06 ಡಿಸೆಂಬರ್ 2025ರ ಶನಿವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ಕೃತ್ತಿಕಾ / ರೋಹಿಣೀ, ಯೋಗ : ಶಿವ, ಕರಣ : ಬಾಲವ, ಸೂರ್ಯೋದಯ – 06 – 30 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:20 – 10:46, ಯಮಗಂಡ ಕಾಲ 13:36 – 15:01, ಗುಳಿಕ ಕಾಲ 06:10 – 07:55
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಶನಿವಾರ ಹುಡುಕಾಟ, ನಿರಂತರತೆ, ಅರೋಗ್ಯ ಸ್ಥಿರ, ಪ್ರಯಾಣ, ನಿರ್ಮಾಣ, ಇಚ್ಛೆ ಪೂರ್ಣ, ಆದಾಯದಲ್ಲಿ ಗೊಂದಲ ಇವೆಲ್ಲ ಇಂದಿನ ವಿಶೇಷ. ಇಂದು ನೀವು ಎದುರಿಸಬಹುದಾದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳ ಬಗ್ಗೆ ಜ್ಯೋತಿಷ್ಯ ಸಲಹೆಗಳನ್ನು ಪಡೆಯಿರಿ.
ಮೇಷ ರಾಶಿ:
ಭಾವನಾಶೀಲತೆ ಹೆಚ್ಚಾಗಿ ಕಲಾತ್ಮಕ ಚಿಂತನೆ ಬೆಳೆಯುತ್ತದೆ. ಹಣಕಾಸು ಸಾಮಾನ್ಯ ವೃದ್ಧಿ. ಕೆಲಸದಲ್ಲಿ ಪ್ರತಿಫಲ ನಿಧಾನವಾದರೂ ಖಚಿತ. ಇಂದಿನ ವ್ಯವಹಾರವನ್ನು ತಾಳ್ಮೆಯಿಂದ ನಿರ್ವಹಿಸಬೇಕು. ಆಸ್ತಿಯ ಬಗ್ಗೆ ಕಾನೂನಾತ್ಮಕವಾಗಿ ಇರಬೇಕಾಗುವುದು. ಇಂದು ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಕೈ ತಪ್ಪಿ ಹೋಗಿದೆ ಎಂದುಕೊಂಡಿದ್ದ ಯೋಜನೆಗಳು ಸಿಗಬಹುದು. ಬಹಳ ದಿನಗಳ ಅನಂತರ ನೀವು ಹುಡುಕಿದ್ದು ಸಿಗಬಹುದು. ಆದರೆ ಪ್ರಯೋಜನವಾಗದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ. ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬಹುದು. ಹಳೆಯ ಒಡಂಬಡಿಕೆಯಿಂದ ಲಾಭ. ಧ್ಯಾನ, ಪ್ರಾರ್ಥನೆ ಶುಭ. ಆರೋಗ್ಯದಲ್ಲಿ ನಿದ್ರೆ ಸರಿಯಾಗಿ ತೆಗೆದುಕೊಳ್ಳುವುದು ಪ್ರಮುಖ. ಎಲ್ಲೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು.
ವೃಷಭ ರಾಶಿ:
ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ. ಮನೆಯಲ್ಲಿ ಅಪರೂಪದ ಹರ್ಷಕ್ಕೆ ಸನ್ನಿವೇಶ ನಿರ್ಮಾಣ. ಅಪರಿಚಿತರ ಮಾತಿಗೆ ಮರುಳಾಗಬೇಡಿ. ಸೃಜನಶಕ್ತಿಯ ಬೆಳವಣಿಗೆ. ಆರೋಗ್ಯದಲ್ಲಿ ನೀರಿನ ಸೇವನೆ ಹೆಚ್ಚಿಸಿ. ಎಲ್ಲದಕ್ಕೂ ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ಅಸ್ಪಷ್ಟ ಮಾಹಿತಿಗಳು ನಿಮ್ಮ ದಿಕ್ಕು ತಪ್ಪಿಸಬಹುದು. ಸ್ವಂತ ಉದ್ಯಮ ಮಾಡುವವರಿಗೆ ಒಳ್ಳೆಯ ಸಮಯ. ಕಟ್ಟುಪಾಡುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಿರಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ನಿಮ್ಮ ದಿನದ ಆರಂಭವು ಸಾಮಾನ್ಯವಾಗಿರುತ್ತದೆ. ಹಣವನ್ನು ಬಹಳ ನೈಪುಣ್ಯದಿಂದ ಖರ್ಚು ಮಾಡುವಿರಿ. ಹೊಸ ಕಲಿಕೆ ಆಲೋಚನೆಗಳ ದಿನ. ಉದ್ಯೋಗದಲ್ಲಿ ಚುರುಕು. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ. ಕೆಲಸದ ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆಯಿದೆ. ಇಂದು ಸಂಘರ್ಷವು ನಿಮಗೆ ಪ್ರಯೋಜನಕಾರಿ ಆಗಿರುವುದಿಲ್ಲ.
