ಭಾರತೀಯ ರಿಸರ್ವ್ ಬ್ಯಾಂಕ್ 2026ರ ಬೇಸಿಗೆ ಇಂಟರ್ನ್ಶಿಪ್ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ದೇಶದ ಕೇಂದ್ರ ಬ್ಯಾಂಕ್ನಲ್ಲಿ ಕೆಲಸ ಮಾಡುವ ಅನುಭವ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಇದು ಅಪೂರ್ವ ಅವಕಾಶ. ಈ ಇಂಟರ್ನ์ಶಿಪ್ ವಿದ್ಯಾರ್ಥಿಗಳಿಗೆ ಸಂಶೋಧನೆ, ಡೇಟಾ ವಿಶ್ಲೇಷಣೆ, ಬ್ಯಾಂಕಿಂಗ್ ಮತ್ತು ಆರ್ಥಿಕ ನೀತಿಗಳ ಬಗ್ಗೆ ನೇರವಾಗಿ ಕಲಿಯುವ ಅವಕಾಶವನ್ನು ನೀಡುತ್ತದೆ. ಇಂಟರ್ನ್ಶಿಪ್ ಅವಧಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮಾಸಿಕ ₹20,000 ಸ್ಟೈಫಂಡ್ ಪಡೆಯಲಿದ್ದಾರೆ. ಆಸಕ್ತರು ಡಿಸೆಂಬರ್ 15ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಹತೆ ಮತ್ತು ಸ್ಟೈಫಂಡ್ ವಿವರ
ರಿಸರ್ವ್ ಬ್ಯಾಂಕ್ ಈ ಇಂಟರ್ನ್ಶಿಪ್ಗಾಗಿ ಒಟ್ಟು 125 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹20,000 ಸ್ಟೈಫಂಡ್ ನೀಡಲಾಗುತ್ತದೆ. ಇಂಟರ್ನ್ಶಿಪ್ 2026ರ ಏಪ್ರಿಲ್ನಲ್ಲಿ ಪ್ರಾರಂಭವಾಗಲಿದೆ.
ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಾನೂನು, ವಾಣಿಜ್ಯ, ಅರ್ಥಶಾಸ್ತ್ರ, ಇಕನಾಮೆಟ್ರಿಕ್ಸ್, ಬ್ಯಾಂಕಿಂಗ್ ಮತ್ತು ಹಣಕಾಸು ವಿಭಾಗದ ಐದು ವರ್ಷಗಳ ಸಂಯೋಜಿತ ಕೋರ್ಸ್ಗಳನ್ನು ಓದುತ್ತಿರುವವರು ಅರ್ಹರಾಗಿದ್ದಾರೆ. ಕಾನೂನಿನ ಮೂರು ವರ್ಷಗಳ ಪದವಿ ವಿದ್ಯಾರ್ಥಿಗಳಿಗೂ ಅವಕಾಶವಿದೆ.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಅರ್ಜಿದಾರರನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ನಂತರ ಸಂದರ್ಶನದ ಆಧಾರದಲ್ಲಿ ಅಂತಿಮ ಆಯ್ಕೆ ಮಾಡಲಾಗುತ್ತದೆ. ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಬಯಸುವವರಿಗೆ ಇದು ಉತ್ತಮ ವೇದಿಕೆ.
ಆರ್ಬಿಐ ಇಂಟರ್ನ್ಶಿಪ್ಗೆ ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು RBI ನ ಅಧಿಕೃತ ವೆಬ್ಸೈಟ್ opportunities.rbi.org.in ಭೇಟಿ ನೀಡಬೇಕು. ಪ್ರಸ್ತುತ ಖಾಲಿ ಹುದ್ದೆಗಳ ವಿಭಾಗದಲ್ಲಿ ಸಮ್ಮರ್ ಪ್ಲೇಸ್ಮೆಂಟ್ ವಿಭಾಗವನ್ನು ಆಯ್ಕೆ ಮಾಡಿದ ಬಳಿಕ ಆನ್ಲೈನ್ ಅರ್ಜಿ ನಮೂನೆಯ ಲಿಂಕ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬಹುದು.
ಅರ್ಜಿಯಲ್ಲಿ ಸಂಸ್ಥೆಯ ಹೆಸರು, ವಿಳಾಸ, ಫೋನ್ ಸಂಖ್ಯೆ, ಇಮೇಲ್ ಸೇರಿದಂತೆ ವೈಯಕ್ತಿಕ ವಿವರಗಳು ಹಾಗೂ 10ನೇ, 12ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಹತೆಗಳ ಮಾಹಿತಿಯನ್ನು ನಮೂದಿಸಬೇಕು. ಅಭ್ಯರ್ಥಿಗಳು ನಿಗದಿತ ಗಾತ್ರದ ಛಾಯಾಚಿತ್ರ, ಸಹಿ ಮತ್ತು ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡಬೇಕು. ಸರಿಯಾದ ಮಾಹಿತಿಯನ್ನು ದಾಖಲಿಸಿದ ನಂತರ ಫಾರ್ಮ್ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ RBI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
Views: 50