ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 30
ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಖಂಡಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಡ್ರಗ್ಸ್ ಮಾಫೀಯಾ ನಿಯಂತ್ರಣದಲ್ಲಿ ಇಡಲು ರಾಜ್ಯ ಸರ್ಕಾರ ವಿಫಲವಾಗಿದೆ, ಮಹಾರಾಷ್ಟ್ರ ಪೋಲಿಸರು ಬೆಂಗಳೂರಿನಲ್ಲಿ 3 ಕಡೆಗಳಲ್ಲಿ ಡ್ರಗ್ಸ್ ಫ್ಯಾಕ್ಟರಿ ಮೇಲೆ ಧಾಳಿ ನಡೆಸಿ 50 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಬಳಕೆ ಕರ್ನಾಟಕದಲ್ಲಿ ಅತಿ ಹೆಚ್ಚಿದೆ ಅದನ್ನು ನಿಯಂಸಿಲು ಸರ್ಕಾರ ವಿಶೇಷವಾದ ತಂಡವನ್ನು ಮಾಡಬೇಕಿದೆ. ರಾಜ್ಯದಲ್ಲಿ ರಾಜಾರೋಷವಾಗಿ ಡ್ರಗ್ಸ್ ಮಾಫೀಯಾ ನಡೆಯುತ್ತಿದೆ. ಡ್ರಗ್ಸ್ ಟ್ರಾಫಿಕಿಂಗ್ ಮಾಡುವವರಿಗೆ ಕಠಿಣವಾದ ಕಾನೂನು ತರಬೇಕಿದೆ. ರಾಜ್ಯ ಸರ್ಕಾರ ದ್ವೇಷದ ಭಾಷಣ ಮಾಡುವುದರ ವಿರುದ್ದ ಕಾನೂನು ತರುವ ಬದಲು ರೈತರ ಗೊಬ್ಬರ ಕಳ್ಳತನ ಮಾಡುವವರಿಗೆ ಡ್ರಗ್ಸ್ ಮಾರುವವರಿಗೆ ಬಿಗಿಯಾದ ಕಾನೂನು ತರಬೇಕಿದೆ. ರಾಜ್ಯ ಸಂಪೂರ್ಣ ಕಾನೂನು ಸುವ್ಯವಸ್ಥೆ ಅಲ್ಲದೆ ಅನೈತಿಕ ಚಟುವಟಿಕೆಯಿಂದ ಕೂಡಿದ ರಾಜ್ಯವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಚ್ಚಾಟದಲ್ಲಿ ಮುಳುಗಿದೆ, ಹೀಗಾಗಿ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮುಕ್ತವಾಗಿದೆ. ಇದು ಡ್ರಗ್ಸ್ ಮಾಫಿಯಾ ನಿಯಂತ್ರಣದಲ್ಲಿರುವ ಸರ್ಕಾರವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಪತ್ತೇ ಹಚ್ಚಲು ಡ್ರಗ್ಸ್ ದಂಧೆಕೊರರನ್ನು ಹಾಕಲು ಮಹಾರಾಷ್ಟ್ರ ಪೋಲಿಸರು ಬರಬೇಕಾಗಿದೆ. ಕರ್ನಾಟಕ ಪೋಲಿಸ್ ಇಲಾಖೆ ಏನು ಮಾಡುತ್ತಿದೆ. ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕಾಂಗ್ರೆಸ್ ಸರ್ಕಾರಕ್ಕೆ ಟೀಕಾ ಪ್ರಹಾರ ಮಾಡಿದ್ದಾರೆ. ಯುವ ಜನಾಂಗದ ಭವಿಷ್ಯಕ್ಕೆ ಮಾರಕವಾಗಿರುವ ಈ ಡ್ರಗ್ಸ್ ದಂಧೆಯನ್ನು ಅತ್ಯಂತ ಗಂಬೀರವಾಗಿ ಪರಿಗಣಿಸಿ ಮಾಫಿಯಾದಲ್ಲಿ ಇರುವಂತರನ್ನು ಕಾನೂನಿನ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗ್ಗೊಳ್ಳಬೇಕು ಎಂದಿದ್ದಾರೆ.
Views: 30