General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.
- CRISPR-Cas9 ತಂತ್ರಜ್ಞಾನವನ್ನು ಯಾವ ಕ್ಷೇತ್ರದಲ್ಲಿ ಬಳಸಲಾಗುತ್ತದೆ?
ಉತ್ತರ: ಜನನ ತಿದ್ದುಪಡಿ (Gene Editing)
2. 5G ತಂತ್ರಜ್ಞಾನದಲ್ಲಿ “Latency” ಎಂದರೆ ಏನು?
ಉತ್ತರ: ಡೇಟಾ ಸಾಗಲು ತೆಗೆದುಕೊಳ್ಳುವ ಸಮಯ
3. ಭಾರತದ ಮೊದಲ ಸೌರ ಮಿಷನ್ ಆದಿತ್ಯ-L1 ಯನ್ನು ಯಾವ ಉದ್ದೇಶಕ್ಕಾಗಿ ಉಡಾವಣೆ ಮಾಡಲಾಗಿದೆ?
ಉತ್ತರ: ಸೂರ್ಯನ ಅಧ್ಯಯನಕ್ಕಾಗಿ
4. ಕರ್ನಾಟಕದಲ್ಲಿ ಅತಿ ಉದ್ದದ ಕರಾವಳಿ ಹೊಂದಿರುವ ಜಿಲ್ಲೆ ಯಾವುದು?
ಉತ್ತರ: ಉತ್ತರ ಕನ್ನಡ
5. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಎಷ್ಟು?
ಉತ್ತರ: 65 ವರ್ಷ
6. ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
ಉತ್ತರ: ಕೆಂಗಲ್ ಹನುಮಂತಯ್ಯ
7. ಕರ್ನಾಟಕದಲ್ಲಿ ಅತಿ ದೊಡ್ಡ ಜಿಲ್ಲೆ (ವಿಸ್ತೀರ್ಣದಲ್ಲಿ) ಯಾವುದು?
ಉತ್ತರ: ಬೆಳಗಾವಿ
8. ನ್ಯಾನೋ ತಂತ್ರಜ್ಞಾನದಲ್ಲಿ ನ್ಯಾನೋ ಮೀಟರ್ ಎಂದರೆ ಎಷ್ಟು ಮೀಟರ್?
ಉತ್ತರ: 10⁻⁹ ಮೀಟರ್
9. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗಾಗಿ ಮೀಸಲಾತಿ ಸಂಬಂಧಿಸಿದ ವಿಧಿಗಳು ಯಾವ ಭಾಗದಲ್ಲಿವೆ?
ಉತ್ತರ: ಭಾಗ IX ಮತ್ತು IX-A
10. ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಬಹುದು ಎಂದು ತೀರ್ಪು ನೀಡಿದ ಪ್ರಕರಣ ಯಾವುದು?
ಉತ್ತರ: ಕೆಶವಾನಂದ ಭಾರತಿ ಪ್ರಕರಣ (1973)
Views: 17