ಮಿಥುನ ರಾಶಿ:
ದೀರ್ಘಕಾಲದ ಯೋಜನೆಗೆ ಪ್ರಾರಂಭ ಶುಭ. ಶಾಂತ ಮನಸ್ಸು ನಿರ್ಧಾರಗಳಿಗೆ ನೆರವಾಗುತ್ತದೆ. ಆರೋಗ್ಯ ಉತ್ತಮವಾಗಿದ್ದರೂ ವಿಶ್ರಾಂತಿ ಅಗತ್ಯ. ಇಂದು ಯಾವುದೇ ಕಾರಣಕ್ಕೂ ನಿಮ್ಮ ಕರ್ತವ್ಯದಲ್ಲಿ ಯಾವುದೇ ಲೋಪವು ಬಾರದಂತೆ ನೋಡಿಕೊಳ್ಳಿ. ಇನ್ನೊಬ್ಬರ ಮಾತನ್ನು ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ಇಂದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇರಿಸಿ. ದೈಹಿಕವಾಗಿ ಸದೃಢವಾಗಿರಲು ನಿಮ್ಮ ಪ್ರಯತ್ನ ಅತಿ ಮುಖ್ಯ. ಸಂಗಾತಿಯ ಸೂಕ್ಷ್ಮ ಭಾವಕ್ಕೆ ಪೆಟ್ಟು ಬೀಳಬಹುದು. ಅಪಕ್ವ ಮನುಷ್ಯರು ನಿಮ್ಮನ್ನು ಭೇಟಿಯಾಗಬಹುದು. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಮಹತ್ವದ ಕೆಲಸವು ಹಲವು ದಿನಗಳವರೆಗೆ ಬಾಕಿಯಿದ್ದರೆ, ಅವುಗಳನ್ನು ಮುಗಿಸಿ. ನೀವು ಉತ್ತಮ ಆರ್ಥಿಕ ಯೋಜನೆಯನ್ನು ಮಾಡಬಹುದು. ಉದ್ಯೋಗದಲ್ಲಿ ಉತ್ತಮ ಸುದ್ದಿ ಸಾಧ್ಯ. ಕುಟುಂಬದಲ್ಲಿ ಸಂತೋಷ. ಹಣವ್ಯವಹಾರದಲ್ಲಿ ಸ್ಥಿರತೆ. ಮನೆಯ ವೆಚ್ಚದಲ್ಲಿ ಇಳಿಕೆಯಾಗುವುದು.
ಕರ್ಕಾಟಕ ರಾಶಿ:
ಕುಟುಂಬ ವಿಷಯದಲ್ಲಿ ಸಹನಶೀಲತೆಯ ಅಗತ್ಯ. ಅಧ್ಯಾತ್ಮಿಕ ಚಿಂತನೆಯಿಂದ ಮನಃಶಾಂತಿ ಹೆಚ್ಚಿಸುತ್ತದೆ. ಸ್ನೇಹಿತರ ಸಹಾಯ ದೊರೆಯುತ್ತದೆ. ನಿಮ್ಮ ಮಾತು ಕಿರಿಕಿರಿಯಾಗಬಹುದು. ಹಿರಿಯರ ಮಾತನ್ನು ಧಿಕ್ಕರಿಸಿ ಮುನ್ನಡೆಯುವುದು ಬೇಡ. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ಇಂದು ನಿಮಗೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎಂದು ಮನಸ್ಸು ಹೇಳುವುದು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಪ್ರಾಪ್ತಿಯಾಗಲಿದೆ. ಇಂದು ಮಹಿಳೆಯರಿಗೆ ಶುಭ ದಿನ. ಪ್ರಾರ್ಥನೆಯ ಪರಿಣಾಮ ನಿಮ್ಮ ಮನಸ್ಸು ಎಂದಿಗಿಂತ ನೆಮ್ಮದಿಯಿಂದ ಇರಲಿದೆ. ಸ್ಥಗಿತಗೊಂಡ ಕೆಲಸದಲ್ಲಿ ವೇಗವನ್ನು ಪಡೆಯುವುದು. ಹಣದ ವ್ಯವಹಾರದಲ್ಲಿ ಜಾಗ್ರತೆ. ಕೆಲಸಗಳಲ್ಲಿ ಫಲ ನಿಧಾನ. ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗಿಕೊಳ್ಳುವುದು. ವಿವಾದಕ್ಕಾಗಿಯೇ ಮಾತನಾಡುವುದು ಬೇಡ. ಉದ್ಯೋಗದಲ್ಲಿ ಕೆಲವು ವಿಚಾರಗಳನ್ನು ನೀವು ಕಲಿಯಬೇಕಾಗುವುದು.
