ಚಿತ್ರದುರ್ಗ ಡಿ. 06
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭಾರತೀಯ ಜನತಾ ಪಾರ್ಟಿಯ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಎಂಬ ಮಂತ್ರ ಅಂಬೇಡ್ಕರ್‍ರ ಸಮಾನತೆ, ಶಿಕ್ಷಣ, ನ್ಯಾಯ ಮತ್ತು ಸ್ವಾಭಿಮಾನ ಎಂಬ ಮೂಲ ಮೌಲ್ಯಗಳ ಮೇಲೆಯೇ ನಿಂತಿದೆ ಎಂದು ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ತಿಳಿಸಿದರು.

ಚಿತ್ರದುರ್ಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಅಂಬೇಡ್ಕರ್ ರವರ 69ನೇ ಪರಿನಿಬ್ಬಾಣ ದಿನಾಚರಣೆಯ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಇಂದು ನಾವು ಮಹಾಮನೋಭಾವ ಡಾ. ಬಾಬಾಸಾಹೇಬ ಅಂಬೇಡ್ಕರ್ರವರ ಪರಿನಿಬ್ಬಣ್ಣ ದಿನದ ನಮನ ಸಲ್ಲಿಸಲು ಇಲ್ಲಿ ಸೇರಿದ್ದೇವೆ. ಕೇವಲ ಸಂವಿಧಾನದ ರಚನೆ ಮಾಡಿದವರಲ್ಲ ಅವರು ಶೋಷಣೆಗೊಳಗಾದ ಪ್ರತಿಯೊಬ್ಬರ ಮನದ ಜ್ಯೋತಿ, ಸ್ವಾಭಿಮಾನಕ್ಕೆ ದಾರಿ ತೋರಿದ ದೀಪಸ್ತಂಭ. ಮೋದಿ ಸರ್ಕಾರದ `ಅಂಬೇಡ್ಕರ್ ಪಂಚತೀರ್ಥ ಐತಿಹಾಸಿಕ ಗೌರವ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂಬೇಡ್ಕರ್‍ರ ಜೀವನದ ಐದು ಪ್ರಮುಖ ತಾಣಗಳು ಅರಾಧನೆಯ, ಅಧ್ಯಯನದ, ಪ್ರೇರಣೆಯ ಸ್ಥಳಗಳಾಗಿ ಪರಿವರ್ತಿಸಲ್ಪಟ್ಟಿವೆ. ಡಾ. ಅಂಬೇಡ್ಕರ್‍ರ ಬಾಲ್ಯ ಬಡತನ, ಹೋರಾಟ, ಕಷ್ಟಪಟ್ಟ ದಿನಗಳನ್ನು ಮೋದಿ ಸರ್ಕಾರ ಪಿತೃಭೂಮಿ ತೀರ್ಥದಲ್ಲಿ ಸ್ಮಾರಕ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಅವರ ಶಕ್ತಿಯ ಮೂಲವನ್ನೇ ರಾಷ್ಟ್ರಕ್ಕೆ ಪರಿಚಯಿಸಿದೆ ಎಂದರು.
ಶಿಕ್ಷಣ ತೀರ್ಥದಡಿಯಲ್ಲಿ ಲಂಡನ್‍ನಲ್ಲಿ ಅಂಬೇಡ್ಕರ್ ಅಧ್ಯಯನ ಮಾಡಿ ಜಗತ್ತಿನ ಮಹಾನ್ ಚಿಂತಕರಾಗಿ ಬೆಳೆದರು. ಅವರ ವಾಸಸ್ಥಾನವನ್ನು ಭಾರತ ಸರ್ಕಾರ ಖರೀದಿ ಮಾಡಿ, ಅದನ್ನು ಸಂಶೋಧನಾ ಕೇಂದ್ರ ಹಾಗೂ ಸ್ಮಾರಕವಾಗಿ ರೂಪಿಸಿದೆ. ಜ್ಞಾನಕ್ಕಿದ್ದ ಅಂಬೇಡ್ಕರ್‍ರ ಬದ್ಧತೆಯು ಇಂದಿಗೆ ಜಗತ್ತಿಗೇ ಗೋಚರವಾಗುತ್ತದೆ. ದೀಕ್ಷಾ ಭೂಮಿ ತೀರ್ಥಯಲ್ಲಿ ಅಂಬೇಡ್ಕರ್‍ರ ಆತ್ಮಸಂಸ್ಕಾರದ ಮಹಾನ್ ತೀರ್ಥ.ಇಲ್ಲಿ ಅಪಾರ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗಿದೆ, ಜಗತ್ತಿನ ಬಿಜೆಪಿ ಇಲ್ಲದರೂ ಭಾರತದ ಸಂವಿಧಾನದ ಆತ್ಮ ಎನ್ನುವ ಪರಿವರ್ತನೆಯನ್ನು ಇಲ್ಲಿ ಅನುಭವಿಸಬಹುದಾಗಿದೆ ಸಂವಿಧಾನ ಭವನ ಅಂಬೇಡ್ಕರ್ ಭಾರತೀಯ ಸಂವಿಧಾನಕ್ಕೆ ಜೀವ ತುಂಬಿದ ಸ್ಥಳ. ಇದನ್ನು ಮುಖ್ಯ ಸ್ಮಾರಕವಾಗಿ ಪರಿವರ್ತಿಸಿ, ಸಂವಿಧಾನದ ಮೌಲ್ಯಗಳನ್ನು ಅಧ್ಯಯನ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಭೇಟಿ ನೀಡುವ ಶಿಕ್ಷಣ ತೀರ್ಥವಾಗಿ ರೂಪಿಸಲಾಗಿದೆ.ಚೈತ್ಯಭೂಮಿ ಅಂಬೇಡ್ಕರ್‍ರ ದೇಹಾಂತದ ಸ್ಥಳ. ಇಲ್ಲಿ ವಿಶಾಲ ಸ್ಮಾರಕ, ಸಾರ್ವಜನಿಕ ಸೌಲಭ್ಯ, ಗ್ರಂಥಾಲಯ, ಸಾಂಸ್ಕೃತಿಕ ಕೇಂದ್ರ ಒಟ್ಟಾಗಿ ನವೀಕರಿಸಿ ಸಮಾಜ ನ್ಯಾಯದ ತೀರ್ಥಸ್ಥಾನ ರಚಿಸಲಾಗಿದೆ ಎಂದು ತಿಳಿಸಿದರು.
