ಹಿರೇಗುಂಟನೂರು: ಡಿ.18.
ಇದೇ ಡಿಸೆಂಬರ್ ಬರುವ ದಿನಾಂಕ 21ರ ಭಾನುವಾರದ ಆಚರಿಸಲಾಗುವ ಅಂತರಾಷ್ಟ್ರೀಯ ಧ್ಯಾನ ದಿನಾಚರಣೆ ಅಂಗವಾಗಿ ಗುರುವಾರ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ ವತಿಯಿಂದ ಗ್ರಾಮದ ಶ್ರೀ ದ್ಯಾಮಲಾಂಬಿಕ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಧ್ಯಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಯಾವುದೇ ವಸ್ತುಗಳನ್ನು ಬಳಸದೆ ಕೇವಲ ಪ್ರಕೃತಿಯೊಂದಿಗೆ ಯೋಗ ಧ್ಯಾನ ಮಾಡುವ ವಿಧಾನ ಮತ್ತು ಅದರ ಲಾಭವನ್ನು ತಿಳಿಸಿಕೊಡಲಾಯಿತು ಯೋಗ ತರಬೇತುದಾರ ರವಿ ಕೆ. ಅಂಬೇಕರ್ ತರಬೇತಿ ನೀಡಿದರು.
ಶಿಬಿರದಲ್ಲಿ ಮಕ್ಕಳೊಂದಿಗೆ ಶಾಲಾ ಶಿಕ್ಷಕರಾದ ಮಿನಾಜ್, ನವೀನ್, ವಿಜಯ್, ಪ್ರೇಮ ಶ್ರೀನಿವಾಸ್, ಅರ್ಚನ, ರೇಷ್ಮ ಇನ್ನಿತರರು ಪಾಲ್ಗೊಂಡಿದ್ದರು.
Views: 85