ಸಿಂಹ ರಾಶಿ:
ಯೋಜನೆಯಲ್ಲಿ ದಿಟ್ಟ ನಿರ್ಧಾರ ಫಲಕಾರಿ. ಶತ್ರುಗಳ ಚಟುವಟಿಕೆ ಕಳಾಹೀನವಾಗಲಿದೆ. ಆರೋಗ್ಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಹಿತ್ತಾಳೆ ಕಿವಿಯಿಂದ ಸಂಬಂಧವು ಹಾಳಾಗುವುದು. ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ ಸೂಚನೆ ಬರಬಹುದು. ವೃತ್ತಿಪರ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಸರಿಯಾದ ಆಹಾರ ಮತ್ತು ಶಿಸ್ತುಬದ್ಧ ಜೀವನವು ನಿಮ್ಮ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ವಸ್ತುಗಳ ಖರೀದಿಯಲ್ಲಿ ಧಾವಂತ ಬೇಡ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ. ಆಂತರಿಕ ಶಕ್ತಿ ಉನ್ನತ ಹಂತಕ್ಕೆ. ಗೂಢ ವಿಚಾರಗಳಲ್ಲಿ ಪ್ರಗತಿ. ಹಣಕಾಸಿನಲ್ಲಿ ಅಪ್ರತೀಕ್ಷಿತ ಲಾಭ. ಮನೆಯಲ್ಲಿನ ಮಾತುಕತೆ ಸುಗಮ. ಕಠಿಣ ಪರಿಶ್ರಮದ ಆಧಾರದ ಮೇಲೆ, ಕಷ್ಟಕರವಾದ ಕೆಲಸಗಳನ್ನು ಕೂಡ ಸುಲಭವಾಗಿ ಪೂರ್ಣಗೊಳಿಸುವಿರಿ. ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದು.
ಕನ್ಯಾ ರಾಶಿ:
ಆರ್ಥಿಕವಾಗಿ ಸಾಧಾರಣೆಯಿಂದ ಮನಸ್ಸಿಗೆ ಲಘುತ್ವ. ಕುಟುಂಬದಲ್ಲಿ ಮಧುರ ಕ್ಷಣ. ಇಚ್ಛಾಪೂರ್ತಿಗೆ ಅವಕಾಶ. ಸ್ನೇಹ ಸಂಬಂಧ ಬಲವಾಗುತ್ತದೆ. ಹಿತಶತ್ರುಗಳನ್ನು ಆಪ್ತತೆಯಿಂದ ನಿಮ್ಮವರನ್ನಾಗಿ ಮಾಡಿಕೊಳ್ಳುವಿರಿ. ಎಲ್ಲವನ್ನು ನೀವು ಕಲ್ಪಿಸಿಕೊಂಡು ಅನಂತರ ಸಂಕಟಪಡುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಕಾರ್ಯದ ಕಾರಣದಿಂದ ದೂರದೂರಿಗೆ ಪ್ರಯಾಣ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಸಾಮರಸ್ಯ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಸ್ಪಷ್ಟ ನಿಲುವನ್ನು ಇಟ್ಟುಕೊಳ್ಳಿ. ಸಮತೋಲನವೇ ನಿಮ್ಮ ಶಕ್ತಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ಆರೋಗ್ಯದಲ್ಲಿ ಮಾನಸಿಕ ಧೈರ್ಯ ಮುಖ್ಯ. ನಿಮ್ಮ ಆದಾಯ ಚೆನ್ನಾಗಿರುತ್ತದೆ. ಕೆಲವರಿಗೆ ವಿದೇಶಕ್ಕೆ ಹೋಗುವ ಶುಭ ಸುದ್ದಿ ಸಿಗಬಹುದು. ಹಿರಿಯರು ನಿಮ್ಮ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು.
