ರಾಜ ವೀರ ಮದಕರಿ ನಾಯಕ ಕಪ್–2025: ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಡಿ.16:
ದುರ್ಗಾ ಇಲೆವೆನ್ ಕ್ರಿಕೇಟರ್ಸ್ ವತಿಯಿಂದ ನಾಲ್ಕನೇ ಬಾರಿಗೆ ಆಯೋಜಿಸಲಾಗುತ್ತಿರುವ ರಾಜ ವೀರ ಮದಕರಿ ನಾಯಕ ಕಪ್–2025 ಲೀಗ್ ಕಮ್ ನಾಕೌಟ್ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 17ರಿಂದ 21ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.

ಇದು ರಾಜ್ಯಮಟ್ಟದ ಟೆನ್ನಿಸ್ ಬಾಲ್ ಡೇ–ನೈಟ್ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು, ಕರ್ನಾಟಕದ ವಿವಿಧ ಭಾಗಗಳಿಂದ ಒಟ್ಟು 43 ತಂಡಗಳು ಭಾಗವಹಿಸಲಿವೆ. ಐದು ದಿನಗಳ ಅವಧಿಯಲ್ಲಿ 115 ಪಂದ್ಯಗಳು ನಡೆಯಲಿವೆ. ಹೊರ ಜಿಲ್ಲೆಗಳಿಂದ 17 ತಂಡಗಳು ಹಾಗೂ ಚಿತ್ರದುರ್ಗ ಜಿಲ್ಲೆಯಿಂದ 26 ತಂಡಗಳು ಸ್ಪರ್ಧಿಸಲಿವೆ.

ಮಂಗಳವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾರ್ಯಕ್ರಮ ಸಂಯೋಜಕ ಸಿ.ಬಿ. ನಾಗರಾಜ್, ಈ ಟೂರ್ನಮೆಂಟ್ ಸ್ನೇಹಜೀವಿ ಬಳಗದ ಸಹಕಾರದೊಂದಿಗೆ ನಾಲ್ಕನೇ ಬಾರಿ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ ಎಂದರು. ವಿಜೇತ ತಂಡಕ್ಕೆ ₹2,00,001, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹1,00,001, ತೃತೀಯ ಸ್ಥಾನಕ್ಕೆ ₹50,001 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಇದಲ್ಲದೆ, ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್‌ಗೆ ವಿಶೇಷ ಟ್ರೋಫಿ ನೀಡಲಾಗುವುದು. ಸರಣಿ ಶ್ರೇಷ್ಠ ಆಟಗಾರರಿಗೆ ಎಲ್‌ಇಡಿ ಟಿವಿ ಬಹುಮಾನವಾಗಿ ನೀಡಲಾಗುತ್ತದೆ. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.

ಪಂದ್ಯಾವಳಿಗೆ ಡಿ.17ರಂದು ಬೆಳಿಗ್ಗೆ 8 ಗಂಟೆಗೆ ಡಾ. ಬಸವಕುಮಾರ್ ಶ್ರೀಗಳು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗೋಪಾಲಸ್ವಾಮಿ ನಾಯಕ್, ರಾಜೀವ, ನಾಗರಾಜ್, ಹನೀಫ್, ರಾಮು, ಅರ್ಜುನ್, ಕೃಪಾಕರ, ಲಕ್ಷ್ಮೀಕಾಂತ, ಬಾಬು ಹಾಗೂ ಎನ್.ಕೆ. ಗಾಂಧಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *