತ್ರದುರ್ಗ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಖಾಸಗಿ ನರ್ಸಿಂಗ್ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಹೆಚ್. ಶ್ರೀನಿವಾಸ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಡ್ರಗ್ಸ್ ಮೆಡಿಕಲ್ ಕಾಲೇಜುಗಳಲ್ಲಿ ಮಾತ್ರ ಇತು ಆದರೆ ಇಂದಿನ ದಿನದಲ್ಲಿ ಇದು ಕಾಲೇಜುಗಲ ಹಂತಕ್ಕೆ ಬಂದಿದೆ ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ ಇದ್ದಲ್ಲದೆ ಸಾರ್ವಜನಿಕರಲ್ಲಿ ಅಂಗಾಂಗ ದಾನದ ಬಗ್ಗೆ ಮಾಹಿತಿಯನ್ನು ನೀಡಿ ಜಾಗೃತಿಯನ್ನು ಮೂಡಿಸಬೇಕಿದೆ ಎಂದರು.

ಡಿ 3ರ ಬೆಳಿಗ್ಗೆ 8.30 ಗಂಟೆಯಿಂದ, ಗಾಂಧಿ ಸರ್ಕಲ್‍ನಿಂದ ಜಾಥಾ ಪ್ರಾರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಅಂತ್ಯವಾಗಲಿದೆ 10 ಗಂಟೆಯಿಂದ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಸದ್ಗುರು ಕಬೀರಾನಂದ ಸ್ವಾಮಿ ಮಠದ ಶ್ರೀ ಶಿವಲಿಂಗಾನಂದ ಸ್ವಾಮಿಗಳು, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ|| ಬಸವಕುಮಾರ ಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಯೋಜನೆ ಮತ್ತು ಸಾಂಖಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ನೇರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಭಗವಾನ್ ಬಿ.ಸಿ. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಡಾ|| ಎಂ. ಚಂದ್ರಪ್ಪ ಕೆ.ಎಸ್. ನವೀನ್, ಅಪರ ಜಿಲ್ಲಾಧಿಕಾರಿಗಳು, ಬಿ.ಟಿ. ಕುಮಾರಸ್ವಾಮಿ, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಂಜಿತ್ ಕುಮಾರ್ ಬಂಡಾರು, ಬಸವೇಶ್ವರ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಪ್ರಶಾಂತ್ ಜಿ. ಚಿತ್ರದುರ್ಗ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ನ ನಿರ್ದೇಶಕರಾದ ಡಾ|| ಯುವರಾಜ್ ವಿ. ಚಿತ್ರದುರ್ಗ ಭಾರತೀಯ ವೈದ್ಯಕಿಯ ಸಂಘದ ಅಧ್ಯಕ್ಷರಾದ ಡಾ. ಪಾಲಾಕ್ಷಯ್ಯ ಎಲ್. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ|| ವೆಂಕಟಗಿರಿ ಕೆ ಹಾಗೂ ರೇಡಿಯೋಲಜಿಸ್ಟ್ ಡಾ||ಸಿದ್ದಾರ್ಥ್‍ಗುಂಡಾರ್ಪಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ನಡೆಯುವ ಜಾಥಾ ಹಾಗೂ ಕಾರ್ಯಕ್ರಮದಲ್ಲಿ ಚಿತ್ರದುರ್ಗದಲ್ಲಿನ ನರ್ಸಿಂಗ್, ಮೆಡಿಕಲ್, ಆರ್ಯವೇದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

Views: 13

Leave a Reply

Your email address will not be published. Required fields are marked *