ತುಲಾ ರಾಶಿ:
ಆತಂಕಗಳನ್ನು ಬದಿಗಿಟ್ಟು ಸ್ಪಷ್ಟ ಯೋಚನೆ ಮಾಡಿಕೊಂಡರೆ ನಿರೀಕ್ಷಿತ ಫಲ ಸಿಗುತ್ತದೆ. ಆರೋಗ್ಯದಲ್ಲಿ ಲಘು ತೊಂದರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು. ಭೂಮಿ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯವು ಆಗುವುದು. ವೃತ್ತಿಪರರು ಇಂದು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಹತ್ತಿರದವರು ದೂರಾಗಬಹುದು. ಹಳೆಯ ಬಂಧುಗಳನ್ನು ಭೇಟಿ ಮಾಡುವುದು ಇಂದಿನ ಉತ್ಸಾಹಕ್ಕೆ ಕಾರಣವಾಗುವುದು. ನೀವು ಹೊಸ ಗುರಿಗಳನ್ನು ಹೊಂದಿದ್ದು ನಿಮ್ಮ ಪ್ರಯತ್ನಗಳನ್ನು ಪ್ರಾರಂಭಿಸುವಿರಿ. ನೀವು ಕೆಲವು ವ್ಯವಹಾರ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಸಂಪತ್ತಿನ ಹೆಚ್ಚಳವಾಗಬಹುದು. ಇಂದು ಯಾವುದೇ ಕೆಲಸ ಮಾಡುವಾಗ, ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಸೂಕ್ಷ್ಮಬುದ್ಧಿ ಉತ್ತಮ ನಿರ್ಧಾರ ತರುತ್ತದೆ. ಹಣಕಾಸಿನಲ್ಲಿ ಸುಧಾರಣೆ. ಕೆಲಸದಲ್ಲಿ ಒತ್ತಡ ಇದ್ದರೂ ಫಲದಾಯಕ. ಮನೆಯ ಹಿರಿಯರ ಸಲಹೆ ಶುಭ. ವಿದ್ಯಾರ್ಥಿಗಳಿಗೆ ಉತ್ತೇಜನ.
ವೃಶ್ಚಿಕ ರಾಶಿ:
ದಂಪತಿಗಳ ಮಧ್ಯದಲ್ಲಿ ಅರ್ಥೈಸಿಕೊಳ್ಳುವಿಕೆ ವಾತಾವರಣ ನಿರ್ಮಾಣವಿರಲಿದೆ. ಹಣದ ವಿಷಯದಲ್ಲಿ ಜಾಗ್ರತೆ. ಆತ್ಮಶಕ್ತಿ ಬಲವಾಗಿ, ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯ ಸಾಮಾನ್ಯ. ಇಂದು ನೀವು ಬಹಳ ಸೌಮ್ಯತೆಯಿಂದ ವ್ಯವಹರಿಸಬೇಕು. ಉದ್ಯೋಗದಿಂದ ಹೊರಬಂದು ಮನೆಯ ಬಗ್ಗೆ ಗಮನ ಹೆಚ್ಚಾಗುವುದು. ಇಂದು ಕೆಲಸದ ಸ್ಥಳದ ಸಮಸ್ಯೆಗಳಿಗೆ ನಿಮ್ಮ ನಿಷ್ಪಕ್ಷಪಾತ ವಿಧಾನವು ನಿಮ್ಮನ್ನು ಜನಪ್ರಿಯಗೊಳಿಸುವುದು. ಕೆಲವು ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ನೀವು ಇಂದು ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ. ನಿಮ್ಮ ಕೀರ್ತಿ ಹೆಚ್ಚುವ ದಿನ. ಉದ್ಯೋಗದಲ್ಲಿ ಹಿರಿಯರಿಂದ ಮೆಚ್ಚುಗೆ. ಹೊಸ ಕಾರ್ಯದ ಯೋಜನೆ ಯಶಸ್ವಿಯತ್ತ ಸಾಗುತ್ತದೆ. ಉತ್ತಮ ಕೆಲಸದಿಂದಾಗಿ, ಉದ್ಯೋಗದಲ್ಲಿ ಬಡ್ತಿ ಮತ್ತು ಉನ್ನತ ಸ್ಥಾನ ಪಡೆಯುವ ಲಕ್ಷಣವಿದೆ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು.
