ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ವಿದ್ಯಾರ್ಥಿಗಳು ನಮ್ಮ ಸುತ್ತ ಮುತ್ತ ಇರುವ ಪ್ರಕೃತಿಯನ್ನು ಕುತೂಹಲದಿಂದ ನೋಡಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಮನಸ್ಸು ವಿಕಾಸವವಾಗಲು ಸಾಧ್ಯ” ಎಚ್ಎಸ್ ಟಿ ಸ್ವಾಮಿ
ಭೀಮಸಮುದ್ರ: ಗ್ರಾಮದ ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಘದ ಸಮಾರೋಪ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿಗಳಾದ ಹೆಚ್‌ಎಸ್‌ಟಿ ಸ್ವಾಮಿ ಮಾತನಾಡಿ ಮಕ್ಕಳು ಪಠ್ಯದಿಂದಲೆ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ.ಇದು ಸ್ಪರ್ಧಾತ್ಮಕ ಯುಗ, ವಿದ್ಯಾರ್ಥಿಗಳು ಎಲ್ಲಾ ರೀತಿಯ ಜ್ಞಾನ ಹೊಂದಲು ಶಿಕ್ಷಕರು ಮಕ್ಕಳ ಮೇಲೆ ಪ್ರಭಾವ ಬೀರಬೇಕು. ಈ ರೀತಿ ಉತ್ತಮ ಪ್ರಭಾವ ಬೀರಿದಾಗ ಮಾತ್ರ ಅವರು ಭವಿಷ್ಯದಲ್ಲಿ ಬೆಳೆಯಲು ಸಾಧ್ಯ. ಇಂದಿನ ವಿಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬಾರದು. ಮಕ್ಕಳು ಮತ್ತು ಶಿಕ್ಷಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಗುರುಗಳಿಗೆ ತಂದೆ ತಾಯಿಗಳಿಗೆ ಶಾಲೆಗೆ ಕೀರ್ತಿ ತನ್ನಿಎಂದು ಹಾರೈಸಿದರು.
ಶಾಲೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಬಿ.ಕೆ.ಕಲ್ಲಪ್ಪ ಮಾತನಾಡಿ, ಶಾಲೆಯ ಅಭಿವೃದ್ಧಿಗಾಗಿ ಸಲಹಾ ಸಮಿತಿ ಹಾಗೂ ಆಡಳಿತ ಮಂಡಳಿ ತುಂಬಾ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿಯಾದ ಎಲ್ ಕೆ ಸುಮಾ ಮಾತನಾಡಿ ಶಾಲಾ ಸ್ಥಳೀಯ ಸಲಹಾ ಸಮಿತಿಯ ನಮ್ಮ ಶಾಲೆಯ ವಿದ್ಯಾರ್ಥಿಗಳು ಕ್ರೀಡೆ, ವಿಜ್ಞಾನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದೀರಿ ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿರಿ ನಮ್ಮ ಎಲ್ಲಾ ಸಲಹಾ ಸಮಿತಿ ಸದಸ್ಯರುಗಳು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು ವಿದ್ಯಾರ್ಥಿಗಳಾದ ನಂದಿನಿ ಜೆ, ಹೇಮಾವತಿ ಎಸ್ ಲಾವಣ್ಯ ಎಂ ರೇಣುಕಾ ಆರ್ ಎನ್ ತೇಜಸ್ವಿನಿ ರಂಜಿತಾ ದಿವ್ಯ ಹೆಚ್ ಈ ಕಾರ್ಯಕ್ರಮದಲ್ಲಿ ಶಾಲಾ ಸ್ಥಳೀಯ ಸಲಹಾಸಮಿತಿ ಅಧ್ಯಕ್ಷರು ಬಿಟಿ ಪುಟ್ಟಪ್ಪ ಉಪಾಧ್ಯಕ್ಷರು ಎ ಎಂ ಧನ್ಯ ಕುಮಾರ್ ಸಲಹಾ ಸಮಿತಿ ಸದಸ್ಯರುಗಳಾದ ಬಿ ಕೆ ಕಲ್ಲಪ್ಪ ಟಿ ಮಹೇಶ್ವರಪ್ಪ ಎನ್ ದೇವ್ ಕುಮಾರ್ ಕೆಂಚ ವೀರಪ್ಪ ಶಿಕ್ಷಕರುಗಳಾದ ಕೋಮಲದೇವಿ ಜಿಎಂ ಮಮತಾ ಪ್ರದೀಪ್ ಹಾಗೂ ಮಕ್ಕಳು ಪೋಷಕರು ಇದ್ದರು.
Views: 169