ಅಂಡರ್-19 ಏಷ್ಯಾ ಕಪ್: ವೈಭವ್ ಸೂರ್ಯವಂಶಿಯ ಸ್ಪೋಟಕ 171; 433 ರನ್ ಮೊತ್ತ

ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾ ಕಪ್‌ನಲ್ಲಿ ಭಾರತ ತಂಡ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ 433 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಕೇವಲ 14 ವರ್ಷದ ವೈಭವ್ ಸೂರ್ಯವಂಶಿಯ 171 ರನ್‌ಗಳ ಗರ್ಜನೆ, ಆರೋನ್ ಜಾರ್ಜ್ ಮತ್ತು ವಿಹಾನ್ ಮಲ್ಹೋತ್ರಾ ಅವರ ಅರ್ಧಶತಕಗಳು ತಂಡದ ಮೊತ್ತ ನಾನೂರರ ಗಡಿ ದಾಟುವಂತೆ ಮಾಡಿತು.

ಸೂರ್ಯವಂಶಿಯ ದಿಟ್ಟ ಶತಕ – ದ್ವಿಶತಕ ಮಿಸ್!

ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ವೈಭವ್ ಸೂರ್ಯವಂಶಿ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಹಾಗೂ 56 ಎಸೆತಗಳಲ್ಲಿ ಶತಕ ಸಿಡಿಸಿದರು. 95 ಎಸೆತಗಳಲ್ಲಿ 9 ಫೋರ್ ಮತ್ತು 14 ಸಿಕ್ಸರ್‌ಗಳ ಸಹಾಯದಿಂದ 171 ರನ್‌ಗಳನ್ನು ಸಿಡಿಸಿ ಔಟಾದ ಸೂರ್ಯವಂಶಿ ದ್ವಿಶತಕದತ್ತ ಹೆಜ್ಜೆ ಹಾಕಿದ್ದರೂ ಅಲ್ಪ ಅಂತರಕ್ಕೆ ಮಿಸ್ ಮಾಡಿದರು.

ತಂಡಕ್ಕೆ ಆಸರೆ – ಆರೋನ್ ಜಾರ್ಜ್ ಹಾಗೂ ಮಲ್ಹೋತ್ರಾ

ಆಯುಷ್ ಮಾತ್ರೆ ಶೀಘ್ರದಲ್ಲಿ ಔಟಾದ ಬಳಿಕ, ವೈಭವ್ ಮತ್ತು ಆರೋನ್ ಜಾರ್ಜ್ ಎರಡನೇ ವಿಕೆಟ್‌ಗೆ 212 ರನ್‌ಗಳ ಅಮೂಲ್ಯ ಜೊತೆಯಾಟ ಹೊರಿಸಿದರು. ಆರೋನ್ ಜಾರ್ಜ್ 69 ರನ್‌ಗಳ ಹೊನಲು ಪ್ರದರ್ಶನ ನೀಡಿದರು. ನಂತರ ವಿಹಾನ್ ಮಲ್ಹೋತ್ರಾ 69 ರನ್ ಸಿಡಿಸಿ ತಂಡಕ್ಕೆ ಬಲ ತುಂಬಿದರು.

ಇತರರ ಸಹಕಾರ

ವೇದಾಂತ್ ತ್ರಿವೇದಿ (38), ಅಭಿಜ್ಞಾನ್ ಕುಂದು (ಅಜೇಯ 32) ಹಾಗೂ ಕನಿಶ್ಕ್ ಚೌಹಾಣ್ (28) ಅಮೂಲ್ಯ ರನ್‌ಗಳನ್ನು ಸಿಡಿಸಿ ಭಾರತದ ಮೊತ್ತವನ್ನು 433ಕ್ಕೆ ತಲುಪಿಸಿದರು. 50 ಓವರ್‌ಗಳಲ್ಲಿ ಕೇವಲ 6 ವಿಕೆಟ್ ಕಳೆದುಕೊಂಡು ಭಾರತ ತಂಡ ಯುಎಇಗೆ ಕಠಿಣ ಗುರಿ ನೀಡಿದೆ.

ಸತತ ಫಾರ್ಮ್‌ನಲ್ಲಿರುವ ವೈಭವ್

ಡಿಸೆಂಬರ್ 2ರಂದು ಮಹಾರಾಷ್ಟ್ರ ವಿರುದ್ಧ ಬಿಹಾರ ಪರ ಅಜೇಯ 108 ಸಿಡಿಸಿದ್ದ ವೈಭವ್, ಕೇವಲ 10 ದಿನಗಳಲ್ಲೇ ಮತ್ತೊಂದು ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Views: 58

Leave a Reply

Your email address will not be published. Required fields are marked *