ಪಂಚ ತೀರ್ಥ ಅಂಬೇಡ್ಕರ್‍ರಿಗೆ ಕಂಡ ಅತ್ಯಂತ ದೊಡ್ಡ ಗೌರವ ಈ ಐದು ತೀರ್ಥಗಳು ಮೋದಿ ಸರ್ಕಾರದ ಕೊಡುಗೆ ಆಪಾರವಾಗಿದೆ ಅವು ಕೇವಲ ಕಟ್ಟಡಗಳಲ್ಲ,ಅಂಬೇಡ್ಕರ್‍ರ ಆತ್ಮಸಾಕ್ಷಿಯ ಸ್ಮಾರಕಗಳು. ಅಂಬೇಡ್ಕರ್ ಒಂದು ಜಾತಿಯವರಲ್ಲ ಅವರು ಭಾರತದವರಾಗಿದ್ದಾರೆ. ಶಿಕ್ಷಣ ಮಾತ್ರವೇ ಶಸ್ತ್ರ, ಸಮಾನತೆ ಮಾತ್ರವೇ ಗುರಿ, ಸಂವಿಧಾನ ಮಾತ್ರವೇ ನಮ್ಮ ಬಲ. ಅವರ ತತ್ವ ಬಿಜೆಪಿಯ ರಾಷ್ಟ್ರನಿರ್ಮಾಣದ ನೀತಿಯಲ್ಲಿ ತೆರೆದ ಪುಸ್ತಕದಂತೆ ಕಾಣುತ್ತದೆ. ಸಮಾನತೆ ಮತ್ತು ನ್ಯಾಯಕ್ಕೆ ಬದ್ಧರಾಗೋಣ ಶಿಕ್ಷಣ ಮತ್ತು ಜ್ಞಾನವನ್ನು ಎಲ್ಲರಿಗೂ ತಲುಪಿಸೋಣಸಮಾಜದ ದುರ್ಬಲರನ್ನು ಕೈ ಹಿಡಿಯೋಣಸಂವಿಧಾನದ ಮೌಲ್ಯಗಳಿಗೆ ಶತಶಃ ನಿಷ್ಠೆಯಿಂದ ಬದುಕೋ ಅಂಬೇಡ್ಕರ್‍ರ ಕನಸಿನ ಸಮಾನತೆಯ ಭಾರತ ನಿರ್ಮಿಸೋಣ ಜ್ಞಾನವೇ ಮಾನವನ ನಿಜವಾದ ರಕ್ಷಣೆ. ಎಲ್ಲವನ್ನೂ ನಮ್ಮ ಜೀವನದ ಗುರಿಯಾಗಿ ಮಾಡಿಕೊಂಡಾಗಲೇ ಅವರ ಪರಿನಿಬ್ಬಣ್ಣ ದಿನಕ್ಕೆ ನಿಜವಾದ ಗೌರವ ಸಲ್ಲಿಸಿದ್ದಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ವಹಿಸಿದ್ದರು, ಈ ಸಂದರ್ಭದಲ್ಲಿ ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ತರಿಕೇರೆ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕಮಾರ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೇ, ಎಸ್. ಸಿ. ಪ್ರಧಾನ ಕಾರ್ಯದರ್ಶಿ ಪಾಂಡು ಯುವ ಮೋರ್ಚಾದ ವಸಂತ, ಛಲವಾದಿ ತಿಪ್ಪೇಸ್ವಾಮಿ, ಮಹಾಂತೇಶ್, ವಿರೇಶ್ ಸುಮಾ ಶಂಭು, ಕಿರಣ ನಾಗರಾಜ್ ಚೇತನಕುಮಾರ್ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಡಾ,ಬಿ,ಆರ್,ಅಂಬೇಡ್ಕರ್‍ರವರ ಪ್ರತಿಮೆಗೆ ಮಾಲಾರ್ಪಣೆಯನ್ನು ಬಿಜೆಪಿವತಿಯಿಂದ ಹಾಕಲಾಯಿತು.