ಚಿತ್ರದುರ್ಗ ಡಿ. 03
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕಾಂಗ್ರೆಸ್ ಪಕ್ಷದ ಕಿಸಾನ್ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದ ಶಿವಲಿಂಗಪ್ಪರವರು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆಯನ್ನು ಮಾಡಲು ಶಿಫಾರಸ್ಸು, ಚಳ್ಳಕೆರೆ ಶಾಸಕರನ್ನು ಮಂತ್ರಿಯನ್ನಾಗಿ ಮಾಡಬೇಕು ಹಾಗೂ ದೆಹಲಿಯಲ್ಲಿ ನಡೆಯಲಿರುವ ವೋಟೋ ಚೋರ್ ಗದ್ದಿ ಚೋಡ್ ಕಾರ್ಯಕ್ರಮಕ್ಕೆ ಚಿತ್ರದುರ್ಗದಿಂದ ಕಿಸಾನ್ ಸಂಘದಿಂದ 200 ಜನ ರೈತರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಕಿಸಾನ್ ಸಂಘದ ಅಧ್ಯಕ್ಷರಾದ ನಾಗರಾಜ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕಿಸಾನ್ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದ ಶಿವಲಿಂಗಪ್ಪರವರು ಇತ್ತೀಚೆಗೆ ಯಾರಿಗೂ ಹೇಳದೇ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆಯನ್ನು ನೀಡದೆ ಅವರು ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ. ಗ್ರಾಮದಲ್ಲಿದ್ದ ಅವರನ್ನು ಕರೆ ತಂದು ಕಿಸಾನ್ ಸಂಘದ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು ಅದರೆ ಅವರು ಎಂಧು ಸಹಾ ಪಕ್ಷಕ್ಕೆ ನಿಷ್ಠೆಯಾಗಿರಲಿಲ್ಲ ಉಪಾಧ್ಯಕ್ಷನಾಗಿದ್ದರೂ ಸಹಾ ಅಧ್ಯಕ್ಷ ಎಂದು ಎಲ್ಲಾ ಕಡೆಯಲ್ಲಿ ಹೇಳಿಕೊಳ್ಳುತ್ತಾ ಕಚೇರಿಗಳಲ್ಲಿ ವಿಜಿಟಿಂಗ್ ಕಾರ್ಡ ನೀಡಿ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿದ್ದರು ರೈತರ ಪರವಾಗಿ ಏನು ಕೆಲಸ ಮಾಡಿಲ್ಲ ಈ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಯನ್ನು ಮಾಡಲು ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್‍ರವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಸ್ಥಾನಗಳಲ್ಲಿ ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಶಾಸಕರನ್ನಾಗಿ ಪಡೆದಿದೆ. ಇದರಲ್ಲಿ ಚಳ್ಳಕೆರೆ ಶಾಸಕರು ಕಳೆದ ಮೂರು ಬಾರಿ ಸತತವಾಗಿ ಆಯ್ಕೆಯಾಗಿದ್ದಾರೆ, ಇವರು ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭೀವೃದ್ದಿಯನ್ನು ಮಾಡಿದ್ದಾರೆ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಯೂ ಸಹಾ ಆಘದ ಅಭೀವೃದ್ದಿ ಚಳ್ಳಕೆರೆ ಕ್ಷೇತ್ರದಲ್ಲಿ ಆಗಿದೆ ಶಾಲಾ-ಕಾಲೇಜುಗಳ ನಿರ್ಮಾಣ ಆಸ್ಪತ್ರೆಗಳ ಸ್ಥಾಪನೆ, ಚಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ರೈತರಿಗೆ ನೀರನ್ನು ನೀಡಿದ್ದಾರೆ. ಹಲವಾರು ಪ್ರಗತಿಯನ್ನು ಮಾಡಿದ್ದಾರೆ, ಸಿದ್ದರಾಮಯ್ಯರವರು ಸಚಿವ ಸಂಪುಟವನ್ನು ಪುನರ್ ರಚನೆ ಮಾಡುವ ಸಮಯದಲ್ಲಿ ಈಗ ಇರುವ ಸಚಿವ ಡಿ.ಸುಧಾಕರ್‍ರವರನ್ನು ಒಳಗೊಂಡಂತೆ ರಘುಮೂರ್ತಿಯವರಿಗೂ ಸಹಾ ಸಚಿವ ಸ್ಥಾನವನ್ನು ನೀಡುವುದರ ಮೂಲಕ ಚಳ್ಳಕೆರೆ ಅಲ್ಲದೆ ರಾಜ್ಯ ಮತ್ತಷ್ಟು ಅಭೀವೃದ್ದಿಯನ್ನು ಕಾಣುವಂತೆ ಮಾಡುವಂತೆ ಪಕ್ಷದ ಹೈಕಮಾಂಡಿಗೆ ಮನವಿ ಮಾಡಿದ್ದಾರೆ.
ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರ ಮತಗಳ್ಳತನದಿಂದ ಅಧಿಕಾರವನ್ನು ಹಿಡಿದಿದೆ, ಇದಕ್ಕೆ ಚುನಾವಣಾ ಆಯೋಗವು ಸಹಾ ಸಾಥ್ ನೀಡುತಿದೆ ಇದರಿಂದ ಮೋದಿಯವರು ಮೂರನೇ ಸಲ ಪ್ರದಾನ ಮಂತ್ರಿಯಾಗಿದ್ದಾರೆ ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷದ ಮುಖಂಡರಾಧ ರಾಹುಲ್ ಗಾಂಧಿಯವರು ಮತಗಳ್ಳತವನ್ನು ಸಾಕ್ಷಿ ಸಮೇತ ನೀಡಿದ್ದಾರೆ, ಆದರೂ ಸಹಾ ಆಯೋಗ ಇದನ್ನು ನಂಬದೇ ಜನರಿಂದ ದೂರು ಬರಬೇಕು ಎಂದಿದ್ದಾರೆ ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಮತದಾರರಿಂದ ಸಹಿ ಅಭಿಯಾನವನ್ನು ರಾಜ್ಯದಲ್ಲಿ ಪ್ರಾರಂಭ ಮಾಡಿ ಲಕ್ಷಾಂತರ ಜನ ಮತದಾರರ ಸಹಿಯನ್ನು ಪಡೆದು ಅದನ್ನು ಚುನಾವಣಾ ಆಯೋಗಕ್ಕೆ ನೀಡಲಿದ್ದಾರೆ ಇದರ ಸಂಬಂಧ ದೆಹಲಿಯಲ್ಲಿ ವೋಟೋ ಚೋರ್ ಗದ್ದಿ ಚೋಡ್ ಕಾರ್ಯಕ್ರಮ ನಡೆಯಲಿದೆ ಇದರಲ್ಲಿ ಭಾಗವಹಿಸಲು ಚಿತ್ರದುರ್ಗ ಕಿಸಾನ್ ಸಂಘದದಿಂದ 200 ಜನ ರೈತರು ಹೊರಡಲಿದ್ದಾರೆ ಎಂದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಐದು ಕ್ಷೇತ್ರದಲ್ಲಿ ಜಯಗಳಿಸಿರುವ ಕಾಂಗ್ರೆಸ್ ಶಾಸಕರಲ್ಲಿ ಈಗಾಗಲೇ ಒಬ್ಬರು ಸಚಿವರಾಗಿದ್ದಾರೆ ಉಳಿದ ನಾಲ್ವರಲ್ಲಿ ಒಬ್ಬರು ಹೊಸಬರಾಗಿದ್ದಾರೆ ಉಳಿದ ಮೂರು ಜನ ಸಚಿವರಾಗಲು ಅರ್ಹತೆಯನ್ನು ಹೊಂದಿದ್ದಾರೆ ಆದರೆ ಚಳ್ಳಕೆರೆ ಶಾಸಕರಾದ ರಘುಮೂರ್ತಿಯವರ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ಕ್ಷೇತ್ರದಲ್ಲಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಅಭೀವೃದ್ದಿ ಕುಂಠಿತವಾಗಿಲ್ಲ ಎಲ್ಲಾ ಕಡೆಯಲ್ಲಿಯೂ ಸಹಾ ಅಭೀವೃದ್ದಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ, ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟವನ್ನು ಪುನರ್ ರಚನೆ ಮಾಡುವುದಾದರೆ ಅದರಲ್ಲಿ ಶಾಸಕರಾದ ರಘುಮೂರ್ತಿಯವರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದು ಪಕ್ಷದ ಹೈಮಾಂಡ್‍ನ್ನು ಆಗ್ರಹಿಸಿದ್ದು, ದೆಹಲಿಯಲ್ಲಿ ನಡೆಯಲಿರುವ ವೋಟೋಚೋರ್ ಗದ್ದಿಚೋಡ್ ಕಾರ್ಯಕ್ರಮದಲ್ಲಿ ಚಿತ್ರದುರ್ಗದಿಂದ 300 ಜನ ಭಾಗವಹಿಸಲಿದ್ದಾರೆ ಎಂದರು.
ಗೋಷ್ಟಿಯಲ್ಲಿ ಚಿತ್ರದುರ್ಗ ಬ್ಲಾಕ್ ಕಾಂಗ್ರೆಸ್‍ನ ಸುರೇಶ್, ಗ್ರಾಮಾಂತರ ಸಂಘದ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯಪ್ಪ ಉಪಸ್ಥಿತರಿದ್ದರು.
Views: 29