ಧನು ರಾಶಿ:
ಸ್ನೇಹಿತರೊಂದಿಗೆ ಮಾತಿನ ಬೇಧ ತಪ್ಪಿಸಿ. ಪ್ರಯಾಣಕ್ಕೆ ಯೋಗ್ಯ ದಿನವಲ್ಲ. ಆರೋಗ್ಯದಲ್ಲಿ ಜೀರ್ಣಕ್ರಿಯೆಯಲ್ಲಿ ಕಾಳಜಿ ಅಗತ್ಯ. ಸ್ನೇಹಿತರ ಜೊತೆ ನೀವು ಈ ದಿನವನ್ನು ಆನಂದದಿಂದ ಕಳೆಯುವಿರಿ. ಆದಾಯದಲ್ಲಿ ಹಿನ್ನಡೆ ಆಗುವುದು. ಬುದ್ಧಿವಂತಿಕೆಯಿಂದ ನೀವು ಹಣದ ವಂಚನೆಯಿಂದ ತಪ್ಪಿಸಿಕೊಳ್ಳುವಿರಿ. ತಂತ್ರಜ್ಞರಿಗೆ ಈ ದಿನವು ಅನುಕೂಲಕರವಾಗಿರುತ್ತದೆ. ಖರೀದಿಯಲ್ಲಿ ಉತ್ಸಾಹವು ಹೆಚ್ಚಿರುವುದು. ಮಾತು ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ನಿಮ್ಮ ತಿಳುವಳಿಕೆ ಮತ್ತು ಸಭ್ಯತೆಯಿಂದ ಎಲ್ಲರೂ ಬಹಳ ಪ್ರಭಾವಿತರಾಗಬಹುದು. ಭಾವನಾತ್ಮಕ ಶಕ್ತಿಯ ಹೆಚ್ಚಳ. ಕುಟುಂಬದಲ್ಲಿ ಹೊಸ ವಿಚಾರ ಚರ್ಚೆಗೆ ಬರುತ್ತದೆ. ಕೆಲಸಗಳಲ್ಲಿ ಪ್ರಗತಿ ನಿಧಾನವಾದರೂ ನಿಖರತೆ ಕಾಣಿಸುವುದು. ಹಣದ ವಿಷಯಗಳಲ್ಲಿ ಆಸಕ್ತಿದಾಯಕ ಕೊಡುಗೆಗಳನ್ನು ಕಾಣಬಹುದು. ನಿಮ್ಮ ವಿಚಾರವನ್ನು ಇತರರ ಮುಂದೆ ಬಹಿರಂಗವಾಗಿ ಇರಿಸಿ.
ಮಕರ ರಾಶಿ:
ಕುಟುಂಬ ಮಾತುಕತೆಯಲ್ಲಿ ಸೌಹಾರ್ದತೆಯಲ್ಲಿ ಮುಕ್ತಾಯ. ಧನಪ್ರವಾಹ ಸಾಮಾನ್ಯ. ಮಾನಸಿಕ ಶಾಂತಿಗಾಗಿ ಧ್ಯಾನ ಸೂಕ್ತ. ಗತಿ ಕಡಿಮೆ ಇದ್ದರೂ ಫಲ ನಿಧಾನವಾಗಿ ನಿಮ್ಮತ್ತ ಬರಲಿದೆ. ಉದ್ಯಮವನ್ನು ಸಡಿಲಮಾಡುವುದು ಬೇಡ. ನಿರುದ್ಯೋಗದ ಕಾರಣಕ್ಕೆ ಎಲ್ಲರೂ ನಿಮ್ಮನ್ನು ತಮಾಷೆ ಮಾಡಬಹುದು. ಈ ದಿನ ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಬಂದ ಹಣದಿಂದ ಸಾಲಬಾಧೆ ನಿವಾರಣೆಯಾಗುವುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ನೀವು ಎಲ್ಲರೊಂದಿಗೆ ಸಭ್ಯವಾಗಿ ಮಾತನಾಡಬೇಕು. ನಿಮ್ಮದೇ ಆದ ಒತ್ತಡಗಳು ನಿಮಗೆ ಇರಲಿದೆ. ಸಂವಹನ ನಿಮಗೆ ಉದ್ಯೋಗದಲ್ಲಿ ಹೊಸ ಅವಕಾಶದ ಬಾಗಿಲು ತೆರೆಯಬಹುದು. ವಿದ್ಯಾರ್ಥಿಗಳಿಗೆ ಉತ್ತೇಜನ. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ನಿಮಗೆ ಇಂದು ಸುತ್ತಾಟ ಹೆಚ್ಚಾಗಬಹುದು.
