ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ 312 ವಿಶೇಷ/ಪ್ರತ್ಯೇಕಿತ ವರ್ಗದ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಮುಖ್ಯ ಕಾನೂನು ಸಹಾಯಕ, ಸಾರ್ವಜನಿಕ ಅಭಿಯೋಜಕ, ಜೂನಿಯರ್ ಅನುವಾದಕ, ಪ್ರಯೋಗಾಲಯ ಸಹಾಯಕ, ವೈಜ್ಞಾನಿಕ ಸಹಾಯಕ ಸೇರಿದಂತೆ ಹಲವು ಹುದ್ದೆಗಳು ಇದರಲ್ಲಿ ಸೇರಿವೆ. ಅರ್ಹ ಅಭ್ಯರ್ಥಿಗಳು ಜನವರಿ 29, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
- ಮುಖ್ಯ ಕಾನೂನು ಸಹಾಯಕ – 22
- ಸಾರ್ವಜನಿಕ ಅಭಿಯೋಜಕ – 07
- ಜೂನಿಯರ್ ಟ್ರಾನ್ಸ್‌ಲೇಟರ್ – 202
- ಹಿರಿಯ ಪ್ರಚಾರ ನಿರೀಕ್ಷಕ – 15
- ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ – 24
- ವೈಜ್ಞಾನಿಕ ಸಹಾಯಕ/ತರಬೇತಿ – 02
- ಪ್ರಯೋಗಾಲಯ ಸಹಾಯಕ ಗ್ರೇಡ್–3 – 39
- ವೈಜ್ಞಾನಿಕ ಮೇಲ್ವಿಚಾರಕ/ಎರ್ಗೋನಾಮಿಕ್ಸ್ & ತರಬೇತಿ – 01
ಒಟ್ಟು ಹುದ್ದೆಗಳು: 312
ಕೆಲಸದ ಸ್ಥಳ
ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಭೋಪಾಲ್, ಭುವನೇಶ್ವರ, ಪಾಟ್ನಾ, ಗುವಾಹಟಿ ಸೇರಿದಂತೆ ದೇಶದ ವಿವಿಧ RRB ವಲಯಗಳು.
ವಿದ್ಯಾರ್ಹತೆ
- ಇಂಟರ್ಮೀಡಿಯೇಟ್ / ಪದವಿ / ಕಾನೂನು ಪದವಿ
- ಡಿಪ್ಲೊಮಾ / ಪಿಜಿ ಡಿಪ್ಲೊಮಾ / ಎಂಬಿಎ
- ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
(ಹುದ್ದೆಗನುಗುಣವಾಗಿ ಅರ್ಹತೆ ಅನ್ವಯಿಸುತ್ತದೆ)
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷ (ಜನವರಿ 1, 2026ರಂತೆ)
- ಗರಿಷ್ಠ ವಯಸ್ಸು: ಹುದ್ದೆಯ ಪ್ರಕಾರ
- ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ
ವೇತನ ವಿವರ
- ಲ್ಯಾಬ್ ಅಸಿಸ್ಟಂಟ್: ₹19,000/–
- ಜೂನಿಯರ್ ಟ್ರಾನ್ಸ್‌ಲೇಟರ್, ಇನ್ಸ್‌ಪೆಕ್ಟರ್, ವೈಜ್ಞಾನಿಕ ಸಹಾಯಕ: ₹35,400/–
- ಇತರೆ ಹುದ್ದೆಗಳು: ₹44,900/– (ಮಾಸಿಕ)
ಅರ್ಜಿ ಶುಲ್ಕ
- ಸಾಮಾನ್ಯ ವರ್ಗ: ₹500
- SC / ST / PwBD / ಮಾಜಿ ಸೈನಿಕರು / ಅಲ್ಪಸಂಖ್ಯಾತರು / EBC: ₹250
ಆಯ್ಕೆ ಪ್ರಕ್ರಿಯೆ
- ಆನ್‌ಲೈನ್ ಲಿಖಿತ ಪರೀಕ್ಷೆ
- ಅನುವಾದ ಪರೀಕ್ಷೆ / ಕೌಶಲ್ಯ ಪರೀಕ್ಷೆ (ಅನ್ವಯಿಸುವ ಹುದ್ದೆಗಳಿಗೆ)
- ದಾಖಲೆ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ
- RRB ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ
- ಅಧಿಸೂಚನೆಯಲ್ಲಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
👉 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 29, 2026
Views: 74