ಕುಂಭ ರಾಶಿ:
ಕೆಲಸಗಳಲ್ಲಿ ವಿಳಂಬ ಕಂಡರೂ ಅಂತಿಮ ಫಲ ಉತ್ತಮ. ಸ್ನೇಹಿತರ ಬೆಂಬಲ ಸಿಗುತ್ತದೆ. ಹೊಸ ಒಡಂಬಡಿಕೆಗಳಿಗೆ ಸಮಯ ಅನುಕೂಲ. ಆರೋಗ್ಯದಲ್ಲಿ ಆಹಾರ ಕ್ರಮದಲ್ಲಿ ಕಾಳಜಿ ಒಳ್ಳೆಯದು. ನಿಮ್ಮ ವೃತ್ತಿಯ ಆದಾಯಕ್ಕಿಂತ ಬೇರೆ ಕಡೆಯಿಂದ ಆದಾಯ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ನಂಬಿಕೆಯ ಆಧಾರದಲ್ಲಿ ಹಣವನ್ನು ಕೊಡುವಿರಿ. ನಿಮ್ಮ ಈ ದಿನವು ಆತ್ಮವಿಶ್ವಾಸದಿಂದ ಇರುತ್ತದೆ. ಕುಟುಂಬದ ಯುವ ಸದಸ್ಯರ ಯಶಸ್ಸಿನಲ್ಲಿ ಹೆಮ್ಮೆ ಪಡುವಿರಿ. ಉದ್ಯಮಿಗಳಿಗೆ ಲಾಭದ ದಿನ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯ ಜೊತೆ, ನೀವು ಖರ್ಚು ಮಾಡುವ ಪರಿಸ್ಥಿತಿಯೂ ಬರಬಹುದು. ಧನಲಾಭದ ಸೂಚನೆಗಳು ಬಲವಾಗುತ್ತವೆ. ಹಳೆಯ ಚಿಂತೆಗಳು ನಿಧಾನವಾಗಿ ದೂರವಾಗುತ್ತವೆ. ಕುಟುಂಬದಲ್ಲಿ ಶಾಂತ ವಾತಾವರಣ.
ಮೀನ ರಾಶಿ:
ಎದುರಾಳಿಗಳ ಮಾತುಗಳಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ನಿಮ್ಮ ಮಾತಿಗೆ ಗೌರವ ಹೆಚ್ಚುವ ದಿನ. ಆರೋಗ್ಯದಲ್ಲಿ ಕ್ಷುಲ್ಲಕ ತೊಂದರೆ ಸಾಂದರ್ಭಿಕವಾಗಲಿದೆ. ನಿಮ್ಮ ವಿರುದ್ಧದ ಸಂಚು ಇಂದು ಬಯಲಾಗಬಹುದು. ಪರರ ಭಾಗ್ಯವನ್ನು ನೆನೆದು ಕೊರಗುವುದಕ್ಕಿಂತ ನಿಮ್ಮ ಇರುವ ಭಾಗ್ಯವನ್ನು ನೆನೆದು ಸಂತೋಷಪಡಿ. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ನಿಮ್ಮ ರಾಜಕೀಯ ಅಸ್ತ್ರವನ್ನು ವಿರೋಧಿಗಳ ಮೇಲೆ ಪ್ರಹಾರ ಮಾಡಬಹುದು. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಕಾರ್ಯಕ್ಷೇತ್ರದಲ್ಲಿ ಹೊಸ ನಿರ್ಧಾರಗಳು ಫಲಪ್ರದವಾಗುತ್ತವೆ. ಮನೆಮಂದಿಯ ಆಶೀರ್ವಾದ ದೊರೆಯುತ್ತದೆ. ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಸಹೋದರರಿಂದ ನಿಮಗೆ ಧನಸಹಾಯವು ಸಿಗಲಿದೆ. ನಿಮ್ಮ ಅಲ್ಪ ಮಾತಿನಿಂದ ಎಲ್ಲರಿಗೂ ಸಂತೋಷವಾಗಲಿದೆ. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ.
Views: 26